ಮಡಿಕೇರಿ, ಡಿ. 31: ‘ಕೊಡಗಿನ ಅವಿಭಕ್ತ ಕುಟುಂಬ ಪದ್ಧತಿ: ನಾಡು-ನುಡಿಯ ಸಂಬಂಧಗಳು ಎನ್ನುವ ವಿಷಯದಲ್ಲಿ ರಚಿಸಿದ ಮಹಾ ಪ್ರಬಂಧಕ್ಕೆ ಬೆಂಗಳೂರು ನಿವಾಸಿ ಹಾಗೂ ಓಷಿಯಾನಿಕ್ ಕಾಲೇಜ್ ಆಫ್ ಹೈಯರ್ ಎಜ್ಯುಕೇಷನ್ ಸಂಸ್ಥೆಯ ಮಾಲೀಕ ನಡಿಕೇರಿಯಂಡ ತೇಜ್ ಪೂವಯ್ಯ ಅವರಿಗೆ ಡಾಕ್ಟರೇಟ್ ಪದವಿ ದೊರಕಿದೆ.

ಈ ಮಹಾ ಪ್ರಬಂಧವನ್ನು ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ಡಾ. ವಿಜಯ್ ಪೂಣಚ್ಚ ನಡಿಕೇರಿಯಂಡ ಇವರು ಈ ಮಹಾ ಪ್ರಬಂಧಕ್ಕೆ ಮಾರ್ಗದರ್ಶನ ಮಾಡಿದ್ದಾರೆ. ಸಾಹಿತ್ಯ, ಕಲೆ ಮತ್ತು ಕೊಡಗಿನ ಚರಿತ್ರೆಗೆ ಸಂಬಂಧಪಟ್ಟ ವಿಷಯಗಳಲ್ಲಿ ಆಸಕ್ತಿ ಹೊಂದಿರುವ ನಡಿಕೇರಿಯಂಡ ತೇಜ್ ಪೂವಯ್ಯ ಅವರು ಸುಮಾರು 25 ವರ್ಷಗಳಿಂದ ತಮ್ಮನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಪಾಲಂಗಾಲ ಗ್ರಾಮದ ನಡಿಕೇರಿಯಂಡ ದಿ. ಮಾಚಯ್ಯ ಅವರ ಪುತ್ರರಾಗಿದ್ದಾರೆ.