ಮಡಿಕೇರಿ, ನ. 5: ಟಿಪ್ಪು ಜಯಂತಿ ವಿರೋಧಿಸಿ ಬೇಂಗೂರು ಗ್ರಾ.ಪಂ. ವ್ಯಾಪ್ತಿಯ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಗ್ರಾ.ಪಂ. ಅಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.
ಟಿಪ್ಪುವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡು ಕೊಡಗಿನಲ್ಲಿ ಅಶಾಂತಿ ಅರಾಜಕತೆಯನ್ನು ಉಂಟು ಮಾಡಲು ಹೊರಟಿರುವ ಸರಕಾರದ ನಿಲುವಿಗೆ ಚೇರಂಬಾಣೆ, ಬೇಂಗೂರು ಪಂಚಾಯಿತಿ ವ್ಯಾಪ್ತಿಯ ಹಿಂದೂ ಸಂಘಟನೆಗಳು ಹಾಗೂ ಗ್ರಾಮಸ್ಥರು ಟಿಪ್ಪು ಜಯಂತಿಯನ್ನು ವಿರೋಧಿಸಿ ಗ್ರಾ.ಪಂ. ಅಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಟಿಪ್ಪು ಹಿಂದೂ ಧರ್ಮದ ವಿರೋಧಿ ಎಂಬದಕ್ಕೆ ಇತಿಹಾಸದಲ್ಲಿ ನೈಜವಾದ ಸಾಕ್ಷಿ ಪುರಾವೆಗಳಿವೆ. ಆದರೆ ಇಂದು ರಾಜ್ಯ ಸರಕಾರವು ಸ್ವಾರ್ಥ ರಾಜಕೀಯ ಲಾಭಕ್ಕಾಗಿ ನೈಜ ಇತಿಹಾಸವನ್ನು ತಿರುಚಿ ಸತ್ಯಕ್ಕೆ ಮಸಿ ಬಳಿಯುವ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿ, ಟಿಪ್ಪು ಜಯಂತಿಯನ್ನು ಕೊಡಗಿನಲ್ಲಿ ಆಚರಿಸದಂತೆ ಮನವಿ ಮಾಡಲಾಯಿತು.