ಹೆಬ್ಬಾಲೆ, ಜೂ. 15: ಶಿರಂಗಾಲದಲ್ಲಿ ಜೂಜು ಅಡ್ಡೆಯ ಮೇಲೆ ಧಾಳಿ ನಡೆಸಿದ ಪೊಲೀಸರು 6 ಮಂದಿಯನ್ನು ಬಂಧಿಸಿ ರೂ. 2500 ನಗದು ವಶಪಡಿಸಿಕೊಂಡಿದ್ದಾರೆ.ಶಿರಂಗಾಲ ಗ್ರಾಮದ ಬಸ್ ನಿಲ್ದಾಣ ಹಿಂಭಾಗ ಸಾರ್ವಜನಿಕವಾಗಿ ಹಣವನ್ನು ಪಣವಾಗಿರಿಸಿ ಜೂಜಾಟದಲ್ಲಿ ತೊಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಧಾಳಿ ನಡೆಸಿದ ಕುಶಾಲನಗರ ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ಜೆ.ಇ. ಮಹೇಶ್ ಜೂಜಾಟದಲ್ಲಿ ತೊಡಗಿದ್ದವರನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಜಯಪ್ರಕಾಶ, ನಾಗರಾಜ್, ಸುಜಿತ್, ಚಾಲಕ ರಾಜು ಇದ್ದರು.