ಮಡಿಕೇರಿ, ನ. 19: ವಿಧಾನ ಪರಿಷತ್ ಶಾಸಕ ಎಂ.ಪಿ. ಸುನಿಲ್ ಸುಬ್ರಮಣಿ ಅವರು ವೀರಾಜಪೇಟೆ ತಾಲೂಕಿನ ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆಯನ್ನು ವಿಚಾರಿಸಿದರು.

ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿಯಲ್ಲಿ ಪಿ.ಡಿ.ಓ. ಕವಿತ ಅವರಿಂದ ಗ್ರಾಮ ಪಂಚಾಯತಿಯ ಯೋಜನೆಗಳು, ಕಾರ್ಯಕ್ರಮಗಳು ಹಾಗೂ ಕಾಮಗಾರಿಗಳ ಅನುಷ್ಠಾನದ ಬಗ್ಗೆ ಮಾಹಿತಿ ಪಡೆದು ಪರಿಶೀಲಿಸಿದರು. ಸಾರ್ವಜನಿಕ ರೊಂದಿಗೆ ಅಭಿವೃದ್ಧಿ ನಿಟ್ಟಿನಲ್ಲಿ ಸಮಾಲೋಚನೆ ನಡೆಸಿದರು. ಕಳೆದ ಸಾಲಿನಲ್ಲಿ ಶೇ. 80 ರಷ್ಟು ಕಂದಾಯ ವಸೂಲಾಗಿದ್ದು, ಪ್ರಸ್ತುತ ಸಾಲಿನಲ್ಲಿ ಶೇ. 100 ಕಂದಾಯ ವಸೂಲಿ ಮಾಡಲು ಶಾಸಕರು ಸೂಚಿಸಿದರು. ಅಲ್ಲದೆ ಶೌಚಾಲಯಗಳ ನಿರ್ಮಾಣ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಮುಗಿಸಲು ಸೂಚಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಮಂತ್ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣ, ತಾಲೂಕು ಬರ ಎಂದು ಘೋಷಣೆ ಯಾಗಿದ್ದು, ಇದರಡಿ ಹೆಚ್ಚಾಗಿ ದಕ್ಷಿಣ ಕೊಡಗಿಗೆ ಅನುದಾನಗಳನ್ನು ಬಿಡುಗಡೆಗೆ ಒತ್ತಾಯಿಸಿದರು. ಇಲ್ಲಿ ಕಾಲೋನಿಗಳು ಹೆಚ್ಚಾಗಿದ್ದು, ನೀರಿನ ಅಭಾವವಾಗದಿರಲು ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.

ಬಿ.ಜೆ.ಪಿ. ಸ್ಥಾನೀಯ ಸಮಿತಿ ಅಧ್ಯಕ್ಷ ಕಟ್ಟೆರ ಈಶ್ವರ ಅವರು ಬಾವಿಗಳಿಗೆ ಬುಷ್ ಹಾಕಿಸಲು ಅನುದಾನ ನೀಡಲು ಮನವಿ ಮಾಡಿದರು. ಬರದಿಂದ ಬೆಳೆಗಳು ನಾಶವಾಗುತ್ತಿದೆ. ರೈತರು ಕಷ್ಟದಲ್ಲಿದ್ದಾರೆ. ಈ ಸಾಲಿನಲ್ಲಿ ರೈತರ ಸಾಲ ಮನ್ನಾ ಮಾಡÀಲು ಕ್ರಮವಹಿಸಲು ಮನವಿ ಮಾಡಿದರು.

ಬಿ.ಜೆ.ಪಿ. ತಾಲೂಕು ಅಧ್ಯಕ್ಷರೂ, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಅರುಣ್ ಭೀಮಯ್ಯ ಅವರು 2014-15ನೇ ಸಾಲಿನಲ್ಲಿ ಮಳೆಯಿಂದ ಆದ ಹಾನಿಗೆ ಸೂಕ್ತ ಪರಿಹಾರ ಹಣ ಬಂದಿಲ್ಲ. ಈ ಬಗ್ಗೆ ಪರಿಹಾರ ಹಣ ಬಿಡುಗಡೆ ಮಾಡಿಸಲು ಮನವಿ ಮಾಡಿದರು.

ಇದೇ ಸಂದರ್ಭ ಮಾತನಾಡಿದ ಸುನಿಲ್ ಸುಬ್ರಮಣಿ ಅವರು ಅಭಿವೃದ್ಧಿ ಕಾರ್ಯದಲ್ಲಿ ಸಮಯ ಪಾಲನೆ, ಜನಪರ ಕಾಳಜಿ, ಅನುಷ್ಠಾನ ಚತುರತೆಯನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪ್ರದರ್ಶಿಸ ಬೇಕು. ನೀರಿಗೆ ನೀರಿನ ಮೂಲ ಹುಡುಕಿ ಗುರುತು ಮಾಡಿ, ಅನುದಾನಗಳನ್ನು ಸದ್ಬಳಕೆ ಮಾದಲು ತಿಳಿಸಿದರು. ಇಲ್ಲದಿದ್ದಲ್ಲಿ ಬಿಡುಗಡೆ ಯಾದ ಅನುದಾನ ಪೆÇೀಲಾಗುತ್ತದೆ. ಗ್ರಾಮಗಳ ಅಬಿವೃದ್ಧಿಗೆ ಎಲ್ಲರೂ ಸೇರಿ ದುಡಿಯಲು ಬದ್ಧರಾಗಿರೋಣ ಎಂದರು.

ಭೇಟಿಯ ಸಂದರ್ಭ ವೀರಾಜಪೇಟೆ ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ನೆಲ್ಲಿರ ಚಲನ್ ಕುಮಾರ್, ತಾಲೂಕು ಪಂಚಾಯಿತಿ ಸದಸ್ಯೆ ಪಿ.ಕೆ. ಸರೋಜ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಯಶೋದ, ಪಂಚಾಯಿತಿ ಸದಸ್ಯರು ಹಾಜರಿದ್ದರು.