ಮಡಿಕೇರಿ, ಅ. 7: ಕಳೆದ ವರ್ಷದಿಂದ ಆರಂಭಿಸಿದ ಟಿಪ್ಪು ಜಯಂತಿಯಿಂದಾಗಿ ಜಿಲ್ಲೆಯ ಶಾಂತಿ ಕದಡಿದೆ. ಟಿಪ್ಪುವಿನಿಂದ ಕೊಡವ ಜನಾಂಗಕ್ಕೆ ಭಾರೀ ಹಾನಿಯಾಗಿದ್ದು, ಈ ಜಯಂತಿಯನ್ನು ಕೈ ಬಿಡಬೇಕೆಂದು ಆಗ್ರಹಿಸಿ ಮಡಿಕೇರಿ ಕೊಡವ ಸಮಾಜದಿಂದ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಸಮಾಜದ ಅಧ್ಯಕ್ಷ ಕೊಂಗಾಂಡ ಎಸ್. ದೇವಯ್ಯ ಅವರ ನೇತೃತ್ವದಲ್ಲಿ ಕೊಡವ ಸಮಾಜ ಆಡಳಿತ ಮಂಡಳಿಯ ಎಲ್ಲಾ ಪದಾಧಿಕಾರಿಗಳು ಇಂದು ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಅವರನ್ನು ಭೇಟಿಯಾಗಿ ಈ ಬಗ್ಗೆ ಮನವಿ ಸಲ್ಲಿಸಿದರು.

ಕರ್ನಾಟಕ ಕಾಂಗ್ರೆಸ್ ಸರಕಾರ ವೈಭವೀಕರಿಸಿರುವಂತೆ ಟಿಪ್ಪು ಮಹಾನ್ ದೇಶಭಕ್ತ ಖಂಡಿತಾ ಅಲ್ಲ. ಎಲ್ಲಾ ರಾಜಾಡಳಿತದಲ್ಲಿದ್ದಂತೆ ತನ್ನ ಎದುರಾಳಿ ರಾಜರನ್ನು ಯುದ್ದದ ಮೂಲಕ ಜಯಿಸಿ ತನ್ನ ರಾಜ್ಯವನ್ನು ವಿಸ್ತರಿಸಿದವನನ್ನು ದೇಶಭಕ್ತ ಎಂದು ಹೇಳವದು ಸರಿಯಲ್ಲ.

(ಮೊದಲ ಪುಟದಿಂದ) 1780ರ ಆಸುಪಾಸಿನ ಕಾಲಘಟ್ಟದಲ್ಲಿ ತನ್ನ ಅಧಿಕಾರದ ಅವಧಿಯಲ್ಲಿ ರಾಜ್ಯ ವಿಸ್ತರಣೆಯ ನೆಪಒಡ್ಡಿ ದಂಡೆತ್ತಿ ಹೋದ ಕಡೆಯಲ್ಲೆಲ್ಲಾ ಹಿಂದೂಗಳನ್ನೇ ಕೇಂದ್ರವಾಗಿರಿಸಿಕೊಂಡು, ಹಿಂದುಗಳ ಮೇಲೆ ದೌಜ್ರ್ಯನ್ಯವೆಸಗಿರುವ ದಾಖಲೆಗಳು ಬಹಳಷ್ಟಿವೆ. ಕರ್ನಾಟಕದ ಮೇಲೆ ದಂಡೆತ್ತಿ ಬಂದಾಗ ಮತ್ತೆ ಹಿಂದುಗಳೇ ಟಿಪ್ಪುವಿನ ಕೆಂಗಣ್ಣಿಗೆ ಗುರಿಯಾಗಿ, ಹಿಂದುಗಳ ಭಾವನಾತ್ಮಕ, ಶ್ರದ್ಧಾಕೇಂದ್ರವಾದ ದೇವಸ್ಥಾನಗಳನ್ನು ಧ್ವಂಸ ಮಾಡಿರುವದಕ್ಕೆ ಇಂದಿಗೂ ಅಲ್ಲಲ್ಲಿ ಅಳಿದುಳಿದಿರುವ ಭಗ್ನಾವಶೇಷವಾದ ದೇವಾಲಯಗಳು, ಭಿನ್ನಗೊಂಡಿರುವ ದೇವತಾ ಮೂರ್ತಿಗಳು ಮೂಕ ಸಾಕ್ಷಿಯಾಗಿ ನಮ್ಮ ಕಣ್ಣೆದುರಿಗಿದೆ. ಇಂತಹ ಅವಶೇಷಗಳು ಕೊಡಗು ಜಿಲ್ಲೆಯಲ್ಲಿಯೂ ಬಹಳಷ್ಟಿವೆ. ತೀವ್ರ ಮತಾಂಧüನಾಗಿದ್ದ ಟಿಪ್ಪು ತಾನು ಆಕ್ರಮಣ ಮಾಡಿದ ಕಡೆಯಲ್ಲೆಲ್ಲಾ ಹಿಂದೂಗಳನ್ನು ಬಲವಂತವಾಗಿ ಇಸ್ಲಾಂ ಪಂಥಕ್ಕೆ ಮತಾಂತರಿಸಿ, ತನ್ನ ಸೇನೆಯಲ್ಲಿ ದುಡಿಯುವಂತೆ ಮಾಡಿದ ನಿದರ್ಶನಗಳು ಇತಿಹಾಸದಲ್ಲಿದೆ.

1785ರಲ್ಲಿ ಟಿಪ್ಪು ಕೊಡಗು ಪ್ರಾಂತ್ಯದ ಮೇಲೆ ಹಲವು ಭಾರಿ ದಂಡೆತ್ತಿ ಬಂದ ಉಲ್ಲೇಖ ಇತಿಹಾಸದಲ್ಲಿ ದೊರೆಯುತ್ತದೆ. ಆತ ಮೈಸೂರು ಸೀಮೆಯ ಪಿರಿಯಾಪಟ್ಟಣದ ಮೂಲಕ ಜಿಲ್ಲೆಗೆ ನುಸುಳಲೆತ್ನಿಸಿ, ಪ್ರಬಲ ಹಾಗೂ ಬಲಶಾಲಿಗಳಾದ ಕೊಡವ ಜನಾಂಗದವರ ಎದಿರೇಟಿಗೆ ತತ್ತರಿಸಿ ಹಿಮ್ಮೆಟ್ಟಿದ್ದಾನೆ. ಆಗ ಕ್ರೂರಿ ಟಿಪ್ಪುವಿಗೆ ಹೊಳೆದದ್ದು ಕೊಡವರ ಹತ್ಯಾಕಾಂಡ. ಗುಪ್ತ ಮಾಹಿತಿಯಿಂದ ಜಿಲ್ಲೆಯ ಒಳಹೊರಗನ್ನು ಅರಿತಿದ್ದ ಟಿಪ್ಪು ಕೊಡವರ ನರಮೇಧಕ್ಕೆ ಆಯ್ಕೆ ಮಾಡಿಕೊಂಡಿದ್ದು “ದೇವಟ್ ಪರಂಬ್” ಎಂಬ ಸ್ಥಳ. ಮುಗ್ಧತೆಯ ಸೋಗು ಹಾಕಿಕೊಂಡು ಕೊಡಗಿನ ಮೂಲ ಜನಾಂಗವಾದ ಕೊಡವರನ್ನು ದೇವಟ್ ಪರಂಬಿಗೆ ಔತಣಕೂಟದ ನೆಪದಿಂದ ಬರಮಾಡಿಕೊಂಡು, ಆತನನ್ನು ನಂಬಿ ನಿರಾಯುಧರಾಗಿ ಬಂದ ಕೊಡವ ಜನಾಂಗದ ಗಂಡಸರು, ಹೆಂಗಸರನ್ನು ಮಾನವೀಯತೆ ಮರೆತು ತನ್ನ ಸೈನಿಕರ ಮೂಲಕ ಮೋಸದಿಂದ ಕಗ್ಗೊಲೆಗೈದ ವ್ಯಕ್ತಿ ಟಿಪ್ಪು ಎಂದು ಮನವಿಯಲ್ಲಿ ಗಮನ ಸೆಳೆಯಲಾಗಿದೆ.

ಅಂದು ಟಿಪ್ಪುವಿನಿಂದ ಹತರಾದವರಲ್ಲಿ ಅದೆಷ್ಟೋ ಕೊಡವ ಕುಟುಂಬಕ್ಕೆ ಕುಟುಂಬವೇ ಸರ್ವನಾಶವಾಗಿದೆ, ಏನೂ ಅರಿಯದ ಎಷ್ಟೋ ಕಂದಮ್ಮಗಳು ಪ್ರಾಣ ಕಳೆದುಕೊಂಡಿವೆ. ತಾಯ್ತನದ ಸುಖವನ್ನು ಅನುಭವಿಸಲು ಕಾತರದಿಂದಿದ್ದ ಎಷ್ಟೋ ಗರ್ಭಿಣಿ ಸ್ತ್ರೀಯರೂ ಕೂಡ ಕೊಲ್ಲಲ್ಪಟ್ಟಿದ್ದಾರೆ. ಹೀಗೆ ಕ್ರೂರ ರೀತಿಯಲ್ಲಿ ಕೊಲ್ಲಲ್ಪಟ್ಟ ಕೊಡವ ಜನಾಂಗದವರ ಸಂಖ್ಯೆ ಎಷ್ಟೋ ಸಹಸ್ರ. ನಾಡಿನ ವಿದ್ವಾಂಸರು, ಇತಿಹಾಸಕಾರರು ತಮ್ಮ ಅಧ್ಯಯನದಲ್ಲಿ, ಲೇಖನದಲ್ಲಿ ವಿವರವಾಗಿ ಉಲ್ಲೇಖಿಸಿರುವುದನ್ನು ಬುದ್ಧಿವಂತರ್ಯಾರೂ ಅಲ್ಲಗೆಳೆಯಲು ಸಾಧ್ಯವಿಲ್ಲ ಅಲ್ಲವೇ......?

ಅಂದು ದೇವಟ್ ಪರಂಬ್ ಅಥವಾ ಕೊಡಗು ಜಿಲ್ಲೆಯಲ್ಲಿ ಟಿಪ್ಪುವಿನ ದೌರ್ಜನ್ಯ, ಕ್ರೂರತನಕ್ಕೆ, ಮತಾಂಧತೆಗೆ ಬಲಿಯಾಗಿ, ಮತಾಂತರಗೊಂಡ ಅದೆಷ್ಟೋ ಕುಟುಂಬಗಳು ಇಂದಿಗೂ ಕೊಡವ ಮುಸ್ಲಿಮರಾಗಿ, ಕೊಡವ ಮನೆ ಹೆಸರುಗಳೊಂದಿಗೆ ತಮ್ಮ ಕೊಡವ ಮೂಲ ಸಂಪ್ರದಾಯವನ್ನು ಆಚರಿಸುತ್ತಾ ಬದುಕುತ್ತಿದ್ದಾರೆ.

ಇಂತÀಹ ಎಷ್ಟೋ ನಿದರ್ಶನಗಳು ಟಿಪ್ಪುವಿನ ಆಡಳಿತ ಅವಧಿಯಲ್ಲಿ ದೇಶದಾದ್ಯಂತ ಕಾಣಸಿಗುತ್ತದೆ. ಅವೆಲ್ಲಾ ಆತನ ರಾಜ್ಯಾಡಳಿತದ ವಿಸ್ತರಣೆಗೆಂದೇ ಮಾಡಿದ್ದರೂ, ಟಪ್ಪುವಿನ ವಿಷÀಯದಲ್ಲಿ ಅಮಾನವೀಯತೆಯೇ ಎದ್ದು ಕಾಣುತ್ತದೆ.

ಇಂತÀಹ ಟಿಪ್ಪುವನ್ನು ಮಹಾನ್ ದೇಶಭಕ್ತ ಎಂಬಂತೆ ಬಿಂಬಿಸುವ ಅನಿವಾರ್ಯತೆ ಸರ್ಕಾರಕ್ಕೆ ಒದಗಿಬಂದಿರುವದು ದುರಂತ. ವಿಶೇಷವಾಗಿ ಕೊಡಗು ಜಿಲ್ಲೆಯಲ್ಲಿ ಒಂದು ಪ್ರಮುಖ ಜನಾಂಗ ಹಾಗೂ ಇವರೊಂದಿಗೆ ಮತ್ತಷ್ಟು ಜನಾಂಗದವರನ್ನು ಅಮಾನುಷವಾಗಿ ಕೊಲೆಗೈದಿರುವ ಟಿಪ್ಪುವಿನ ಜನ್ಮ ದಿನಾಚÀರಣೆಯನ್ನು ಆಚರಿಸುವ ಅವಶ್ಯಕತೆ ಇದೆಯೇ ಎಂಬ ಪ್ರಶ್ನೆ ಕಾಡುತ್ತಿದೆ.

ಈಗಾಗಲೇ ಕಳೆದ ವರ್ಷ 2015ರ ನವೆಂಬರ್ 10 ರಂದು ಜಿಲ್ಲೆಯ ಜನತೆಯ ತೀವ್ರ ವಿರೋಧದ ನಡುವೆಯೇ ಸರ್ಕಾರದ ಆದೇಶದ ಮೇರೆ ಟಿಪ್ಪು ಜಯಂತಿಯನ್ನು ಆಚರಿಸಿದ ಸಂದರ್ಭ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನಡೆದ ದುರ್ಘಟನೆ ಇನ್ನೂ ಜನರ ಮನಸ್ಸಿನಿಂದ ಮಾಸಿಲ್ಲ. ಅಂದಿನ ದಿನ ನಡೆದ ಗುಂಪು ಘರ್ಷಣೆಯಲ್ಲಿ ಜಿಲ್ಲೆಯ ಹಿರಿಯರೊಬ್ಬರು ಪ್ರಾಣ ಕಳೆದುಕೊಳ್ಳುವಂತಾಯಿತು, ಮತ್ತೊಂದು ಕೋಮಿನ ಯುವಕನೊಬ್ಬ ಗುಂಡೇಟಿಗೆ ಬಲಿಯಾದ, ಮತ್ತೆಷ್ಟೋ ಮಂದಿ ಗಾಯಾಳುಗಳಾದರು. ಇದಕ್ಕೆಲ್ಲಾ ಕಾರಣ ಸರ್ಕಾರದ ತೀರ್ಮಾನದಂತೆ ನಡೆದ ಟಿಪ್ಪು ಜನ್ಮ ದಿನಾಚರಣೆ.

ಅಂದು ನಡೆದ ಘಟನೆಗಳು ಇಂದೂ ಕೂಡ ಜನರ ಮನಸ್ಸಿನಾಳದಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಹೊಗೆಯಾಡುತ್ತಲೇ ಇದೆ. ಮತ್ತೆ ಈ ವಿರೋಧಗಳ ನಡುವೆಯೇ ಟಿಪ್ಪು ಜನ್ಮ ದಿನಾಚರಣೆಯನ್ನು ಆಚರಿಸಲೇಬೇಕೆಂಬ ಅಂಧಾಭಿಮಾನವನ್ನು ಮುಂದುವರೆಸಿದಲ್ಲಿ ಕೊಡಗು ಜಿಲ್ಲೆಯಲ್ಲಿ ಮತ್ತಷ್ಟು ಜನಾಂಗೀಯ ಸಂಘರ್ಷ, ಘರ್ಷಣೆಗೆ ಅವಕಾಶವಾಗಿ ಕೊಡಗು ಜಿಲ್ಲೆ ಅಶಾಂತಿಯ ಗೂಡಾಗಿ ಪರಿಣಮಿಸುವ ಸಾಧ್ಯತೆಗಳೇ ಹೆಚ್ಚಾಗಿದೆ.

ಜಿಲ್ಲೆಯ ಮೂಲ ಜನಾಂಗವಾಗಿರುವ ಕೊಡವ ಜನಾಂಗದ ಮೇಲೆ ಭಾವನಾತ್ಮಕವಾಗಿ ಘಾಸಿಗೊಳಿಸಿರುವ ಟಿಪ್ಪುವಿನ ಜನ್ಮ ದಿನಾಚರಣೆಯ ನಿರ್ಧಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಆಚರಣೆಯನ್ನು ಕೈ ಬಿಡಬೇಕು.

ಟಿಪ್ಪು ಜನ್ಮ ದಿನಾಚÀರಣೆ ನಿಷೆÉೀಧಿಸುವ ಕುರಿತು ನಮ್ಮ ಮನವಿಯನ್ನು ಸರ್ಕಾರ ಪರಿಶೀಲಿಸಬೇಕು. ಈ ವಿಷÀಯದಲ್ಲಿ ನಮ್ಮ ವಿರೋಧದ ಕಾರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕೊಡವ ಸಮಾಜ ಈ ಮನವಿಯ ಮೂಲಕ ಒತ್ತಾಯಿಸುತ್ತದೆ. ಇದಕ್ಕೂ ಮೀರಿ ತಮ್ಮ ಧೋರಣೆ ಮುಂದುವರೆದಲ್ಲಿ ಮುಂದಾಗಬಹುದಾದ ಅನಾಹುತಗಳಿಗೆ ಸರ್ಕಾರವೇ ಜವಾಬ್ದಾರಿಯಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಮನವಿ ಯಾವದೇ ಧರ್ಮದ, ಜಾತಿಯ ವಿರುದ್ಧ ಅಲ್ಲ ಎಂಬದನ್ನು ಸಹ ಸ್ಪಷ್ಟಪಡಿಸಿ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೊಂಗಂಡ ಎಸ್. ದೇವಯ್ಯ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭ ಉಪಾಧ್ಯಕ್ಷ ಮಣವಟ್ಟಿರ ಚಿಣ್ಣಪ್ಪ, ಕಾರ್ಯದರ್ಶಿ ಅರೆಯಡ ರಮೇಶ್, ಜಂಟಿ ಕಾರ್ಯದರ್ಶಿ ಮಾದೇಟಿರ ಬೆಳ್ಯಪ್ಪ ಹಾಗೂ ಸಮಾಜದ ನಿರ್ದೇಶಕರು ಹಾಜರಿದ್ದರು.