ಮಡಿಕೇರಿ, ಸೆ. 25: ಜೀಪೊಂದು ಡಿಕ್ಕಿಯಾದ ಪರಿಣಾಮ ಯುವತಿಯೋರ್ವಳು ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ಸಾಗಿಸಲ್ಪಟ್ಟ ಘಟನೆ ನಡೆದಿದೆ.
ಕ್ಲಬ್ ಮಹೀಂದ್ರ ಉದ್ಯೋಗಿಯಾಗಿರುವ ತಾಳತ್ಮನೆಯ ನಿವಾಸಿ ದಿಶಾರೈ ಎಂಬಾಕೆ ನಿನ್ನೆ ರಾತ್ರಿ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಕಾಲೂರಿನ ಪವನ್ ಎಂಬಾತ ಚಾಲಿಸುತ್ತಿದ್ದ ಜೀಪು (ಕೆಎ 12 ಝಡ್ 4854) ಎದುರಿನಿಂದ ಬಂದು ಡಿಕ್ಕಿಯಾಗಿದೆ. ಪರಿಣಾಮ ದಿಶಾರೈ ಮುಖದ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರಿಗೆ ಸಾಗಿಸಲಾಗಿದೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.