ಮಡಿಕೇರಿ, ಡಿ. 14: ಧರ್ಮಗುರು ಮಹಮ್ಮದ್ ಪೈಗಂಬರ್‍ರವರ 1491ನೇ ಜನುಮ ದಿನವನ್ನು ಜಿಲ್ಲೆಯಾದ್ಯಂತ ಆಚರಿಸಲಾಯಿತು. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಬದ್ರಿಯಾ ಜಮಾಅತ್‍ನ ಆಶ್ರಯದಲ್ಲಿ ಕ್ರೆಸೆಂಟ್ ಶಾಲೆಯ ಆವರಣದಲ್ಲಿ ಏರ್ಪಡಿಸಿದ್ದ ಈದ್‍ಮಿಲಾದ್ ಸಮಾರಂಭದ ಅಧ್ಯಕ್ಷತೆಯನ್ನು ಜಮಾತ್ ಅಧ್ಯಕ್ಷ ಯೂಸುಫ್ ಹಾಜಿ ವಹಿಸಿದ್ದರು.

ದಿನದ ಅಂಗವಾಗಿ ನಗರದ ಹಯಾತುಲ್ ಇಸ್ಲಾಂ ಅರಬಿ ಶಾಲೆಗಳ ವಿದ್ಯಾರ್ಥಿಗಳನ್ನೊಳಗೊಂಡ ಸಾರ್ವಜನಿಕ ಮೆರವಣಿಗೆ ಗದ್ದಿಗೆಯಿಂದ ಹೊರಟು ಕ್ರೆಸೆಂಟ್ ಶಾಲೆಯಲ್ಲಿ ಕೊನೆಗೊಂಡಿತು. ಮೆರವಣಿಗೆಯುದ್ದಕ್ಕೂ ವಿಶ್ವ ಪ್ರವಾದಿಯ ಗುಣಗಾನ ಕೇಳಿಬಂತು.

ಪೈಗಂಬರರ ಜಯಂತಿಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ಹಾಡುಗಾರಿಕೆ, ರಸಪ್ರಶ್ನೆ, ಭಾಷಣ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಜಾಮಿಯಾ ಮಸೀದಿಯ ಅಧ್ಯಕ್ಷ ನಝೀರ್, ಅಲ್ ಅಮೀನ್

(ಮೊದಲ ಪುಟದಿಂದ) ಕೊಡಗು ಜಿಲ್ಲಾ ಸಮಿತಿಯ ಅಧ್ಯಕ್ಷ ಎಫ್.ಎ. ಮೊಹಮದ್ ಹಾಜಿ, ಕೋಶಾಧಿಕಾರಿ ಲತೀಫ್ ಹಾಜಿ, ಬದ್ರಿಯಾ ಜಮಾಅತ್‍ನ ಮಾಜಿ ಅಧ್ಯಕ್ಷ ಹೆಚ್.ಎಂ. ಮೊಹಮದ್ ಹಾಜಿ, ಜಮಾತ್‍ನ ಸದರ್‍ಮುಅಲ್ಲಿಂ ಅಂಜದ್ ಮುಸ್ಲಿಯಾರ್, ಹಿರಿಯ ಅಧ್ಯಾಪಕ ಹಾಜಿ ಹೆಚ್.ಎಂ. ಬಾಬಜಾನ್ ಉಸ್ತಾದ್, ಯಾಮೀನ್ ಇಸ್ಮಾಈಲ್‍ಹಾಜಿ, ಎಂ.ಎಂ. ಮಸೀದಿಯ ಹಮೀದ್ ಮದನಿ ವಕ್ಫ್ ಮಂಡಳಿ ನಿವೃತ್ತ ಅಧಿಕಾರಿ ಮೊಹಮದ್ ಹಾಜಿ, ಮುಂತಾದವರು ಉಪಸ್ಥಿತರಿದ್ದರು.

ಪ್ರವಾದಿ ಮಹಮ್ಮದ್ ಅವರ ಆದರ್ಶದ ಕುರಿತು ಗಣ್ಯರು ಮಾತನಾಡಿದರು. ಜಮಾತ್ ಪದಾಧಿಕಾರಿ ಫಾರೂಖ್ ಕಾರ್ಯಕ್ರಮ ನಿರೂಪಿಸಿದರು. ಈದ್ ಮಿಲಾದ್ ಅಂಗವಾಗಿ ಸಾರ್ವಜನಿಕರಿಗೆ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಶನಿವಾರಸಂತೆ

ಶನಿವಾರಸಂತೆ ಸಮೀಪದ ಗುಡುಗಳಲೆಯ ಬದ್‍ರಿಯಾ ಜುಮಾ ಮಸೀದಿಯಲ್ಲಿ ಪ್ರವಾದಿ ಸ.ಅ. ಅವರ 1491ನೇ ಜನ್ಮ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.

ಖತೀಬ್ ಹೈಬ್ ಫೈಝಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಪ್ರವಾದಿ ಮುಹಮ್ಮದ್ ಪೈಗಂಬರ್‍ರ ಸಂದೇಶಗಳನ್ನು ವಿವರಿಸಿದರು.

ಧ್ವಜಾರೋಹಣ ನೆರವೇರಿಸಿದ ಹಸೈನಾರ್ ಉಸ್ತಾದ್ ಅವರ ಅಧ್ಯಕ್ಷತೆಯಲ್ಲಿ ಮದ್ರಸ ವಿದ್ಯಾರ್ಥಿಗಳಿಂದ ಸಾಹಿತ್ಯ ಕಲಾ ಕಾರ್ಯಕ್ರಮ ನಡೆಯಿತು.

ಗುಡುಗಳಲೆ ಚಿಕ್ಕಕೊಳತ್ತೂರು ಗೋಪಾಲಪುರ ಮದ್ರಸ ವಿದ್ಯಾರ್ಥಿಗಳು ಪ್ರವಾದಿ ಗೀತೆಗಳನ್ನು ಹಾಡಿ ಬಳಿಕ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಶನಿವಾರಸಂತೆ ಠಾಣಾಧಿಕಾರಿ ಮರಿಸ್ವಾಮಿ ಮಾತನಾಡಿದರು.

ಆಡಳಿತ ಮಂಡಳಿಯ ಉಪಾಧ್ಯಕ್ಷ ಜಿ.ಎಂ. ಹಮೀದ್, ಕಾರ್ಯದರ್ಶಿ ಮುಸ್ತಫ, ಸಿ.ಎ. ಹಮೀದ್, ಹೆಚ್.ಈ. ಹಸೇನ್, ಸಿ.ಎಂ. ಅಬ್ದುಲ್ಲ, ಹಮೀದ್ ಸೂರ್ಯ, ಶೇಖಬ್ಬ ಹಾಜಿ, ಅಶ್ರಫ್, ನಂದಿ, ಎಸ್.ಕೆ. ಸೂಫಿ, ಮೊೈದು, ಅಧ್ಯಾಪಕರುಗಳಾದ ನಸೀರ್, ಅಜ್‍ಂಕರಿ, ರಹ್ಮಾನ್, ಮಸ್ಲಿಯಾರ್, ಹಸೈನಾರ್ ಕಾಜೂರ್, ಉಪಸ್ಥಿತರಿದ್ದರು.

ಅಬ್ದುಲ್ ರಜಾಖ್ ಫೈಝಿ ಸ್ವಾಗತಿಸಿ, ಹಸೈನಾರ್ ಕಾಜೂರು ವಂದಿಸಿದರು.

ಶನಿವಾರಸಂತೆ

ಸಮೀಪದ ಕೊಡ್ಲಿಪೇಟೆ ಹ್ಯಾಂಡ್‍ಪೋಸ್ಟ್ ಮಸೀದಿಯಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಪ್ರಯುಕ್ತ 3 ದಿನ ಧಾರ್ಮಿಕ ಪ್ರವಚನ ನಡೆಯಿತು. ಕೊನೆಯ ದಿನ ಸಾಮೂಹಿಕ ಮೌಲೂದು ಪಾರಾಯಣ ನಡೆಯಿತು.

ಸಂಜೆ ಧರ್ಮಗುರು ಸೂಫಿದಾರಿಮಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮಜೀದ್ ಮುಸ್ಲಿಯಾರ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಸೀದಿಯ ಆಡಳಿತ ಮಂಡಳಿ ಅಧ್ಯಕ್ಷ ಸುಲೈಮಾನ್ ಅಧ್ಯಕ್ಷತೆ ವಹಿಸಿದ್ದರು. ಅರೆಬಿಕ್ ಮದರಸದ ವಿದ್ಯಾರ್ಥಿಗಳಿಂದ ಪ್ರವಾದಿ ಕೀರ್ತನೆಗಳು, ಹಾಡು ಮತ್ತು ಭಾಷಣ ಕಾರ್ಯಕ್ರಮ ನಡೆಯಿತು.

ಪಿಎಸ್‍ಐ ಎಚ್.ಎಂ. ಮರಿಸ್ವಾಮಿ, ರಫೀಕ್ ನಿಝಾಮಿ, ಝಾಹೀರ್, ನಿಝಾಮಿ, ಉಮ್ಮರ್, ಜಬ್ಬಾರ್, ಮುಸ್ಲಿಯಾರ್, ಸಮಿತಿ ಕಾರ್ಯದರ್ಶಿಗಳಾದ ರಜಾಕ್, ಮಹಮ್ಮದ್, ಪ್ರಮುಖರಾದ ಹನೀಫ್, ಅಹಮ್ಮದ್, ಅಬ್ಬಾಸ್ ಹಾಜಿ, ಅಬೂಬಕ್ಕರ್, ಸಾಬ್‍ಜಾನ್, ಲತೀಫ್, ಅಬ್ದುಲ್ ಮಜೀದ್, ಮಹಮ್ಮದ್ ಹಾಜಿ ಉಪಸ್ಥಿತರಿದ್ದರು.

ಸೋಮವಾರಪೇಟೆ: ಸಮೀಪದ ಕಲ್ಕಂದೂರು ಗ್ರಾಮದಲ್ಲಿ ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಗ್ರಾಮದ ಮಸೀದಿಯಿಂದ ಮುಖ್ಯರಸ್ತೆಯಲ್ಲಿ ಈದ್ ಜಾಥಾ ನಡೆಯಿತು.

ಖಾತಿಮ್ ಅಮಾನಿ ಉಸ್ತಾದ್ ಅವರು ರ್ಯಾಲಿಯ ನೇತೃತ್ವ ವಹಿಸಿದ್ದರು. ಅಜೀಜ್ ಮುಸ್ಲಿಯಾರ್, ಅಲಿ ಸಖಾಫಿ, ಶಕೀರ್, ಕಲ್ಕಂದೂರು ಜಮಾತ್‍ನ ಅಧ್ಯಕ್ಷ ಉಮ್ಮರ್, ಕಾರ್ಯದರ್ಶಿ ಸಿದ್ದೀಕ್, ಅಜೀಜ್, ಫಾರೂಕ್, ಅಬ್ದುಲ್ ಸಲಾಂ, ಸಮೀರ್ ಸೇರಿದಂತೆ ಇತರರು ರ್ಯಾಲಿಯಲ್ಲಿ ಭಾಗವಹಿಸಿದ್ದರು.

ಸಂಜೆ ಇರ್‍ಶಾದುಲ್ ಇಸ್ಲಾಂ ವಿದ್ಯಾರ್ಥಿಗಳಿಂದ ದಫ್ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಸಿದ್ದಾಪುರ: ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ 1491ನೇ ಜನ್ಮದಿನವನ್ನ ನೆಲ್ಲಿಹುದಿಕೇರಿಯಲ್ಲಿ ಆಚರಣೆ ಮಾಡಲಾಯಿತು. ಮುಸ್ಲಿಂ ಬಾಂಧವರು ಮುಖ್ಯ ರಸ್ತೆಯಲ್ಲಿ ಮದರಸ ವಿದ್ಯಾರ್ಥಿಗಳ ದಫ್ ಪ್ರದರ್ಶನದೊಂದಿಗೆ ಮೆರವಣಿಗೆ ನಡೆಸಿ ಗ್ರಾಮದಲ್ಲಿ ಸಿಹಿ ಹಂಚಿದರು.