ಮಡಿಕೇರಿ, ಜ. 15: ತನ್ನದೇ ಆದ ಭಾಷೆ-ಸಾಹಿತ್ಯ, ಸಂಸ್ಕøತಿ, ಪದ್ಧತಿ-ಪರಂಪರೆ, ಹಬ್ಬ, ಉಡುಗೆ-ತೊಡುಗೆ, ಆಹಾರ ಪದ್ಧತಿ, ಮೈಕಟ್ಟನ್ನೊಳ ಗೊಂಡಿದ್ದು ಒಂದು ಪರಿಪೂರ್ಣ ಜನಾಂಗ ಎನಿಸಿಕೊಂಡಿರುವ ಕೊಡವರು ಇತ್ತೀಚಿನ ದಿನಗಳಲ್ಲಿ ಅನ್ಯ ಸಂಸ್ಕøತಿಯ ಹಿಂದೆ ಓಡುತ್ತಿರುವದು ಜನಾಂಗದ ಅವನತಿಯ ಸಂಕೇತ. ಭರತ ಖಂಡದ ರಕ್ಷಣೆಗೆ ದೇಶ ಸೇವೆಯನ್ನು ಪರಂಪರೆಯಾಗಿ ರೂಢಿಸಿಕೊಂಡಿರುವ ಕೊಡವರು ಅಪಾರ ದೇಶ ಭಕ್ತರು. ಭಾರತ ದೇಶದ ವೈವಿಧ್ಯತೆಯಲ್ಲಿ ಕೊಡವ ಸಂಸ್ಕøತಿ ಅಮೋಘವಾದದ್ದು, ಇಂತಹ ಸಂಸ್ಕøತಿಯನ್ನು ಸಂಸ್ಕಾರದೊಂದಿಗೆ ಜನಾಂಗದ ಪರಿಪೂರ್ಣತೆಯನ್ನು ಸಂರಕ್ಷಿಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಬೇಕಿದೆ ಎಂದು ‘ಪೂಮಾಲೆ’ ಪತ್ರಿಕೆಯ ಸಂಪಾದಕ ಅಜ್ಜಿನಿಕಂಡ ಮಹೇಶ್ ನಾಚಯ್ಯ ಹೇಳಿದರು.
ಬೆಂಗಳೂರಿನ ರಾಜರಾಜೇಶ್ವರಿ ನಗರದ ಕ್ರೇಜ್ಹಿ ಪಾರ್ಕ್ನಲಿ ನಡೆದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕೊಡವ ಒಕ್ಕೂಟದ ಪುತ್ತರಿ ಒತ್ತೋರ್ಮೆಯಲ್ಲಿ ಗೌರವಾನ್ವಿತ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ನಾಡು-ನುಡಿ, ಸಂಸ್ಕøತಿಯ ಉನ್ನತಿಗೆ ಪ್ರತಿಯೊಬ್ಬ ಕೊಡವನೂ ಚಿಂತಿಸುವಂತಾಗ ಬೇಕೆಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿ, ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಮಂಡೇಡ ರವಿ ಉತ್ತಪ್ಪ ಮಾತನಾಡಿ, ಪ್ರತಿಯೊಬ್ಬ ತನ್ನ ಹಿಂದಿನ ದಿನಗಳನ್ನು ಮೆಲುಕು ಹಾಕುವಂತಿರಬೇಕು. ಬೆಂಗಳೂರಿಗೆ ಊಟ-ಉದ್ಯೋಗ ಅರಸಿ ಬಂದ ನಾವುಗಳು ಇಂದು ಸ್ಥಿತಿವಂತರಾಗಿ ದ್ದರೂ ಕೊಡಗಿನ ನೆಲವನ್ನು ಮರೆಯುವಂತಿಲ್ಲ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿನ ಬೆಂಗಳೂರು ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ. ಸೋಮಶೇಖರ್, ಕೊಡವರ ಬಗ್ಗೆ ತÀನಗೆ ಅಪಾರ ಗೌರವ, ನಂಬಿಕೆ ಇದೆ. ತÀನ್ನಿಂದಾಗುವಂತಹ ಯಾವದೇ ಕೆಲಸ-ಕಾರ್ಯಗಳನ್ನು ಒಂದಿಷ್ಟೂ ಸಂಕೋಚವಿಲ್ಲದೆ ಕೇಳಿ ಪಡೆದುಕೊಳ್ಳಿ ಎಂದರು.
ಒಕ್ಕೂಟದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ ಮಾತನಾಡಿ, ಫೀ.ಮಾ. ಕಾರ್ಯಪ್ಪ ಕೊಡವ ಒಕ್ಕೂಟವು ಸ್ವಂತ ಕಟ್ಟಡ ನಿರ್ಮಿಸುವ ಸಲುವಾಗಿ ಕೆಂಗೇರಿಯಲ್ಲಿ ಖರೀದಿಸಿ ರುವ ಜಮೀನು ಹಾಗೂ ಮುಂದಿನ ದಿನಗಳಲ್ಲಿ ಮೊದಲ ಹಂತಕ್ಕೆ ರೂ. 3 ಕೋಟಿ ಖರ್ಚಿನಲ್ಲಿ ನಿರ್ಮಾಣ ವಾಗಲಿರುವ ಕಟ್ಟಡ ಕೆಲಸಕ್ಕೆ ದಾನಿಗಳ ಸಹಕಾರ ಕೋರಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಬೆಂಗಳೂರು ಕೊಡವ ಸಮಾಜದ ಮಾಜಿ ಅಧ್ಯಕ್ಷ ಚೆಪ್ಪುಡಿರ ತಿಲಕ್ ಸುಬ್ಬಯ್ಯ ಮಾತನಾಡಿದರು.
ಈ ಸಂದರ್ಭ ಒಕ್ಕೂಟದ ವತಿಯಿಂದ ಮಹೇಶ್ ನಾಚಯ್ಯ, ರವಿ ಉತ್ತಪ್ಪ, ಶಾಸಕ ಎಸ್.ಟಿ. ಸೋಮಶೇಖರ್ ಅವರನ್ನು ಸನ್ಮಾನಿಸಲಾಯಿತು. ಕೈಬುಲಿರ ವಾಣಿ ಪ್ರಾರ್ಥಿಸಿ, ಒಕ್ಕೂಟದ ಗೌರವ ಕಾರ್ಯದರ್ಶಿ ಪೊನ್ನಚೆಟ್ಟಿರ ರಮೇಶ್ ಗಣಪತಿ ಸ್ವಾಗತಿಸಿದರು. ಮಣವಟ್ಟಿರ ಜಯ ಬೆಳ್ಯಪ್ಪ, ಕಂಬೆಯಂಡ ಗೀತಾ ನಿರೂಪಿಸಿ, ಮಾಳೆಯಂಡ ಆಶಾ ಉತ್ತಪ್ಪ ವಂದಿಸಿದರು.