ಶ್ರೀಮಂಗಲ, ನ. 6 : ವಿವಾದಾತ್ಮಕ ಟಿಪ್ಪು ಜಯಂತಿ ಆಚರಣೆಗೆ

ರಾಜ್ಯ ಸರಕಾರ ಮುಂದಾಗಿರುವದಕ್ಕೆ ಹಿರಿಯ ರಾಜಕಾರಣಿ ಹಾಗೂ ಮಾಜಿ ಸಚಿವ ಎಂ.ಸಿ. ನಾಣಯ್ಯ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಾಳುಗೋಡುವಿನ ಕೊಡವ ಸಮಾಜಗಳ ಒಕ್ಕೂಟದ ಆಶ್ರಯದಲ್ಲಿ ನಡೆಯುತ್ತಿರುವ ಕೊಡವ ಸಾಂಸ್ಕøತಿಕ ನಮ್ಮೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಗ್ಗೆ ಕಳೆದ ವರ್ಷವೇ ವಿರೋಧ ವ್ಯಕ್ತ ಪಡಿಸಿದ್ದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನರ ತೆರಿಗೆ ಹಣದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿದ್ದಾರೆ. ಜನರ ಹಣ ಬಳಸಿ ಸಮಾಜದಲ್ಲಿ ಅಶಾಂತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಟಿಪ್ಪು ಸ್ವತಂತ್ರ್ಯ ಹೋರಾಟಗಾರ ಅಲ್ಲ. ಟಿಪ್ಪು ಎಲ್ಲಾ ರಾಜರಂತೆ ತನ್ನ ಸಾಮ್ರಾಜ್ಯದ ರಕ್ಷಣೆ ಹಾಗೂ ವಿಸ್ತರಣೆಗಾಗಿ ಬ್ರಿಟೀಷರೊಂದಿಗೆ ಯುದ್ಧ ಮಾಡಿದ್ದಾನೆ. ರಾಜ್ಯ ಸರಕಾರ ಟಿಪ್ಪು ಜಯಂತಿ ಆಚರಣೆ ಮಾಡುವ ನಿರ್ಧಾರ ಸರಿ ಅಲ್ಲ. ಬೇರೆ ಸರಕಾರ ಬಂದರೂ ಈ ಜಯಂತಿಯನ್ನು ಆಚರಣೆ ಮಾಡಬಾರದು ಎಂದು ಹೇಳಿದರು. ಈ ಸಂದರ್ಭ ಅವರು ಕೊಡವ ಸಾಂಸ್ಕøತಿಕ ಕೋಲಾಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಮನ ಸೆಳೆದರು.