ಸೋಮವಾರಪೇಟೆ,ಡಿ.9: ಕರ್ನಾಟಕ ಜನಪದ ಪರಿಷತ್‍ನ ಸೋಮವಾರಪೇಟೆ ಹೋಬಳಿ ಘಟಕ ರಚನೆ ಸಂಬಂಧ ಇಲ್ಲಿನ ಪತ್ರಿಕಾಭವನದಲ್ಲಿ ಪದಾಧಿಕಾರಿಗಳ ಸಭೆ ನಡೆಯಿತು. ಹೋಬಳಿ ಘಟಕದ ಅಧ್ಯಕ್ಷರಾಗಿ ಎಸ್.ಎ. ಮುರಳೀಧರ್, ಉಪಾಧ್ಯಕ್ಷರುಗಳಾಗಿ ಸಂಧ್ಯಾ ಕೃಷ್ಣಪ್ಪ, ನ.ಲ. ವಿಜಯ ಆಯ್ಕೆಯಾದರು. ಪರಿಷತ್‍ನ ಪ್ರಧಾನ ಕಾರ್ಯದರ್ಶಿ ಯಾಗಿ ರುಬೀನಾ, ಸಹ ಕಾರ್ಯದರ್ಶಿಯಾಗಿ ಪುಟ್ಟಣ್ಣ ಆಚಾರ್ಯ, ಸಂಘಟನಾ ಕಾರ್ಯದರ್ಶಿಯಾಗಿ ಮೀರಾ ರಾಜೇಂದ್ರ, ಖಜಾಂಚಿಯಾಗಿ ಎಸ್.ಪಿ. ಪ್ರಸನ್ನ ಅವರುಗಳನ್ನು ನೇಮP Àಗೊಳಿಸಲಾಯಿತು.

ನಿರ್ದೇಶಕರುಗಳಾಗಿ ಅನಿತಾ ಶುಭಾಕರ್, ಕಾಂಚನಾ, ಬಿ.ಪಿ. ಸುಮತಿ, ಆಶಾ, ಬಿ.ಎ. ಭಾಸ್ಕರ್, ದೀಪಿಕಾ, ಸುಶೀಲ ಹಾನಗಲ್, ದಾಮೋದರ್, ಎಸ್.ಪಿ. ಮಾಚಯ್ಯ, ಚಂದ್ರಾವತಿ ರುದ್ರಪ್ಪ, ಸುದರ್ಶನ್, ಜವರಪ್ಪ, ಸುರೇಶ್‍ಶೆಟ್ಟಿ, ಗೌರವ ಸಲಹೆಗಾರರು ಗಳನ್ನಾಗಿ ನಳಿನಿ ಗಣೇಶ್, ಹಾ.ತಿ. ಜಯಪ್ರಕಾಶ್ ಮತ್ತು ವಜೀರ್ ಅವರುಗಳನ್ನು ಆಯ್ಕೆ ಮಾಡಲಾಯಿತು.

ಸೋಮವಾರಪೇಟೆ ವಿಭಾಗದಲ್ಲಿ ಜನಪದ ಪರಿಷತ್ ವತಿಯಿಂದ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು. ಶೀಘ್ರದಲ್ಲೇ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಜನಪದ ನೃತ್ಯ ಸ್ಪರ್ಧೆ ಏರ್ಪಡಿಸುವ ಬಗ್ಗೆ ಎಸ್.ಎ. ಮುರಳೀಧರ್ ಹೇಳಿದರು.

ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಜನಪದ ಮ್ಯೂಸಿಯಂ ನಿರ್ಮಿಸುವ ಬಗ್ಗೆ ಯೋಜನೆ ರೂಪಿಸಲಾಗಿದ್ದು, ಕೊಡಗಿನ ಜನಪದ ಕಲಾವಿದರನ್ನು ಒಳಗೊಂಡಂತೆ ಸಮಗ್ರ ಮಾಹಿತಿಯ ಸಾಕ್ಷ್ಯಚಿತ್ರ ತಯಾರಿಸುವ ಬಗ್ಗೆಯೂ ಕಾರ್ಯಗಳು ನಡೆಯುತ್ತಿವೆ ಎಂದು ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ವಿಜಯ್ ಹಾನಗಲ್ ತಿಳಿಸಿದರು.

ಜನಪದ ಪರಿಷತ್‍ನ ವಾರ್ಷಿಕ ಸದಸ್ಯತ್ವ 250, ಆಜೀವ ಸದಸ್ಯತ್ವ 1000 ರೂ. ಗಳಾಗಿದ್ದು, ಜನಪದ ಕಲಾವಿದರು, ಜನಪದ ಕಲೆಯ ಬಗ್ಗೆ ಆಸಕ್ತಿ ಇರುವವರು ಮಾತ್ರವಲ್ಲದೆ, ಜನಪದ ಸಂಸ್ಕøತಿ, ಆಚಾರ ವಿಚಾರಗಳನ್ನು ಪ್ರೋತ್ಸಾಹಿಸುವ ಎಲ್ಲರೂ ಪರಿಷತ್‍ನ ಸದಸ್ಯರಾಗ ಬಹುದು ಎಂದರು.

ಸಭೆಯಲ್ಲಿ ತಾಲೂಕು ಸಮಿತಿಯ ಗೌರವಾಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಉಪಾಧ್ಯಕ್ಷೆ ಶರ್ಮಿಳಾ ರಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.