ಸಿದ್ದಾಪುರ, ಆ. 24: ಜೀಪು - ಬೈಕ್ ಮುಖಾಮುಖಿಯಾದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಸಮೀಪದ ಘಟ್ಟದಳದಲ್ಲಿ ನಡೆದಿದೆ.

ಮಾಲ್ದಾರೆ ಗ್ರಾಮದ ಗೇಟುಹಾಡಿ ನಿವಾಸಿ ಜಯರಾಂ ಎಂಬವರ ಪುತ್ರ ಆನೆ ಕಾವಲುಗಾರನಾಗಿ ಕೆಲಸಮಾಡಿಕೊಂಡಿದ್ದ ಮಂಜು (33) ಎಂಬಾತ ಮನೆಯಿಂದ ಮಡಿಕೇರಿಗೆ ಕೆಲಸದ ನಿಮಿತ್ತ ತೆರಳುತ್ತಿದ್ದ ವೇಳೆ ಘಟ್ಟದಳ ಸಮೀಪದ ಹೆರೂರು ತೋಟದ ತಿರುವಿನ ಬಳಿ ಸಿದ್ದಾಪುರದಿಂದ ಹುಂಡಿಗೆ ತೆರಳುತ್ತಿದ್ದ ಪಿಕಪ್ ಜೀಪ್ ಡಿಕ್ಕಿಹೊಡೆದಿದ್ದು, ರಾಜುವಿನ ತಲೆ, ಕಿವಿ ಹಾಗೂ ಕಾಲಿಗೆ ತೀರ್ವ ಸ್ವರೂಪದ ಗಾಯಗಳಾಗಿದೆ. ಸ್ಥಳೀಯರು ಕೂಡಲೇ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿ ಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮೃತ ರಾಜು, ಪತ್ನಿ ಹಾಗೂ ಈರ್ವರು ಮಕ್ಕಳನ್ನು ಅಗಲಿದ್ದಾರೆ.

ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಜೀಪು ಚಾಲಕ ಬಾಡಗ-ಬಾಣಂಗಾಲದ ಮಠ ನಿವಾಸಿ ಭಾಸ್ಕರ ಎಂಬವರ ವಿರುದ್ಧ ಪ್ರಕರಣ ದಾಖಲಿಸಿ, ದಸ್ತಗಿರಿ ಮಾಡಲಾಗಿದೆ. ಡಿ.ವೈ.ಎಸ್.ಪಿ ಎಸ್.ಬಿ.ಛಬ್ಬಿ, ಮಡಿಕೇರಿ ವೃತ್ತನಿರೀಕ್ಷಕ ಮೇದಪ್ಪ, ಠಾಣಾಧಿಕಾರಿ ಬಿ.ಜಿ.ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.