*ಗೋಣಿಕೊಪ್ಪಲು, ಸೆ. 23: ಕಳೆದ ಹತ್ತು ವರ್ಷಗಳಲ್ಲಿ ತಾ.ಪಂ. ಅನುದಾನದಲ್ಲಿ ಚೀಣಿಹಡ್ಲು, ಆಯಿರ ಸುಳಿ ಹಾಡಿಗಳ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದು ಜಿ.ಪಂ. ಸದಸ್ಯೆ ಪಂಕಜ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಹಾಡಿಗಳ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಿದ್ದೇನೆ. ಏಳಿಗೆಯನ್ನು ಸಹಿಸದ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಆಯಿರ ಸುಳಿ ಹಾಡಿಯ ನಿವಾಸಿ ಪಿ.ಟಿ. ರಾಜು ಅವರ ಮನೆಯ ಹತ್ತಿರ ಸಾರ್ವಜನಿಕ ತೆರೆದ ಬಾವಿ ನಿರ್ಮಾಣ ರೂ. 50 ಸಾವಿರ, ಪಿ.ಎಂ. ರಾಮು ಅವರ ಮನೆ ಸಮೀಪ ತೆರೆದ ಬಾವಿ ನಿರ್ಮಾಣಕ್ಕೆ ರೂ. 70 ಸಾವಿರ ಅನುದಾನ ಬಳಕೆಯಾಗಿದೆ.

ಚೀಣಿಹಡ್ಲು ಹಾಡಿಯ ಜೇನುಕುರುಬರ ಶಾರದ ಮನೆ ಹತ್ತಿರ ತೆರೆದ ಬಾವಿಗೆ ರೂ. 60 ಸಾವಿರ, ಸುಬ್ಬ ಗಂಗೆ ಮನೆ ಹತ್ತಿರ ತೆರೆದ ಬಾವಿ ನಿರ್ಮಾಣ 50 ಸಾವಿರ, ಮರಪಾಲ ಮುಖ್ಯ ರಸ್ತೆಯಿಂದ ಚೀಣಿಹಡ್ಲು ಹಾಡಿಗೆ ಹೋಗಲು ಕಾಲು ಸೇತುವೆ ನಿರ್ಮಾಣಕ್ಕೆ ರೂ. 70 ಸಾವಿರ, ಮಲ್ಲಜ್ಜನ ಮನೆ ಹತ್ತಿರ ಕುಡಿಯುವ ನೀರಿನ ಮಿನಿ ಟ್ಯಾಂಕ್ ನಿರ್ಮಾಣ ಮತ್ತು ಅಂಗನವಾಡಿ ಪಕ್ಕ ಪೈಪ್ ಲೈನ್ ವಿಸ್ತರಣೆಗೆ ರೂ. 85 ಸಾವಿರ ಪೊನ್ನು ಅವರ ಮನೆ ಹತ್ತಿರ ಕುಡಿಯುವ ನೀರಿನ ಮಿನಿ ಟ್ಯಾಂಕ್ ನಿರ್ಮಾಣಕ್ಕೆ ರೂ. 80 ಸಾವಿರ, ಮುಖ್ಯ ರಸ್ತೆ ಚೀನಿಹಡ್ಲು ವಿಜಯ್ ಅವರ ಮನೆಗೆ ಹಾದು ಹೋಗುವ ಕಾಲು ಸೇತುವೆ ನಿರ್ಮಾಣಕ್ಕೆ ರೂ. 50 ಸಾವಿರ, ಪಿ.ಕೆ. ರಾಜು ಅವರ ಮನೆ ಹತ್ತಿರ ಸಾರ್ವಜನಿಕ ತೆರೆದ ಬಾವಿ ನಿರ್ಮಾಣಕ್ಕೆ ರೂ. 70 ಸಾವಿರ, ಗೋಪಾಲ ಸುಬ್ಬಮ್ಮ ಮನೆ ಹತ್ತಿರ ಶೌಚಾಲಯ ಮತ್ತು ಸ್ನಾನ ಗೃಹ ನಿರ್ಮಾಣಕ್ಕೆ ರೂ. 30 ಸಾವಿರ, ಪಿ.ಸಿ. ಬೋಜಪ್ಪ ಮನೆ ಹತ್ತಿರ ಶೌಚಾಲಯ ಮತ್ತು ಸ್ನಾನ ಗೃಹ ನಿರ್ಮಾಣಕ್ಕೆ ರೂ. 30 ಸಾವಿರ ತಾ.ಪಂ. ಅನುದಾನದಿಂದ ಬಳಸಿ ಅಭಿವೃದ್ಧಿ ಕಾರ್ಯ ಮಾಡಲಾಗಿದೆ.

ಪೂರ್ಣ ಮಾಹಿತಿ ಅರಿಯದ ಕೆಲವರು ಕರ್ತವ್ಯ ನಿಷ್ಠೆಯನ್ನು ಸಹಿಸಲಾಗದೆ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ಗ್ರಾ.ಪಂ. ಅಧ್ಯಕ್ಷ ಶಿವು ಕುಮಾರ್ ಹಾಜರಿದ್ದರು.