ಮಡಿಕೇರಿ, ನ. 27: ಜಿಲ್ಲಾ ಯುವಜನೋತ್ಸವ ಇತ್ತೀಚೆಗೆ ತಾಳತ್ತಮನೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಿತು. ಈ ಸಂದರ್ಭ ವಿವಿಧ ಸಾಂಸ್ಕøತಿಕ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ಸ್ಪರ್ಧೆಯಲ್ಲಿ ವಿಜೇತರಾದವರ ಪಟ್ಟಿ ಇಂತಿದೆ.
ಶಾಸ್ತ್ರೀಯ ನೃತ್ಯ, ಕೂಚುಪುಡಿ ನೃತ್ಯದಲ್ಲಿ ಗೋಣಿಕೊಪ್ಪದ ಕಾರ್ತಿಕ್ ಶೆಟ್ಟಿ ಪ್ರಥಮ, ಭರತ ನಾಟ್ಯ ಸ್ಪರ್ಧೆಯಲ್ಲಿ ಗೋಣಿಕೊಪ್ಪದ ಹರ್ಷಕೀರ್ತಿ ದಶರಥ ಪ್ರಥಮ ಬಹುಮಾನಗಳಿಸಿದ್ದಾರೆ.
ಆಶು ಭಾಷಣದಲ್ಲಿ ಮದೆ ಮಹೇಶ್ವರ ವಿದ್ಯಾಲಯದ ಎಂ.ಎ. ರಮೀಜಾ ಪ್ರಥಮ, ಮಡಿಕೇರಿಯ ಕೆ.ಆರ್. ಜೀವಿತ ದ್ವಿತೀಯ, ಮಡಿಕೇರಿಯ ದೇವಿಕಾ ತೃತೀಯ. ಶಾಸ್ತ್ರೀಯ ಗಾಯನದಲ್ಲಿ ಅರ್ವತೋಕ್ಲುವಿನ ಅನನ್ಯ ಪ್ರಥಮ, ಮಡಿಕೇರಿಯ ಪ್ರಜ್ವಲ್ ದ್ವಿತೀಯ ಹಾಗೂ ತಾಳತ್ತಮನೆಯ ಶ್ರೇಯಶ್ರೀ ತೃತೀಯ ಬಹುಮಾನ ಗಳಿಸಿದ್ದಾರೆ.
ಶಾಸ್ತ್ರೀಯ ವಾದನದಲ್ಲಿ ಪೊನ್ನಂಪೇಟೆಯ ಜೈ ಭೀಮ್ ಯುವಕ ಸಂಘದ ಎಸ್.ಟಿ. ಗಿರೀಶ್ ಪ್ರಥಮ ಹಾಗೂ ತಬಲದಲ್ಲಿ ಗೋಣಿಕೊಪ್ಪಲಿನ ಟಿ.ಪಿ. ಶರತ್ ಕುಮಾರ್ ಬಹುಮಾನ ಗಳಿಸಿದ್ದಾರೆ.
ಹಾರ್ಮೋನಿಯಂನಲ್ಲಿ ಗೋಣಿಕೊಪ್ಪದ ಶರತ್ ಕುಮಾರ್ ಪ್ರಥಮ ಹಾಗೂ ಪೊನ್ನಂಪೇಟೆಯ ಎಸ್.ಟಿ. ಗಿರೀಶ್ ದ್ವಿತೀಯ ಸ್ಥಾನಗಳಿಸಿದ್ದಾರೆ. ಗಿಟಾರ್‍ನಲ್ಲಿ ಪೊನ್ನಂಪೇಟೆಯ ದೀಕ್ಷಿತ್ ನೆಲ್ಲಿತ್ತಾಯ ಪ್ರಥಮ, ಮಡಿಕೇರಿಯ ಕೆ.ಬಿ. ಭೂಮಿಕಾ ದ್ವಿತೀಯ ಹಾಗೂ ಮಡಿಕೇರಿಯ ಪ್ರೇರಿಕ್ ಡಿಸೋಜ ತೃತೀಯ ಸ್ಥಾನಗಳಿಸಿದ್ದಾರೆ.
ಜನಪದ ಗೀತೆ ಸ್ಪರ್ಧೆಯಲ್ಲಿ ಪೊನ್ನಂಪೇಟೆಯ ಜೈ ಭೀಮ್ ಯುವಕ ಸಂಘ ಪ್ರಥಮ, ಮಡಿಕೇರಿಯ ನೆಲ್ಲಕ್ಕಿ ಯುವತಿ ಮಂಡಳಿ ದ್ವಿತೀಯ ಹಾಗೂ ಮಡಿಕೇರಿಯ ಲಿಸ್ಮಾ ಮತ್ತು ತಂಡ ತೃತೀಯ ಸ್ಥಾನಗಳಿಸಿದೆ. ಜಾನಪದ ನೃತ್ಯದಲ್ಲಿ ಮಡಿಕೇರಿಯ ನೆಲ್ಲಕ್ಕಿ ಯುವತಿ ಮಂಡಳಿ ಪ್ರಥಮ, ಗೋಣಿಕೊಪ್ಪ ಕಾವೇರಿ ಕಾಲೇಜು ದ್ವಿತೀಯ ಹಾಗೂ ಪೊನ್ನಂಪೇಟೆಯ ಜೈ ಭೀಮ್ ಯುವಕ ಸಂಘ ತೃತೀಯ ಬಹುಮಾನ ಗಳಿಸಿದ್ದಾರೆ.