ಮಡಿಕೇರಿ, ಡಿ. 20: ರೋಟರಿ ಮಿಸ್ಟಿ ಹಿಲ್ಸ್, ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘ ಹಾಗೂ ಮುಳಿಯ ಫೌಂಡೇಶನ್ ವತಿಯಿಂದ ಟ್ಯಾಲೆಂಟ್ ಅವಾರ್ಡ್ ಸ್ಪರ್ಧೆ ಭಾರತೀಯ ವಿದ್ಯಾಭವನದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ನೂಪುರ ಭ್ರಮರಿಯ ಪ್ರಧಾನ ಸಂಪಾದಕಿ ಮತ್ತು ಭ್ರಮರಿ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಮನೋರಮ ಅವರು ಉದ್ಘಾಟಿಸಿ, ಮಕ್ಕಳಲ್ಲಿ ರಾಮಾಯಣ ಮತ್ತು ಮಹಾಭಾರತದ ಅರಿವನ್ನು ಮೂಡಿಸುವದರಿಂದ ನಮ್ಮ ಪುರಾತನ ಸಂಸ್ಕøತಿಯ ತಿಳುವಳಿಕೆ ಮೂಡಿಸಿದಂತಾಗುವದು ಎಂದರು. ಸಂಘದ ಬರಹಗಾರರ ಅಧ್ಯಕ್ಷೆ ಕಸ್ತೂರಿ ಗೋವಿಂದಮಯ್ಯ ಅವರು ಪ್ರಾಸ್ತಾವಿಕ ಮಾತನಾಡಿದರು, ಕೇಶವ್ ಪ್ರಸಾದ್ ಮುಳಿಯ ಅವರು ಅಧ್ಯಕ್ಷತೆ ವಹಿಸಿದ್ದು ರೋ. ಸಂದೀಪ್ ಅಥಿತಿಗಳ ಪರಿಚಯಿಸಿದರು. ನಿರ್ಣಾಯಕರಾಗಿ ಶಿವದೇವಿ ಅವನೀಶ್ ಚಂದ್ರ, ಶೋಭಾ ಸುಬ್ಬಯ್ಯ, ಶಫಾಲಿ ರೈ ಸಹಕರಿಸಿದರು. ನಮಿತಾ ರೈ, ನಿರೂಪಿಸಿದರೆ, ವಿಜಯಲಕ್ಷ್ಮಿ ಪ್ರಾರ್ಥಿಸಿದರು. ಕಾರ್ಯಕ್ರಮ ನಿರ್ವಹಣೆಯನ್ನು ಕೃಷ್ಣವೇಣಿ ಪ್ರಸಾದ್ ಮುಳಿಯ ಮತ್ತು ಲೀಲಾ ದಯಾನಂದ್ ನಡೆಸಿದರು, ಡಾ. ನವೀನ್ ಅವರು ಧನ್ಯವಾದ ಮಾಡಿದರು.

ವಿಜೇತರು

ಭಾಷಣ: ಪ್ರಥಮ: ಅನನ್ಯ ಕಾವೇರಿ -ಶ್ರೀರಾಮಟ್ರಸ್ಟ್ ನಾಪೋಕ್ಲು, ದ್ವಿತೀಯ: ತಾಸಿನ.ಎಂ.ಎಸ್, ಜಿ.ಪಿ.ಸಿ. ಕಾಲೇಜ್, ತೃತೀಯ: ನೇಹಾ.ಸಿ.ಎ ಕೊಡಗು ವಿದ್ಯಾಲಯ.

ಏಕಪಾತ್ರಾಭಿನಯ: ಪ್ರಥಮ: ಜೀವಿತ. ಶ್ರೀರಾಮ ಟ್ರಸ್ಟ್ ನಾಪೋಕ್ಲು, ದ್ವಿತೀಯ: ಜಾಗೃತಿ.ಕೆ, ಕೊಡಗು ವಿದ್ಯಾಲಯ, ತೃತೀಯ: ವರ್ಷ, ಲಿಟ್ಲಲ್ ಪ್ಲವರ್.

ರಸಪ್ರಶ್ನೆ: 5ರಿಂದ 7ನೇ ತರಗತಿ. ಪ್ರಥಮ: ವಿಹಾನ್ ಮತ್ತು ಕುಲದೀಪ್, ಸೆಂಟ್ ಜೋಸೆಫೆ ಶಾಲೆ. ದ್ವಿತೀಯ: ಮಮತ ಮತ್ತು ಸನ್ನಿಧಿ, ಜಿ.ಎಂ.ಪಿ ಶಾಲೆ. ತೃತೀಯ: ಹರ್ಷಿಕ ಮತ್ತು ರುಚಿ, ಸೆಂಟ್ ಜೋಸೆಫ್ ಶಾಲೆ.

ರಸಪ್ರಶ್ನೆ: 8ರಿಂದ 10ನೇ ತರಗತಿ. ಪ್ರಥಮ: ಪೊನ್ನಮ್ಮ ಮತ್ತು ಕೇಶವ್ ಶ್ರೀರಾಮ ಟ್ರಸ್ಟ್ ನಾಪೋಕ್ಲು, ದ್ವಿತೀಯ: ಚಶಿಕ ಪೆಮ್ಮಯ್ಯ ಮತ್ತು ಸುಬ್ಬಯ್ಯ ಕೆ.ಎಸ್ ಶ್ರೀ ರಾಮ ಟ್ರಸ್ಟ್ ನಾಪೋಕ್ಲು, ತೃತೀಯ: ಅಂಜಲಿ ಪಿ.ಸಿ, ಪ್ರಥಿಕ್ ಪಿ.ಟಿ. ಮರಗೋಡು ಹೈಸ್ಕೂಲ್, ತೃತೀಯ: ಭೂಮಿಜಾ.ಸಿ.ಎಸ್, ನಿಲಾಂಜನ, ಕೊಡಗು ವಿದ್ಯಾಲಯ.