ಮಡಿಕೇರಿ, ಅ.21 :ಕೆಪಿಸಿಸಿ ಆದೇಶದಂತೆ ವಿವಿಧ ವಿಚಾರಗಳ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲು ಇದೇ ತಾ. 25 ರಂದು ನಗರದ ಕೂರ್ಗ್ ಕಮ್ಯುನಿಟಿ ಹಾಲ್ ಸಭಾಂಗಣದಲ್ಲಿ ಪಕ್ಷದ ಸಭೆಯನ್ನು ಆಯೋಜಿಸಲಾಗಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಕಾಂಗ್ರೆಸ್ ಪ್ರಬಾರ ಅಧ್ಯಕ್ಷ ಟಿ.ಪಿ.ರಮೇಶ್ ಅವರ ಅಧ್ಯಕ್ಷತೆಯಲ್ಲಿ ಡಿ.ಸಿ.ಸಿ ಪದಾಧಿಕಾರಿಗಳು, ಕೆ.ಪಿ.ಸಿ.ಸಿ ಸದಸ್ಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರುಗಳು, ಜಿ.ಪಂ, ತಾ.ಪಂ.ನ ಕಾಂಗ್ರೆಸ್ ಸದಸ್ಯರು, ಪಟ್ಟಣ ಪಂಚಾಯಿತಿ ಮತ್ತು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷರುಗಳ ಉಪಸ್ಥಿತಿಯಲ್ಲಿ ಸಭೆ ನಡೆಯಲಿದೆ ಎಂದು ಹೇಳಿದ್ದಾರೆ.
ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳ ಸಭೆಯ ನಿಯಮದಂತೆ ಜಿಲ್ಲೆಯ ಎಲ್ಲಾ ವಲಯ ಕಾಂಗ್ರೆಸ್ ಮಟ್ಟದ ಸಮಿತಿ ಪುನರ್‍ರಚನೆ, 94 ಸಿ ಫಲಾನುಭವಿಗಳಿಗೆ ಅರ್ಜಿ ನೀಡುವ ಆಂದೋಲನ, ಜಿಲ್ಲೆಯ ಪಿ.ಹೆಚ್.ಸಿ ಹಾಗೂ ಸಿ.ಹೆಚ್.ಸಿ ಆಸ್ಪತ್ರೆಗಳಿಗೆ ಸದಸ್ಯರ ನಾಮಕರಣ ಹಾಗೂ ತಾ. 31 ರೊಳಗೆ ಮತದಾರರ ಪಟ್ಟಿಗೆ ಹೆಸರು ನೋಂದಣಿ ಹಾಗೂ ಕೆಪಿಸಿಸಿ ಆದೇಶದಂತೆ ಪ್ರತಿ ವಿಧಾನಸಭಾ ಕ್ಷೇತ್ರದ ಯಾವುದಾದರೊಂದು ಹೋಬಳಿ ಅಥವಾ ತಾಲೂಕು ಕ್ರೇಂದ್ರದಲ್ಲಿ ಪಾದಯಾತ್ರೆ ಕಾರ್ಯಕ್ರಮ ನಡೆಸುವ ಕುರಿತು ಚರ್ಚಿಸಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವದು ಎಂದು ವಿ.ಪಿ.ಸುರೇಶ್ ತಿಳಿಸಿದ್ದಾರೆ.