ಗೋಣಿಕೊಪ್ಪಲು, ನ. 23: ಕೂರ್ಗ್ ಕ್ರಿಕೆಟ್ ಅಕಾಡೆಮಿಯಿಂದ ಅಂತರ ಶಾಲಾ ಮಟ್ಟದ 16 ವರ್ಷದೊಳಗಿನ ಜಿಲ್ಲಾ ಮಟ್ಟದ ಕ್ಲಬ್ ಮಹೇಂದ್ರ ಕ್ರಿಕೆಟ್ ಪಂದ್ಯಾವಳಿ ಡಿ. 5ರಿಂದ ಆರಂಭಗೊಳ್ಳಲಿದೆ ಎಂದು ಕೂರ್ಗ್ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕುಮಾರ್ ಅಪ್ಪಚ್ಚು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಶಾಲಾ ಮೈದಾನದಲ್ಲಿ ನಡೆಯಲಿರುವ ಟೂರ್ನಿಯ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಗಳು ಮಂಗಳೂರು ವಲಯ ಮಟ್ಟದ ಪಂದ್ಯಾವಳಿಯಲ್ಲಿ ಸ್ಪರ್ಧಿಸಲಿವೆ ಎಂದು ತಿಳಿಸಿದರು.
ಈ ಬಾರಿ 14 ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ಶಾಲಾ ತಂಡಗಳ ಮೂಲಕ ಆಡಬಹುದು. ಒಂದೊಮ್ಮೆ ತಂಡವಾಗಿ ಆಡಲು ಆಟಗಾರರು ಒಂದೇ ಶಾಲೆಗಳಲ್ಲಿ ಸಿಗದಿದ್ದಲ್ಲಿ ಪ್ರತ್ಯೇಕ ತಂಡವಾಗಿ ಆಡಲು ಅವಕಾಶ ನೀಡಲಾಗುವದು ಎಂದರು.
ಪಂದ್ಯಾವಳಿಯಲ್ಲಿ ಉತ್ತಮ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಪ್ರದರ್ಶನ ನೀಡುವ ಆಟಗಾರರಿಗೆ ವಿಶೇಷ ಬಹುಮಾನ ನೀಡಲಾಗುವದು. ಆಟಗಾರರು ತಮ್ಮ ಜನನ ಪ್ರಮಾಣ ಪತ್ರದ ನಕಲಿಯೊಂದಿಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ 9900925190, 9448647465 ಸಂಖ್ಯೆಯನ್ನು ಸಂಪರ್ಕಿಸ ಬಹುದಾಗಿದೆ.
ಗೋಷ್ಠಿಯಲ್ಲಿ ಕಾರ್ಯದರ್ಶಿ ಅರುಣ್ ಚೆಂಗಪ್ಪ ಉಪಸ್ಥಿತರಿದ್ದರು.