ಮಡಿಕೇರಿ, ಸೆ. 15: ಜಿಲ್ಲಾ ಕೇಂದ್ರ ಸೇರಿದಂತೆ ಕೆಲವೆಡೆ ಸ್ವಲ್ಪ ಪ್ರಮಾಣದ ಮಳೆಯಾಗಿದೆ. ಮಡಿಕೇರಿಯಲ್ಲಿ ಬೆಳಗಿನ ಜಾವದಿಂದ ಸುಮಾರು 9 ಗಂಟೆಯವರೆಗೆ ಮಳೆಯಾಗಿದೆ. ಬೆಳಿಗ್ಗೆ ವಿದ್ಯಾರ್ಥಿಗಳು ಶಾಲೆಗೆ ತೆರಳುವ ಸಮಯದಲ್ಲಿ ಮಳೆ ಸುರಿಯುತ್ತಿದ್ದುದರಿಂದ ವಿದ್ಯಾರ್ಥಿಗಳು ಹಾಗೂ ಕೆಲಸಕ್ಕೆ ತೆರಳುವವರು ಇಂದು ಸಮಸ್ಯೆ ಎದುರಿಸುವಂತಾಯಿತು.ಬಳಿಕ ಮಳೆ ಇಳಿಮುಖಗೊಂಡಿತಾದರೂ ಮೋಡ ಕವಿದ ವಾತಾವರಣ ಮುಂದುವರೆದಿತ್ತು. ಮಡಿಕೇರಿ ನಗರಕ್ಕೆ ಕೃಷಿ ವಿವಿಯ ಮಾಹಿತಿಯಂತೆ ಈ ತನಕ ಒಟ್ಟು 95.78 ಇಂಚು ಮಳೆಯಾಗಿದೆ. ಮಡಿಕೇರಿ ನಗರದ ಒತ್ತಿನಲ್ಲೇ ಇರುವ ಮೂರನೇ ಮೈಲ್ ವಿಭಾಗದಲ್ಲಿ ನಗರಕ್ಕಿಂತ ಅಧಿಕ ಪ್ರಮಾಣದಲ್ಲಿ ಮಳೆಯಾಗಿದೆ. ಇಲ್ಲಿಗೆ ಈ ತನಕ ಒಟ್ಟು 121.25 ಇಂಚು ಮಳೆಯಾಗಿದೆ ಎಂದು ಮಳೆ ದಾಖಲೆ ಸಂಗ್ರಹಿಸುವ ಹವ್ಯಾಸ ಹೊಂದಿರುವ ಕೆ.ಎಸ್. ದೇವಯ್ಯ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ.
ಭಾಗಮಂಡಲ ವ್ಯಾಪ್ತಿಯಲ್ಲಿ ನಿನ್ನೆಯಿಂದ ಮೋಡ ಕವಿದ ವಾತಾವರಣದೊಂದಿಗೆ ಇಂದು ಬೆಳಿಗ್ಗೆವರೆಗೆ ತುಂತುರು ಮಳೆಯಾಗಿದೆ. ನಾಪೋಕ್ಲುವಿನಲ್ಲಿ ರಾತ್ರಿ ತುಂತುರು ಮಳೆಯಾಗಿದೆ. ಸೋಮವಾರಪೇಟೆಯಲ್ಲಿ ಕೂಡ ತುಂತುರು ಮಳೆಯಾಗಿದೆ. ವೀರಾಜಪೇಟೆ ವ್ಯಾಪ್ತಿಯಲ್ಲಿ ಇಂದು ಮಧ್ಯಾಹ್ನ ಅಲ್ಪ ಪ್ರಮಾಣದ ಮಳೆಯಾಗಿದ್ದರೆ, ಶ್ರೀಮಂಗಲ ವ್ಯಾಪ್ತಿಯಲ್ಲಿ ನಿನ್ನೆಯಿಂದ ಮೋಡ ಕವಿದ ವಾತಾವರಣದೊಂದಿಗೆ ತುಂತುರು ಮಳೆಯಾಗಿದೆ.
ಕೊಡಗು ಜಿಲ್ಲೆಯ ಇಂದಿನ(ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ) ಸರಾಸರಿ ಮಳೆ 0.29 ಇಂಚು,
ಕಳೆದ ವರ್ಷ ಇದೇ ದಿನ 0.04 ಇಂಚು, ಜನವರಿಯಿಂದ ಇಲ್ಲಿಯವರೆಗಿನ ಮಳೆ 63.39 ಇಂಚು, ಕಳೆದ ವರ್ಷ ಇದೇ ಅವಧಿಯಲ್ಲಿ 77.43 ಇಂಚು ಮಳೆಯಾಗಿತ್ತು.
ಮಡಿಕೇರಿ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 0.33 ಇಂಚು, ಕಳೆದ ವರ್ಷ ಇದೇ ದಿನ 0.02 ಇಂಚು, ಜನವರಿಯಿಂದ ಇಲ್ಲಿಯವರೆಗಿನ ಮಳೆ 95.98 ಇಂಚು, ಕಳೆದ ವರ್ಷ ಇದೇ ಅವಧಿಯಲ್ಲಿ 116.45 ಇಂಚು ಮಳೆಯಾಗಿತ್ತು.
ವೀರಾಜಪೇಟೆ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 0.12 ಇಂಚು, ಕಳೆದ ವರ್ಷ ಇದೇ ದಿನ 0.66 ಇಂಚು, ಜನವರಿಯಿಂದ ಇಲ್ಲಿಯವರೆಗಿನ ಮಳೆ 45.22 ಇಂಚು, ಕಳೆದ ವರ್ಷ ಇದೇ ಅವಧಿಯಲ್ಲಿ 61.03 ಇಂಚು ಮಳೆಯಾಗಿತ್ತು.
ಸೋಮವಾರಪೇಟೆ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 0.42 ಇಂಚು, ಕಳೆದ ವರ್ಷ ಇದೇ ದಿನ 0.05 ಇಂಚು, ಜನವರಿಯಿಂದ ಇಲ್ಲಿಯವರೆಗಿನ ಮಳೆ 48.92 ಇಂಚು, ಕಳೆದ ವರ್ಷ ಇದೇ ಅವಧಿಯಲ್ಲಿ 54.80 ಇಂಚು ಮಳೆಯಾಗಿತ್ತು.
ಹಾರಂಗಿ ಜಲಾಶಯದ ನೀರಿನ ಮಟ್ಟ
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2844.38 ಅಡಿಗಳು, ಕಳೆದ ವರ್ಷ ಇದೇ ದಿನ 2849.79 ಅಡಿ. ಹಾರಂಗಿಯಲ್ಲಿ ಬಿದ್ದ ಮಳೆ 14.8 ಇಂಚು ಕಳೆದ ವರ್ಷ ಇದೇ ದಿನ 0.00, ಇಂದಿನ ನೀರಿನ ಒಳ ಹರಿವು 822 ಕ್ಯೂಸೆಕ್ಸ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 802 ಕ್ಯೂಸೆಕ್ಸ್. ಇಂದಿನ ನೀರಿನ ಹೊರ ಹರಿವು ನದಿಗೆ 2000, ನಾಲೆಗೆ 1900. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 200, ನಾಲೆಗೆ 1700 ಕ್ಯೂಸೆಕ್ಸ್.