ಶ್ರೀಮಂಗಲ, ನ. 23: ರಾಜ್ಯದ 7 ಜಿಲ್ಲೆಗಳಲ್ಲಿ ಸಂಚರಿಸಲಿರುವ ಶ್ರೀ ರಾಮಚಂದ್ರಪುರ ಮಠ ಆಯೋಜಿತ ಮಂಗಲ ಗೋಯಾತ್ರೆ 10 ರಥಗಳೊಂದಿಗೆ ಬುಧವಾರ ಟಿ.ಶೆಟ್ಟಿಗೇರಿ ಪಟ್ಟಣಕ್ಕೆ ಆಗಮಿಸಿದಾಗ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಗೋಯಾತ್ರೆಯಲ್ಲಿ ಗೋ ಪ್ರದರ್ಶನ, ಗೋ ಚಿತ್ರ, ಗೋ ಸಂಸ್ಕøತಿ, ಗೋಕಲಾ, ಗೋ ವಾಹನ, ಗೋ ಶಕ್ತಿ, ಗವ್ಯ ಉತ್ಪನ್ನಗಳು, ಗೋ ತುಲಾಬಾರ, ಗೋ ಸಂಸತ್ತು, ಗೋ ಸಂತವಾಣಿ, ಮತ್ತು ಗೋ ಶೋಭಾಯಾತ್ರೆ ರಥಗಳು ಸಂಚರಿಸುತ್ತಿವೆ.
ಮಂಗಲ ಗೋಯಾತ್ರೆಯಲ್ಲಿ ಪ್ರಮುಖರಾದ ಚಿ.ನಾ. ಸೋಮೇಶ್, ಕೆ.ಎಸ್. ದೇವಯ್ಯ ನೇತೃತ್ವ ವಹಿಸಿದ್ದರು.
ಟಿ.ಶೆಟ್ಟಿಗೇರಿಗೆ ಗೋಯಾತ್ರೆ ಆಗಮಿಸಿದಾಗ ಗ್ರಾ.ಪಂ. ಅಧ್ಯಕ್ಷ ಮಚ್ಚಮಾಡ ಸುಮಂತ, ವೀರಾಜಪೇಟೆ ಕ್ಷೇತ್ರ ಬಿ.ಜೆ.ಪಿ. ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ಬಿ.ಜೆ.ಪಿ. ಸ್ಥಾನೀಯ ಸಮಿತಿ ಅಧ್ಯಕ್ಷ ಕಟ್ಟೇರ ಈಶ್ವರ,ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಂಡಿಯಂಗಡ ಕರುಂಬಯ್ಯ, ನಿರ್ದೇಶಕ ಕುಂಞಂಗಡ ಕೃಷ್ಣ, ಗ್ರಾ.ಪಂ. ಸದಸ್ಯ ಚೆಟ್ಟಂಗಡ ಕರುಂಬಯ್ಯ ಸೇರಿದಂತೆ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು.