ಶನಿವಾರಸಂತೆ, ಅ. 8: ಕೊಡ್ಲಿಪೇಟೆಯಲ್ಲಿ ಕಸಾಪ ಜಿಲ್ಲಾ ಘಟಕ, ಹೋಬಳಿ ಘಟಕದ ವತಿಯಿಂದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಜಾನಪದ ಗೀತೆ ಮತ್ತು ಭಾವಗೀತೆಗಳ ಸ್ಪರ್ಧಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಸಾಪ ಹೋಬಳಿ ಘಟಕದ ಅಧ್ಯಕ್ಷ ಎಂ.ಎಸ್. ಅಬ್ದುಲ್‍ರಬ್ ಅಧ್ಯಕ್ಷತೆಯಲ್ಲಿ ಬಹುಮಾನ ವಿತರಣಾ ಸಮಾರಂಭ ನಡೆಯಿತು. ಹಲಸಿನ ಮರ ಗೌರಮ್ಮ - ಶಾಂತಮಲ್ಲಪ್ಪ ವಿದ್ಯಾಸಂಸ್ಥೆ ಆಡಳಿತ ಮಂಡಳಿ ನಿರ್ದೇಶಕ ಡಾ. ಉದಯ್‍ಕುಮಾರ್ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು.
ಮುಖ್ಯ ಅತಿಥಿಗಳಾಗಿ ಕೊಡ್ಲಿಪೇಟೆ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಸುರೇಶ್, ಬೆಸೂರು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಮಲ್ಲಿಕಾರ್ಜುನ, ಘಟಕದ ನಿರ್ದೇಶಕರಾದ ಕವಿತಾ, ದಯಾನಂದ್, ಮೊರಾರ್ಜಿ ವಸತಿ ಶಾಲೆ ಉಪನ್ಯಾಸಕ ಡಿ.ಪಿ. ಸತೀಶ್ ಇದ್ದರು.
ಸ್ಪರ್ಧಾ ವಿಜೇತರು
ಜಾನಪದ ಗೀತೆ ಸ್ಪರ್ಧೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದಿಂದ ಎಸ್ಮಾ ಪ್ರಥಮ, ವಿಜಯ್‍ಕುಮಾರ್ ದ್ವಿತೀಯ, ಐಶ್ವರ್ಯ ತೃತೀಯ ಸ್ಥಾನ, ಪ್ರೌಢಶಾಲಾ ವಿಭಾಗದಿಂದ ಸುದರ್ಶನ್ ಪ್ರಥಮ, ಸುನಿಲ್ ಕುಮಾರ್ ದ್ವಿತೀಯ, ಚೈತ್ರಾಂಜಲಿ ತೃತೀಯ ಸ್ಥಾನ ಗಳಿಸಿದರು. ಸಾರ್ವಜನಿಕ ವಿಭಾಗದಲ್ಲಿ ಯೋಗೇಂದ್ರ ಪ್ರಥಮ, ವಿನಯ್ ದ್ವಿತೀಯ, ಗೀತಾ ತೃತೀಯ ಸ್ಥಾನ, ಭಾವಗೀತೆ ಸ್ಪರ್ಧೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದಿಂದ ವಿಜಯ್ ಕುಮಾರ್ ಪ್ರಥಮ, ದಿಶಲ್ ದ್ವಿತೀಯ, ರಾಧಿಕಾ ತೃತೀಯ ಹಾಗೂ ಪ್ರೌಢಶಾಲಾ ವಿಭಾಗದಿಂದ ಸುದರ್ಶನ್ ಪ್ರಥಮ, ಸಿಂಚನಾ ದ್ವಿತೀಯ, ಕೃತಜ್ಞಾ ತೃತೀಯ ಸ್ಥಾನ ಗಳಿಸಿದರು. ಸಾರ್ವಜನಿಕ ವಿಭಾಗದಲ್ಲಿ ಗೀತಾ ಪ್ರಥಮ, ಸತೀಶ್ ದ್ವಿತೀಯ, ವಿನಯ್ ತೃತೀಯ ಸ್ಥಾನಗಳಿಸಿ ಬಹುಮಾನ ಸ್ವೀಕರಿಸಿದರು. ತೀರ್ಪುಗಾರರಾಗಿ ಜಾನಪದ ಕಲಾವಿದ ಬೆಸೂರು ಶಾಂತೇಶ್, ಉಪನ್ಯಾಸಕ ಮುರಳೀಧರ್, ಆಕಾಶವಾಣಿ ಕಲಾವಿದ ಸೋಮೇಶ್ ಪಾಲ್ಗೊಂಡಿದ್ದರು.