ನಾಪೆÇೀಕ್ಲು, ನ. 12: ಟಿಪ್ಪು ಜಯಂತಿ ಸಂದರ್ಭ ಸರಕಾರದ ಕಾರ್ಯಕ್ರಮದಲ್ಲಿ ಅರೆ ನಗ್ನ ಚಿತ್ರ ವೀಕ್ಷಣೆಯಲ್ಲಿ ತಲ್ಲೀನರಾಗಿದ್ದ ಕರ್ನಾಟಕ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ಕೂಡಲೇ ರಾಜಿನಾಮೆ ನೀಡಬೇಕೆಂದು ಕೊಡಗು ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಎಂ.ಜಿ.ಜಾಹೀರ್ ಒತ್ತಾಯಿಸಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಆಡಳಿತದ ಚುಕ್ಕಾಣಿ ಹಿಡಿಯಲಿದ್ದು, ವಕ್ಫ್ ಬೋರ್ಡ್ನಿಂದ ಕಬಳಿಸಲಾದ ಲಕ್ಷಾಂತರ ಮೌಲ್ಯದ ಆಸ್ತಿಯನ್ನು ಹಿಂಪಡೆÉದು ಅಲ್ಪ ಸಂಖ್ಯಾಂತರ ಕಲ್ಯಾಣಕ್ಕಾಗಿ ಅದನ್ನು ಉಪಯೋಗಿಸಲಾಗುವದು ಎಂದು ತಿಳಿಸಿದರು. ದೇಶದ ಪ್ರಧಾನಿ ನರೇಂದ್ರ ಮೋದಿ ನುಡಿದಂತೆ ನಡೆದ ಪ್ರಧಾನಿ ಎಂದ ಅವರು ಕಪ್ಪು ಹಣ ತಡೆಗಟ್ಟಲು ಕಟ್ಟು ನಿಟ್ಟಿನ ಕ್ರಮ ಕೈಗೊಂಡಿರುವದು ಶ್ಲಾಘನೀಯ ಎಂದರು.