ವೀರಾಜಪೇಟೆ, ಡಿ. 8: ಭಾರತ ದೊಡ್ಡ ದೇಶವಾಗಿದ್ದರೂ ಕ್ರೀಡಾ ಪಟುಗಳ ಕೊರತೆ ಇಲ್ಲ. ಕ್ರೀಡೆಗೆ ಸಂಬಂಧಿಸಿದಂತೆ ಯೋಜನೆಗಳನ್ನು ಜಾರಿ ಮಾಡಿದರೆ ಸಾಲದು, ಗ್ರಾಮೀಣ ಪ್ರದೇಶದಲ್ಲಿರುವಂತ ಕ್ರೀಡಾ ಪಟುಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವಂತಾಗಬೇಕು ಎಂದು ಜೆ.ಡಿ.ಎಸ್.ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ಸಮಾಜ ಸೇವಕ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.

ವೀರಾಜಪೇಟೆ ಸಮೀಪದ ಗುಂಡಿಗೆರೆಯ ಯೂತ್ ಕ್ಲಬ್ ಜಿ.ವೈ.ಸಿ. ಸಂಘಟನೆ ವತಿಯಿಂದ ಆಯೋಜಿಸಲಾಗಿದ್ದ ವಾಲಿಬಾಲ್ ಪಂದ್ಯಾವಳಿಯ ಅಂತಿಮ ಪಂದ್ಯವನ್ನು ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಸಂಕೇತ್ ಪೂವಯ್ಯ, ಜಿ.ವೈ.ಸಿ. ಯೂತ್ ಕ್ಲಬ್ ಗ್ರಾಮೀಣ ಪ್ರದೇಶದಲ್ಲಿರುವ ಕ್ರೀಡಾ ಪಟುಗಳನ್ನು ಗುರುತಿಸಿ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಕ್ರೀಡಾ ಪಟುಗಳಿಗೆ ಪ್ರೋತ್ಸಾಹ ನೀಡಿರುವದು ಶ್ಲಾಘನೀಯ. ಹಿಂದೆ 1895 ರ ಫೆಬ್ರವರಿ 9ರಂದು ಹೊಲಿಯೋಕ್ ಎಂಬ ಅಮೇರಿಕಾÀ ನಗರದಲ್ಲಿ ವಿಲ್ಲಿಂ. ಜಿ.ಮೊರ್ಗನ್ ಎಂಬ ವ್ಯಕ್ತಿ ಮೊದಲಿಗೆ ಮಿಂಟೋನೆಟ್ ಎಂಬ ಚೆಂಡಿನ ಆಟವನ್ನು ಮನೋರಂಜನೆಗಾಗಿ ಶುರು ಮಾಡಿದ್ದರು. ನಂತರ ಅಂತರರಾಷ್ಟ್ರಿಯ ಪ್ರದರ್ಶನವು ತರಬೇತಿ ಶಾಲೆಯಲ್ಲಿ ನಡೆಯುವ ಸಂದರ್ಭ ವಾಲಿಬಾಲ್ ಪಂದ್ಯ ಎಂಬ ಹೆಸರಿಡಲಾಯಿತು. 1947ರಲ್ಲಿ ಅಂತರರಾಷ್ಟ್ರೀಯ ವಾಲಿಬಾಲ್ ಸಂಸ್ಥೆ ಪ್ರಾರಂಭವಾಗಿ ಅಂತರ್ರಾಷ್ಟ್ರೀಯ ಪಂದ್ಯಾವಳಿ ಆರಂಭವಾಯಿತು. 1949ರಲ್ಲಿ ಪುರುಷರಿಗೆ ಹಾಗೂ 1952ರಲ್ಲಿ ಮಹಿಳೆಯರಿಗೆ ಪಂದ್ಯಾಟದ ಬಗ್ಗೆ ಮಾಹಿತಿ ನೀಡಲಾಯಿತು. 133 ದೇಶಗಳು ವಾಲಿಬಾಲ್ ಪಂದ್ಯವನ್ನು ಆಡುತ್ತಿವೆ. ಅದರಲ್ಲಿ ಪ್ರಥಮ ಬ್ರೆಜಿಲ್, ದ್ವಿತೀಯ ರಷ್ಯಾ ಹಾಗೂ ಮೂರನೇ ಸ್ಥಾನದಲ್ಲಿ ಇಟಲಿ ಇದೆ. ನಮ್ಮ ದೇಶದಲ್ಲಿ ಪುರುಷರ ವಿಭಾಗ 34ನೇ ಸ್ಥಾನದಲ್ಲಿದೆ. ಹಾಗೂ ಮಹಿಳಾ ವಿಭಾಗ 100ನೇ ಸ್ಥಾನದಲ್ಲಿದೆ ಎಂದು ಹೇಳಿದರು.

ಅಂತಿಮ ಪಂದ್ಯಾಟದಲ್ಲಿ ಕಡಂಗ ಲಿಂಬ್ರಾ ಫ್ರೆಂಡ್ಸ್ ತಂಡ ಹಾಗೂ ಎಡಪಾಲ ಸ್ಪೋಟ್ರ್ಸ್ ತಂಡದ ಮಧೆÉ್ಯ ನಡೆದ ಪಂದ್ಯದಲ್ಲಿ ಕಡಂಗ ಲಿಂಬ್ರಾ ಫ್ರೆಂಡ್ಸ್ ತಂಡ ಮೊದಲ ಬಹುಮಾನವನ್ನು ಪಡೆದುಕೊಂಡರೆ, ಎಡಪಾಲ ಸ್ಪೋಟ್ರ್ಸ್ ತಂಡ ಎರಡನೆ ಬಹುಮಾನಕ್ಕೆ ತೃಪ್ತಿ ಪಡಬೆಕಾಯಿತು.

ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಸದಸ್ಯ ಮಾಳೇಟಿರ ಪ್ರಶಾಂತ್, ಜೆ.ಡಿ.ಎಸ್ ಪಕ್ಷದ ಸಿ.ಎ. ನಾಶಿರ್, ಕಾಂಗ್ರೆಸ್‍ನ ಪೋರೆರ ಬಿದ್ದಪ್ಪ, ಮುಸ್ಲಿಂ ಹಿತರಕ್ಷಣಾ ಸಮಿತಿಯ ಪಿ.ಎ. ಹನೀಫ್, ಕೊಟ್ಟೋಳಿ ಗಾ.ಪಂ. ಸದಸ್ಯ ಇಸ್ಮಾಯಿಲ್, ಪಟ್ಟಡ ಮನು, ಬೇಟೋಳಿ ಗ್ರಾ.ಪಂ. ಸದಸ್ಯರಾದ ಮುಸ್ತಾಫ, ಫಾರೂಕ್, ಮನು ಹಾಗೂ ಗುಂಡಿಗೆರೆ ಯೂತ್ ಕ್ಲಬ್ ಅಧ್ಯಕ್ಷ ಸೈದಲ್ ಅವಿ, ಉಪಾಧ್ಯಕ್ಷ ಉಭೇದ್, ಕೆ.ಎಸ್. ರಫೀಕ್, ಎಂ.ಎಂ. ಇಸ್ಮಾಯಿಲ್, ಎಂ.ಎಸ್. ರಫೀಕ್, ಶಿಯಾಬ್, ಸಾದುಲಿ, ಶಫಿಕ್, ಎಂ.ಎಸ್. ಮಹಮ್ಮದ್ ಮುಂತಾದವರು ಉಪಸ್ಥಿತರಿದ್ದರು.