ಶ್ರೀಮಂಗಲ, ಆ. 13: ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮ ವiದ್ಯ ಮಾರಾಟ ದಂದೆ ಮಿತಿಮೀರಿದ್ದು, ಕೂಡಲೇ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಂಡು ಆಯಾಯ ಗ್ರಾಮ ಪಂಚಾಯಿತಿ ಸದಸ್ಯರು ಕ್ಷೇತ್ರದಲ್ಲಿ ಯಾರು ಈ ಅಕ್ರಮದಲ್ಲಿ ತೊಡಗಿದ್ದಾರೊ ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಗ್ರಾಮ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಹುದಿಕೇರಿ ಕೊಡವ ಸಮಾಜ ಸಭಾಂಗಣದಲ್ಲಿ, ಗ್ರಾ.ಪಂ. ಅಧ್ಯಕ್ಷೆ ಮತ್ರಂಡ ರೇಖಾ ಪೊನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾದಾಗ ಪಂಚಾಯಿತಿ ಪಿ.ಡಿ.ಒ. ಸೆಲ್ವಿನ್ ಮಾತನಾಡಿ ಕಳೆದ ಹಲವು ಸಮಯಗಳಿಂದ ಈ ವಿಷಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದು, ಪಂಚಾಯಿತಿಯಿಂದ ಆದೇಶವನ್ನು ಹೊರಡಿಸಿದರೂ ಈ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಈ ವ್ಯಾಪ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಪಾತ್ರ ಅತ್ಯಮೂಲ್ಯವಾಗಿದ್ದು ಈ ನಿಟ್ಟಿನಲ್ಲಿ ಯಾರು ಈ ಅಕ್ರಮದಲ್ಲಿ ತೊಡಗಿದ್ದಾರೋ ಅವರು ಕೂಡಲೇ ದಂಧೆಯನ್ನು ನಿಲ್ಲಿಸದಿದ್ದರೆ ಅವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವದಾಗಿ ಹೇಳಿದರು. ಇದಕ್ಕೆ ಧÀ್ವನಿಗೂಡಿಸಿದ ಸರ್ವಸದಸ್ಯರು ಹಾಗೂ ನಾಗರೀಕರು, ಅಕ್ರಮ ಸಾರಾಯಿ ದಂಧೆಯಲ್ಲಿ ತೊಡಗಿದವರು, ಅವರಾಗೇ ಬಿಟ್ಟರೆ ಒಳ್ಳೆಯದು ಇಲ್ಲದಿದ್ದರೇ ಮಾಹಿತಿ ಕಲೆ ಹಾಕಿ ಇಲಾಖೆಗೆ ಒಪ್ಪಿಸಿ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದರು.
ಕಳೆದ 60 ವರ್ಷಗಳಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸವಿಲೇವಾರಿ ಮಾಡಲು ಒಂದು ನಿರ್ದಿಷ್ಟ ಜಾಗ ಗುರುತಿಸಲು ಸಾಧ್ಯವಾಗಲಿಲ್ಲ, ಕಸವನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದು. ಇದರ ಬಗ್ಗೆ ಗಮನ ಹರಿಸಬೇಕು ಎಂದು ನೆಲ್ಲಿರ ಸೋಮಯ್ಯ ಪ್ರಸ್ತಾಪಿಸಿದಾಗ, ಮಾಹಿತಿ ನೀಡಿದ ಅಭಿವೃದ್ಧಿ ಅಧಿಕಾರಿ ಪಂಚಾಯಿತಿಯಿಂದ ಈಗಾಗಲೇ ಹೈಸೊಡ್ಲೂರುವಿನಲ್ಲಿ ಸ್ಥಳ ಖರೀದಿ ಮಾಡಲಾಗಿದೆ. ಆದರೆ ಅಲ್ಲಿ ಕಸವಿಲೇವಾರಿ ಮಾಡಲು ತಕರಾರು ಬಂದ್ದಿದ್ದು ತೊಂದರೆಯಾಗಿದೆ. ಸುಮಾರು 4 ಲಕ್ಷ ವೆಚ್ಚದಲ್ಲಿ ಖರೀದಿ ಮಾಡಿರುವ ಸ್ಥಳ ಸುಮ್ಮನೆ ಬಿದ್ದಿದೆ ಎಂದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸೋಮಯ್ಯ, ಆ ಜಾಗದಲ್ಲಿ ಕಸವಿಲೇವಾರಿ ಮಾಡಿದರೆ ನೀರು ಈ ಭಾಗದಲ್ಲಿ ಹರಿದು ಹೊಳೆಗೆ ಸೇರುವದರಿಂದ ತೊಂದರೆ ಅನುಭವಿಸುವಂತಾಗುತ್ತದೆ ಎಂದು ಹೇಳಿದರು. ಇದಕ್ಕೆ ಸಮಾಜಾಯಿಸಿಕೆ ನೀಡಿದ ಗ್ರಾ.ಪಂ. ಸದಸ್ಯ ಮಿದೇರಿರ ನವಿನ್, ಸೋಮಯ್ಯ ಹೇಳುತ್ತಿರುವದು ಸತ್ಯವಾಗಿದ್ದು, ಖರೀದಿ ಸಮಯದಲ್ಲಿ ಪಂಚಾಯಿತಿಗೆ ಮಾರಾಟಗಾರರು ಮೋಸಮಾಡಿದ್ದು ಯಾರದ್ದೋ ಸ್ಥಳವನ್ನು ಮಾರಾಟ ಮಾಡಲಾಗಿದೆ. ಆದ್ದರಿಂದ ಕೂಡಲೇ ಹದ್ದು ಬಸ್ತು ಸರ್ವೆ ತಂದು ನಿಗದಿತ ಸ್ಥಳ ಗುರುತು ಮಾಡಿ, ವೈಜ್ಞಾನಿಕವಾಗಿ ಕಸವಿಲೇವಾರಿ ಮಾಡಲು ಸಾಧ್ಯವಾದರೆ ಅಲ್ಲೆ ಮಾಡುವ, ಇಲ್ಲದಿದ್ದರೆ ಬೇರೆಕಡೆ ಸ್ಥಳಾಂತರ ಮಾಡುವ ಎಂದು ತಿಳಿಸಿದರು.
ಕೋಟ್ಯಾಂತರ ರೂಪಾಯಿ ಖರ್ಚುಮಾಡಿ ಆಸ್ಪತ್ರೆ ನಿರ್ಮಿಸಿದರು ಕೇಂದ್ರದಲ್ಲಿ ವೈದÀ್ಯರು ಮತ್ತು ಅಗತ್ಯ ಜೌಷಧಿಗಳು ದೊರೆಯುತ್ತಿಲ್ಲ, ಕಳೆದ 4-5 ವರ್ಷಗಳ ಹಿಂದೆ ಇಲ್ಲಿ ವೈದ್ಯಾಧಿಕಾರಿಗಳಾಗಿದ್ದ ಡಾ. ಜಗದೀಶ್ ಈಗ ನಾಪೋಕ್ಲುವಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ವೇತನ ಮಾತ್ರ ಹುದಿಕೇರಿ ಆಸ್ಪತ್ರೆಯಿಂದ ಸಂದಾಯವಾಗುತ್ತಿದ್ದು, ಇದನ್ನು ಕೂಡಲೇ ಸರಿಪಡಿಸುವಂತೆ ಆಗ್ರಹಿಸಲಾಯಿತು. ಇದಕ್ಕೆ ಮಾಹಿತಿ ನೀಡಿದ ತಾ.ಪಂ. ಉಪಾಧ್ಯಕ್ಷ ನೆಲ್ಲಿರ ಚಲನ್ ಜಿಲ್ಲೆಯಾದ್ಯಂತ ವೈದÀ್ಯರ ಕೊರತೆ ಇದ್ದು ಜಿಲ್ಲಾ ವೈದ್ಯಾಧಿಕಾರಿಗಳ ಜೊತೆ ಮಾತನಾಡಿ ವಾರಕ್ಕೆ 2 ದಿನ ವೈದ್ಯರನ್ನು ನೇಮಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವದು ಎಂದು ತಿಳಿಸಿದರು.
ಸಭೆಯಲ್ಲಿ ಜಿ.ಪಂ. ಸದಸ್ಯ ಪ್ರಕಾಶ್, ನೋಡಲ್ ಅಧಿಕಾರಿ ಡಾ.ನಮೃತ ಪೂಣಚ್ಚ, ಗ್ರಾ.ಪಂ. ಉಪಾಧ್ಯಕ್ಷೆ ಸುನಿತಾ ವಸಂತ್ ಹಾಗೂ ಸದಸ್ಯರು ಹಾಜರಿದ್ದರು.