ಗೋಣಿಕೊಪ್ಪಲು, ನ. 14: ಕಳೆದ ವಿಧಾನ ಸಭಾ ಚುನಾವಣೆಯಿಂದಲೂ ಖಾಲಿಯಾಗಿ ಉಳಿದಿರುವ ಕೊಡಗು ಜಿಲ್ಲಾ ಕಾಂಗ್ರೆಸ್‍ಗೆ ಸರ್ವ ಸಮ್ಮತ ಅಧ್ಯಕ್ಷರನ್ನು ಇನ್ನೂ ಆಯ್ಕೆ ಮಾಡಲು ಕೊಡಗು ಹಾಗೂ ರಾಜ್ಯದ ಪ್ರಮುಖರಿಗೆ ಸಾಧ್ಯವಾಗಿಲ್ಲ. ಪ್ರಬಾರ ಕಾಂಗ್ರೆಸ್ ಅಧ್ಯಕ್ಷ ಟಿ.ಪಿ.ರಮೇಶ್ ಅವರಿಗೆ ಇದೀಗ ಉನ್ನತ ಸ್ಥಾನ ಮಾನ ದೊರೆತಿದ್ದು, ಶೀಘ್ರವೇ ಜಿಲ್ಲಾ ಅಧ್ಯಕ್ಷರನ್ನು ನೇಮಕ ಮಾಡುವಂತೆ ಹಿರಿಯ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪಿ.ಕೆ.ಪೆÇನ್ನಪ್ಪ ಒತ್ತಾಯಿಸಿದ್ದಾರೆ.ಮತ್ತೊಂದು ವಿಧಾನ ಸಭೆ ಚುನಾವಣೆ ಸನ್ನಿಹಿತವಾಗಿದ್ದು, ಪಕ್ಷ ಸಂಘಟನೆ ಉತ್ತಮಗೊಳ್ಳಬೇಕಾದಲ್ಲಿ ಒಮ್ಮತದ ಅಧ್ಯಕ್ಷರ ಆಯ್ಕೆಯಾಗಬೇಕಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾಗಿ ದಿನೇಶ್ ಗುಂಡೂರಾವ್ ಹಾಗೂ ಎಂ.ಆರ್. ಸೀತಾರಾಮ್ ಅವರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ದಿನೇಶ್ ಗುಂಡೂರಾವ್ ಅವರನ್ನು ಪಕ್ಷ ಸಂಘಟನೆ ಹಿನ್ನೆಲೆ ರಾಜ್ಯ ಕಾಂಗ್ರೆಸ್‍ನ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಈ ಬಾರಿ ಟಿಪ್ಪು ಆಚರಣೆ ಸಂದರ್ಭ ಜಿಲ್ಲೆಯಲ್ಲಿ ಯಾವದೇ ಅಹಿತಕರ ಘಟನೆ ನಡೆದಿರುವದಿಲ್ಲ. ಚುನಾವಣೆ ಸಂದರ್ಭ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಿದ್ದಲ್ಲಿ ಯುದ್ಧ ಕಾಲದಲ್ಲಿ ಶಸ್ತ್ರಭ್ಯಾಸ ಮಾಡಿದಂತೆ ಕಾಂಗ್ರೆಸ್ ಸ್ಥಿತಿ ಮತ್ತಷ್ಟು ಹದಗೆಡಲಿದೆ.

ರಾಜ್ಯ ಕಾಂಗ್ರೆಸ್ ವರಿಷ್ಠರು ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರಮುಖರು ಸಂಘಟಿತರಾಗಿ ಉತ್ತಮ ಜಿಲ್ಲಾಧ್ಯಕ್ಷರ ನೇಮಕ ಮಾಡುವದು ಅನಿವಾರ್ಯವಾಗಿದೆ. ತಾನು ಜಿಲ್ಲಾ ಕಾಂಗ್ರೆಸ್‍ನ ಉಪಾಧ್ಯಕ್ಷನಾಗಿ, ಪ್ರಬಾರ ಜಿಲ್ಲಾಧ್ಯಕ್ಷನಾಗಿ , ಮಾಜಿ ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷನಾಗಿ, ಹಿರಿಯ ಕಾಂಗ್ರೆಸ್ ಉಪಾಧ್ಯಕ್ಷನಾಗಿ ಅನುಭವ ಹೊಂದಿದ್ದು , ಜಿಲ್ಲಾಧ್ಯಕ್ಷ ಸ್ಥಾನಕ್ಕೆ ತಾನೂ ಓರ್ವ ಆಕಾಂಕ್ಷಿಯಾಗಿದ್ದೇನೆ ಎಂದು ಪೆಮ್ಮಂಡ ಪೆÇನ್ನಪ್ಪ ತಿಳಿಸಿದ್ದಾರೆ.

ಇದೇ ಸಂದರ್ಭ ಹುದಿಕೇರಿ ವಲಯ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಕೊಡವ ಸಮಾಜ ಅಧ್ಯಕ್ಷರು ಹಾಗೂ ಈ ಹಿಂದೆ ಗ್ರಾಮಪಂಚಾಯಿತಿ ಸದಸ್ಯರೂ ಆಗಿದ್ದ ಚೆಕ್ಕೇರ ವಾಸು ಕುಟ್ಟಪ್ಪ ಅವರು ತನಗೂ ಅವಕಾಶ ನೀಡಿದಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುತ್ತೇನೆ. ತಾನೂ ಪ್ರಬಲ ಆಕಾಂಕ್ಷಿ ಎಂದು ಪೆÇನ್ನಂಪೇಟೆಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದಾರೆ.

-ಟಿ.ಎಲ್.ಎಸ್.