ವೀರಾಜಪೇಟೆ, ಸೆ. 12: ಇತಿಹಾಸದ ಪುಟವನ್ನು ಸೇರಿರುವ ಐತಿಹಾಸಿಕ ಗೌರಿ-ಗಣೇಶನ ಹಬ್ಬ ಒಮ್ಮತ, ಸೌಹಾರ್ದತೆ ಸಾಮರಸ್ಯವನ್ನು ಬೆಸೆಯುವಂತಹ ಹಬ್ಬವಾಗಿದೆ. ಕೊಡಗು ಪುಟ್ಟ ಜಿಲ್ಲೆಯಾದರೂ ಗಡಿನಾಡಿನ ವೀರಾಜಪೇಟೆಯಲ್ಲಿ ಅನೇಕ ವರ್ಷಗಳಿಂದಲೂ ಆಚರಿಸಿಕೊಂಡು ಬರುತ್ತಿರುವ ಗೌರಿ-ಗಣೇಶೋತ್ಸವ ರಾಜ್ಯದಲ್ಲಿಯೇ ದಾಖಲೆ ನಿರ್ಮಿಸಿದೆ ಎಂದು ಜಾತ್ಯತೀತ ಜನತಾದಳದ ಜಿಲ್ಲಾ ಸಮಿತಿ ಕಾರ್ಯಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.ವೀರಾಜಪೇಟೆ ಬಸವೇಶ್ವರ ದೇವಾಲಯದ ಗೌರಿ-ಗಣೇಶೋತ್ಸವ ಸಮಿತಿಯಿಂದ ಹಮ್ಮಿಕೊಂಡಿದ್ದ ಸಾಂಸ್ಕøತಿಕ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಕೇತ್ ಅವರು ವೀರಾಜಪೇಟೆ ಗಣೇಶೋತ್ಸವಕ್ಕೆ ಸರಕಾರ ದಸರಾ ಹಬ್ಬಕ್ಕೆ ನೀಡುವಂತಹ ಉತ್ತೇಜನೆಯ ಅಗತ್ಯ ಅನುದಾನ ಒದಗಿಸಬೇಕು ಎಂದರು.

ಈ ಸಂದರ್ಭ ಎನ್.ಜಿ. ಕಾಮತ್ ದಂಪತಿಯನ್ನು ಸಂಕೇತ್ ಪೂವಯ್ಯ ಸನ್ಮಾನಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಎನ್.ಜಿ. ಕಾಮತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಪಟ್ಟಣ ಪಂಚಾಯಿತಿ ಹಿರಿಯ ಸದಸ್ಯ ಹಾಗೂ ಕ್ರೀಡೋತ್ಸವ ಸಮಿತಿ ಅಧ್ಯಕ್ಷ ಕೆ.ಎನ್. ವಿಶ್ವನಾಥ್, ವಕೀಲರ ಸಂಘದ ಉಪಾಧ್ಯಕ್ಷ ವಿ.ಜಿ. ರಾಕೇಶ್, ಡಾ,ಪ್ರಸಾದ್ ಮಾತನಾಡಿದರು. ಸಮಿತಿಯ ಪುಷ್ಪರಾಜ್, ಶಾಂತ್‍ರಾಮ್, ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು,

ಎನ್. ರವೀಂದ್ರ ಕಾಮತ್ ಸ್ವಾಗತಿಸಿದರು. ನರೇಂದ್ರ ಕಾಮತ್ ವಂದಿಸಿದರು. ಶಿವಮೊಗ್ಗದ ಜಯಶೀಲನ್ ಗೀತಾ ಆರ್ಕೆಸ್ಟ್ರಾ ತಂಡದಿಂದ ರಸ ಮಂಜರಿ ಕಾರ್ಯಕ್ರಮ ನಡೆಯಿತು.