ಮಡಿಕೇರಿ, ಅ. 26 : ರಾಜ್ಯದಲ್ಲಿ ಈ ಬಾರಿಯೂ ಟಿಪ್ಪು ಜಯಂತಿ ಆಚರಣೆÉಗೆ ಮುಂದಾದರೆ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವದು ಖಚಿತವೆಂದು ಜಿಲ್ಲಾ ಬಿಜೆಪಿ ಭವಿಷ್ಯ ನುಡಿದಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಮನು ಮುತ್ತಪ್ಪ ಕೊಡಗು ಜಿಲ್ಲೆಯಲ್ಲಿ ಎಲ್ಲರ ವಿರೋಧದ ನಡುವೆಯೂ ಜಯಂತಿ ಆಚರಿಸಲು ಮುಂದಾದರೆ ತೀವ್ರ ರೀತಿಯ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಟಿಪ್ಪು ಸುಲ್ತಾನನ ಹಿಂದೆ ಬಿದ್ದಿರುವ ಕಾಂಗ್ರೆಸ್ ಸರ್ಕಾರದ ಪತÀನ ಶೀಘ್ರ ಆಗಲಿದೆಯೆಂದು ಭವಿಷ್ಯ ನುಡಿದರು. ಸಂಜಯ್ ಖಾನ್ ನೇತೃತ್ವದಲ್ಲಿ ಟಿಪ್ಪುವಿನ ಟಿವಿ ಧಾರಾವಾಹಿ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭ 40 ಮಂದಿ ಸಾವನ್ನಪ್ಪಿದ್ದಲ್ಲದೆ, ಸಂಜಯ್ ಖಾನ್ಗೂ ತೀವ್ರ ಗಾಯಗಳಾಗಿತ್ತು. ಟಿಪ್ಪು ಖಡ್ಗವನ್ನು ದೇಶಕ್ಕೆ ತಂದ ಉದ್ಯಮಿ ವಿಜಯ್ ಮಲ್ಯ ಅವರು ಇಂದು ದೇಶವನ್ನೇ ಬಿಡುವಂತಾಗಿದೆ. ಇದೇ ಪರಿಸ್ಥಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಎದುರಾಗಿದ್ದು, ಟಿಪ್ಪು ಜಯಂತಿಯನ್ನು ಘೋಷಿಸಿದ ನಂತರ ರಾಜ್ಯದಲ್ಲಿ ಅಶಾಂತಿ ಮತ್ತು ಅವ್ಯವಸ್ಥೆಗಳು ತಾಂಡವವಾಡುತ್ತಿದೆ. ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದಿದ್ದು, ಕಾವೇರಿ ನದಿ ವಿವಾದ ತೀವ್ರ ಸ್ವರೂಪವನ್ನು ಪಡೆದುಕೊಂಡಿರುವದಲ್ಲದೆ, ಪೆÇಲೀಸ್ ಅಧಿಕಾರಿಗಳ ಆತ್ಮಹತ್ಯೆ ಪ್ರಕರಣಗಳೂ ನಡೆದವೆಂದು ಮನು ಮುತ್ತಪ್ಪ ಅಭಿಪ್ರಾಯಪಟ್ಟರು. ಈ ಬಾರಿ ಕೂಡ ಟಿಪ್ಪು ಜಯಂತಿ ಆಚರಣೆÉಗೆ ಮುಂದಾದರೆ ಸರ್ಕಾರ ಪತನಗೊಳ್ಳುವದು ಖಚಿತವೆಂದರು.