ಮಡಿಕೇರಿ, ಸೆ. 23: ಇಟಲಿಯ ಆಂಡ್ರಿಯಾದಲ್ಲಿ ನಡೆದ 12ನೇ ಜೂನಿಯರ್ ಮತ್ತು 7ನೇ ವೆಟರನ್ ಟೆಕ್ವಾಂಡೋ ವಿಶ್ವ ಚಾಂಪಿಯನ್ ಶಿಪ್‍ನಲ್ಲಿ ಕೊಡಗಿನ ಕುವರಿ ನಂಗಾರು ದಿವ್ಯ ಕಂಚಿನ ಪದಕ ಪಡೆದು ದೇಶಕ್ಕೆ ಹೆಮ್ಮೆಯನ್ನು ತಂದಿದ್ದಾಳೆ.

ಕಳೆದ ಮೂರು ವರ್ಷಗಳಲ್ಲಿ ಈಕೆ ರಾಜ್ಯಮಟ್ಟದಲ್ಲಿ 2 ಚಿನ್ನ, ರಾಷ್ಟ್ರಮಟ್ಟದಲ್ಲಿ 4 ಚಿನ್ನ ಹಾಗೂ ಏಷ್ಯಾಮಟ್ಟದಲ್ಲಿ 1 ಚಿನ್ನ, ಒಟ್ಟು 7 ಚಿನ್ನದ ಪದಕಗಳನ್ನು ಗೆದ್ದಿದ್ದು, ಮುಂದಿನ ಒಲಂಪಿಕ್‍ನಲ್ಲಿ ಭಾಗವಹಿಸುವ ಕನಸು ಹೊಂದಿದ್ದಾಳೆ.

ಈಕೆ ಬೆಂಗಳೂರಿನಲ್ಲಿ ನೆಲೆಸಿರುವ ನಂಗಾರು ಪ್ರಭಾಕರ ಮತ್ತು ಕುಸುಮಾವತಿ ದಂಪತಿಗಳ ಪುತ್ರಿಯಾಗಿದ್ದಾಳೆ.