ಶ್ರೀಮಂಗಲ, ಸೆ. 9: ಪೊನ್ನಂಪೇಟೆ ವಕೀಲರ ಸಂಘದ ಅಧ್ಯಕ್ಷರಾಗಿದ್ದ ಮಚ್ಚಮಾಡ ಜಗನ್ ನಾಣಯ್ಯ (43) ಅವರು ಶುಕ್ರವಾರ ಬೆಳಿಗ್ಗೆ ತಮ್ಮ ತಾವಳಗೇರಿ ಗ್ರಾಮದಲ್ಲಿರುವ ಮನೆಯಲ್ಲಿ ನಿಧನರಾದರು.
ವೀರಾಜಪೇಟೆ ತಾಲೂಕು ಬಿ.ಜೆ.ಪಿ. ಕಾನೂನು ಸಂಚಾಲಕರಾಗಿದ್ದ ಅವರು ಕಳೆದ 3 ತಿಂಗಳಿನಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ತಾಯಿಯನ್ನು ಅಗಲಿದ್ದಾರೆ.