ಮಡಿಕೇರಿ, ಜ. 3: ಖೇಲೋ ಇಂಡಿಯಾ ಯೋಜನೆಯಡಿ 2016-17ನೇ ಸಾಲಿನ ಕೊಡಗು ಜಿಲ್ಲಾಮಟ್ಟದ ಕ್ರೀಡಾ ಪಂದ್ಯಾವಳಿಗಳನ್ನು 14 ವರ್ಷ ಒಳಪಟ್ಟವರಿಗೆ ಹಾಗೂ 17 ವರ್ಷ ಒಳಪಟ್ಟವರಿಗೆ ಎರಡು ವಿಭಾಗದಲ್ಲಿ ಏರ್ಪಡಿಸಲಾಗಿದೆ.14 ವರ್ಷ ಒಳಪಟ್ಟವರಿಗೆ ತಾ. 6 ರಂದು, 17 ವರ್ಷ ಒಳಪಟ್ಟವರಿಗೆ ತಾ. 7 ರಂದು ಸೋಮವಾರಪೇಟೆ ತಾಲೂಕು ಕೂಡಿಗೆ ಸರ್ಕಾರಿ ಕ್ರೀಡಾ ಶಾಲೆ ಮತ್ತು ಡಯಟ್ ಆಟದ ಮೈದಾನದಲ್ಲಿ ನಡೆಯಲಿದೆ.

ಜಿಲ್ಲಾಮಟ್ಟದ ಖೇಲೋ ಇಂಡಿಯಾ ಯೋಜನೆಯಡಿ ಏರ್ಪಡಿಸುವ ಕ್ರೀಡೆಗಳು: 100ಮೀ, 400 ಮೀ, ಉದ್ದಜಿಗಿತ, ಗುಂಡು ಎಸೆತ, 4x100 ಮೀ. ರಿಲೇ.

ಬಾಲಕ-ಬಾಲಕಿಯರ ವಿಭಾಗದ ಗುಂಪು ಸ್ಪರ್ಧೆಗಳು: ಕಬಡ್ಡಿ, ವಾಲಿಬಾಲ್, ಬ್ಯಾಸ್ಕೆಟ್ ಬಾಲ್, ಷಟಲ್ ಬಾಡ್ಮಿಂಟನ್. ಆಸಕ್ತ ಬಾಲಕ-ಬಾಲಕಿ ಕ್ರೀಡಾಪಟುಗಳು ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 08272-228985 ಅನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಯಲಕ್ಷ್ಮೀ ಬಾಯಿ ತಿಳಿಸಿದ್ದಾರೆ.