ಸಿದ್ದಾಪುರ, ಅ. 19: ಚೆಟ್ಟಳ್ಳಿ ಚೇರಳ ಗೌಡ ಸಂಘದ ವಾರ್ಷಿಕ ಮಹಾಸಭೆ ಗ್ರಾಮದ ಮರದಾಳು ಐನ್‍ಮನೆಯಲ್ಲಿ ಸಂಘದ ಅಧ್ಯಕ್ಷ ಅಯ್ಯಂಡ್ರ ಸಿ. ರಾಘವಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು.

ಮಹಿಳೆಯರಿಗೆ ವಿವಿಧ ಸ್ಪರ್ಧೆಗಳು ನಡೆದವು. ದೈವಾಧೀನರಾದ ಸಂಘದ ಸದಸ್ಯರು ಹಾಗೂ ಇತ್ತೀಚೆಗೆ ಪಾಕಿಸ್ತಾನದ ಭಯೋತ್ಪಾದಕರ ಧಾಳಿಯಲ್ಲಿನ ಉರಿ ಪ್ರದೇಶದಲ್ಲಿ ಹುತ್ಮಾತರಾದ ಭಾರತೀಯ ವೀರ ಯೋಧರ ಆತ್ಮಗಳಿಗೆ ಶಾಂತಿ ಕೋರಿ ಸಭೆಯಲ್ಲಿ ಎರಡು ನಿಮಿಷಗಳ ಮೌನಾಚರಣೆ ಮಾಡಲಾಯಿತು.

ಸಂಘದ ಅಧ್ಯಕ್ಷ ಅಯ್ಯಂಡ್ರ ಸಿ. ರಾಘವಯ್ಯ ಸಭೆಯ ಕುರಿತು ಮಾತನಾಡಿ, ಸಂಘದ ಪ್ರತಿಯೊಬ್ಬ ಸದಸ್ಯರು ವಾರ್ಷಿಕ ಮಹಾಸಭೆ ಹಾಗೂ ಮಾಸಿಕ ಸಭೆಗಳಿಗೆ ತಪ್ಪದೆ ಹಾಜರಾಗಬೇಕು. ಮೂರು ಮಾಸಿಕ ಸಭೆಗೆ ಗೈರು ಹಾಜರಾಗುವ ಸದಸ್ಯರು, ಮತದಾನದ ಹಕ್ಕಿನೊಂದಿಗೆ ಸದಸ್ಯತ್ವ ಕಳೆದುಕೊಳ್ಳುತ್ತಾರೆ