ಮಡಿಕೇರಿ, ಅ. 24 :ಕಾಕೋಟುಪರಂಬು ಸ್ಪೋಟ್ರ್ಸ್ ಮತ್ತು ರಿಕ್ರಿಯೇಷನ್ ಕ್ಲಬ್ ವತಿಯಿಂದ 4ನೇ ವರ್ಷದ ಜಿಲ್ಲಾ ಮಟ್ಟದ ಹಾಕಿ ಪಂದ್ಯಾವಳಿಗೆ ತಾ. 26 ರಂದು (ನಾಳೆ) ಚಾಲನೆ ದೊರೆಯಲಿದ್ದು, ಪ್ರಶಸ್ತಿಗಾಗಿ 21 ತಂಡಗಳ ನಡುವೆ ಪೈಪೆÇೀಟಿ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕ್ಲಬ್‍ನ ಉಪಾಧ್ಯಕ್ಷ ಐಚೆಟ್ಟೀರ ಮೋಹನ್, ಕಾಕೋಟುಪರಂಬುವಿನಲ್ಲಿ ತಾ. 26 ರಿಂದ ನ.1 ರವರೆಗೆ ಹಾಕಿ ಪಂದ್ಯಾವಳಿ ನಡೆಯಲಿದೆ.

ತಾ. 26 ರಂದು ನಡೆಯುವ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಕ್ಲಬ್‍ನ ಅಧ್ಯಕ್ಷರಾದ ಮೇವಡ ಚಿಣ್ಣಪ್ಪ, ಜಿಲ್ಲಾಧಿಕಾರಿಗಳಾದ ಡಾ| ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್, ಜಿಲ್ಲಾ ಪಂಚಾಯ್ತಿ ಸದಸ್ಯ ಅಚ್ಚಪ್ಪಂಡ ಮಹೇಶ್ ಗಣಪತಿ ಹಾಗೂ ಹಾಕಿ ಕೂರ್ಗ್ ಸಂಸ್ಥೆಯ ಉಪಾಧ್ಯಕ್ಷ ಮೇಕೇರಿರ ರವಿ ಪೆಮ್ಮಯ್ಯ ಉಪಸ್ಥಿತರಿರುವರು ಎಂದು ತಿಳಿಸಿದರು.

ಆರು ದಿನಗಳ ಕಾಲ ನಡೆಯುವ ಜಿಲ್ಲಾ ಮಟ್ಟದ ಹಾಕಿ ಪಂದ್ಯಾವಳಿ ನ. 1 ರಂದು ಸಮಾರೋಪಗೊಳ್ಳಲಿದ್ದು, ಫೈನಲ್ ಪಂದ್ಯವನ್ನು ವೀಕ್ಷಿಸಲು ಮತ್ತು ಬಹುಮಾನಗಳನ್ನು ವಿತರಿಸಲು ಸಂಸದರಾದ ಪ್ರತಾಪ ಸಿಂಹ, ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ, ಕ್ಲಬ್‍ನ ಮಾಜಿ ಅಧ್ಯಕ್ಷ ಮೇವಡ ಅಚ್ಚಯ್ಯ, ಹಾಕಿ ಕೂರ್ಗ್ ಸಂಸ್ಥೆಯ ಉಪಾಧ್ಯಕ್ಷ ಕಳ್ಳಿಚಂಡ ಪ್ರಸಾದ್, ಕಾರ್ಯದರ್ಶಿ ಪಳಂಗಂಡ ಲವ ಕುಮಾರ್ ಹಾಗೂ ವಿಜೇತ ತಂಡಕ್ಕೆ ಪಾರಿತೋಷಕದ ಪ್ರಾಯೋಜಕ ಮಹೇಂದ್ರ ಸಂಸ್ಥೆಯ ವ್ಯವಸ್ಥಾಪಕ ಸ್ವಪನ್ ಕುಮಾರ್ ದಾಸ್ ಆಗಮಿಸಲಿದ್ದಾರೆ. ಪಂದ್ಯಾವಳಿಯಲ್ಲಿ ಒಟ್ಟು ರೂ. 1 ಲಕ್ಷ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿಗಳನ್ನು ನೀಡಲಾಗುವದೆಂದು ಐಚೆಟ್ಟೀರ ಮೋಹನ್ ತಿಳಿಸಿದರು. ಸಮಾರೋಪ ಸಮಾರಂಭದ ದಿನದಂದು ಸಂಜೆ 7 ಗಂಟೆಯ ನಂತರ ಜಿóರೋ ಡಿಗ್ರಿ ಗ್ರೂಪ್‍ನಿಂದ ಡಿಜೆ ಕಾರ್ಯಕ್ರಮವಿರುತ್ತದೆ ಎಂದು ಅವರು ತಿಳಿಸಿದರು.

ಗೋಷ್ಠಿಯಲ್ಲಿ ಕ್ಲಬ್‍ನ ನಿರ್ದೇಶಕರುಗಳಾದ ಪಳೆಯಂಡ ರಾಬಿನ್ ದೇವಯ್ಯ ಹಾಗೂ ಚೆಂಬಂಡ ಸುಬ್ರಮಣಿ ಉಪಸ್ಥಿತರಿದ್ದರು.