ಮಡಿಕೇರಿ, ಜು. 9: ಕೊಡಗು ಜಿಲ್ಲೆಯ ಭಾರತೀಯ ಜನತಾ ಪಾರ್ಟಿಯ ವಿವಿಧ ಮೋರ್ಚಾಗಳು ಮತ್ತು ಪ್ರಕೋಷ್ಟದ ಅಧ್ಯಕ್ಷರುಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಮನು ಮುತ್ತಪ್ಪ ತಿಳಿಸಿದ್ದಾರೆ.
ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಮಾಪಂಗಡ ಯಮುನಾ ಚಂಗಪ್ಪ (ಬಾಳೆಲೆ), ರೈತ ಮೋರ್ಚಾ ಅಧ್ಯಕ್ಷರಾಗಿ ಎಸ್.ಪಿ. ಪೊನ್ನಪ್ಪ (ತಾಕೇರಿ), ವ್ಯಾಪಾರಸ್ಥರ ಪ್ರಕೋಷ್ಟದ ಅಧ್ಯಕ್ಷರಾಗಿ ಕಾಡ್ಯಮಾಡ ಗಿರೀಶ್ ಗಣಪತಿ, ಹಿಂದುಳಿದ ವರ್ಗ ಅಧ್ಯಕ್ಷರಾಗಿ ಬಿ.ವೈ. ರಘು ಆನಂದ (ಅರೆಕಾಡು), ಪರಿಶಿಷ್ಟ ಪಂಗಡ ಮೋರ್ಚಾ ಅಧ್ಯಕ್ಷರಾಗಿ ಎಸ್.ಎನ್. ರಾಜರಾವ್ (ಕೂಡಿಗೆ), ಪರಿಶಿಷ್ಟ ಜಾತಿ ಮೋರ್ಚಾ ಅಧ್ಯಕ್ಷರಾಗಿ ಎಸ್.ಸಿ. ಸತೀಶ್ (ಮಡಿಕೇರಿ ನಗರ), ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಾಗಿ ಎಂ.ಜಿ. ಜಹೀರ್ (ನಾಪೋಕ್ಲು), ಕಾನೂನು ಪ್ರಕೋಷ್ಟದ ಅಧ್ಯಕ್ಷರಾಗಿ ಚಿಲ್ಲನ ಕವೀಂದ್ರ (ಮಡಿಕೇರಿ), ಸಹಕಾರ ಪ್ರಕೋಷ್ಟದ ಅಧ್ಯಕ್ಷರಾಗಿ ನಾಗೇಶ್ ಕುಂದಲ್ಪಾಡಿ (ಪೆರಾಜೆ), ಶಿಕ್ಷಕರ ಪ್ರಕೋಷ್ಟದ ಅಧ್ಯಕ್ಷರಾಗಿ ಕಂಬೀರಂಡ ಕಾಳಪ್ಪ (ಮೂರ್ನಾಡು) ಅವರನ್ನು ನೇಮಕಗೊಳಿಸಲಾಗಿದೆ.