ಶನಿವಾರಸಂತೆ, ನ.27: ನಿಡ್ತ ಪಂಚಾಯಿತಿ ವ್ಯಾಪ್ತಿಯ ಮುಳ್ಳೂರು ರಸ್ತೆಯಲ್ಲಿ ಟ್ರ್ಯಾಕ್ಟರ್ (ಕೆ.ಎ. 12 ಟಿ. 4971)ನ ಚಾಲಕ ಅತಿ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿ ಎದುರಿನಿಂದ ಬರುತ್ತಿದ್ದ ಮೋಟಾರ್ ಸೈಕಲ್ (ಕೆ.ಎ. 12 ಎಲ್. 7891)ಗೆ ಡಿಕ್ಕಿ ಪಡಿಸಿದ ಪರಿಣಾಮ ಬೈಕ್ ಸವಾರನ ಕಾಲಿಗೆ ಗಾಯವಾಗಿದ್ದು, ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಳ್ಳೂರು ಗ್ರಾಮದ ನಿವಾಸಿ ವಿಜಿಕುಮಾರ್ ಎಂಬವರು ತಮ್ಮ ಟ್ರ್ಯಾಕ್ಟರ್‍ನ್ನು ಅತಿವೇಗ, ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಬರುತ್ತಿದ್ದ ಮುಳ್ಳೂರು ಗ್ರಾಮದ ಪ್ರಮೋದ್ ಎಂಬವರ ಮೋಟಾರ್ ಸೈಕಲ್‍ಗೆ ಡಿಕ್ಕಿ ಪಡಿಸಿದ ಪರಿಣಾಮ ಪ್ರಮೋದ್ ರಸ್ತೆಗೆ ಬಿದ್ದು ಬಲದ ಕಾಲಿಗೆ ಗಾಯವಾಗಿದ್ದು, ಗಾಯಾಳುವನ್ನು ಹಾಸನದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಮುಳ್ಳೂರು ಗ್ರಾಮದ ನಿವಾಸಿ ಎಂ.ಪಿ. ಮೋಹನ್ ಅವರು ಶನಿವಾರಸಂತೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಅನ್ವಯ ಪೊಲೀಸ್ ಠಾಣೆಯ ಸಹಾಯಕ ಠಾಣಾಧಿಕಾರಿ ಹೆಚ್.ಎಂ. ಗೋವಿಂದ್ ಟ್ರ್ಯಾಕ್ಟರ್ ಹಾಗೂ ಮೋಟರ್ ಸೈಕಲನ್ನು ವಶಪಡಿಸಿಕೊಂಡು ಆರೋಪಿ ವಿಜಿಕುಮಾರ್ ಅವರ ವಿರುದ್ಧ ಪ್ರಕರಣ ದಾಖಲಿಸಿರುತ್ತಾರೆ.