ಮಡಿಕೇರಿ, ಅ. 25: ರಾಜ್ಯ ಸರಕಾರ ನ. 10 ರಂದು ಟಿಪ್ಪು ಜಯಂತಿಯನ್ನು ಆಚರಣೆ ಮಾಡುವದಾಗಿ ಘೋಷಣೆ ಮಾಡಿದೆ. ಜಿಲ್ಲೆಯಲ್ಲಿ ಟಿಪ್ಪು ಜಯಂತಿಯ ಪೂರ್ವ ಸಿದ್ಧತೆಗಳು ಜಿಲ್ಲಾಡಳಿತ ದಿಂದ ಇನ್ನಷ್ಟೇ ಆಗಬೇಕಾಗಿದೆ. ಆದರೆ ಜಿಲ್ಲೆಯ ಬಹುಸಂಖ್ಯಾತ ಸಮಾಜದ ವಿವಿಧ ಸಂಘ-ಸಂಸ್ಥೆಗಳು ಟಿಪ್ಪು ಜಯಂತಿಯನ್ನು ತೀವ್ರವಾಗಿ ವಿರೋಧಿಸಿವೆ.

ಕಳೆದೊಂದು ವರ್ಷಗಳ ಹಿಂದಿನವರೆಗೂ ನವೆಂಬರ್ ಬಂತೆಂದರೆ ಜಿಲ್ಲೆ ಸೇರಿದಂತೆ ಕನ್ನಡ ನಾಡಿನ ಜನತೆಗೆ ನೆನಪಾಗುತ್ತಿದ್ದುದು ಕನ್ನಡ ರಾಜ್ಯೋತ್ಸವ. ಅದ್ಧೂರಿ ಆಚರಣೆಗೆ ಭರದ ಸಿದ್ಧತೆಗಳು ನಡೆಯುತ್ತಿದ್ದವು. ಜಿಲ್ಲಾಡಳಿತ ಸೇರಿದಂತೆ ಕನ್ನಡ ಪರ ಸಂಘಟನೆಗಳು ನ. 1ರ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದವು. ನ. 1ರ ಬಳಿಕವೂ ಕೆಲವು ದಿನಗಳವರೆಗೆ ವಿವಿಧೆಡೆ ರಾಜ್ಯೋತ್ಸವಗಳು ನಡೆಯುತ್ತಿದ್ದವು. ಆದರೆ ಕಳೆದೊಂದು ವರ್ಷಗಳಿಂದೀಚೆಗೆ ಕನ್ನಡ ನಾಡಿನ ಜನತೆ ಕನ್ನಡ ರಾಜ್ಯೋತ್ಸವ ಬದಲು ಟಿಪ್ಪು ಜಯಂತಿಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವಂತಾಗಿದೆ.