ಮಡಿಕೇರಿ, ಅ. 15: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರತಿ ವರ್ಷ ನೀಡುತ್ತಿರುವ ಕೊಡಗಿನ ಕಥೆಗಾರ್ತಿ ಗೌರಮ್ಮ ದತ್ತಿ ನಿಧಿ ಪ್ರಶಸ್ತಿಯ 2015-16ನೇ ಸಾಲಿನ ಗೌರಮ್ಮ ದತ್ತಿ ನಿಧಿ ಪ್ರಶಸ್ತಿಗೆ ಕೊಡಗು ಜಿಲ್ಲಾ ಮಹಿಳಾ ಸಾಹಿತಿಗಳಿಂದ ಕೃತಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಲೇಖಕರು ತಮ್ಮ ಒಂದು ಕೃತಿಯ ಮೂರು ಪ್ರತಿಗಳನ್ನು ದಿನಾಂಕ ಅಕ್ಟೋಬರ್ 28ರ ಒಳಗೆ ಕನ್ನಡ ಸಾಹಿತ್ಯ ಪರಿಷತ್ ಕಛೇರಿ, ಕೋಟೆ ಆವರಣ, ಮಡಿಕೇರಿ ಇಲ್ಲಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ತಲುಪಿಸುವಂತೆ ಜಿಲ್ಲಾ ಕಸಾಪ ಅಧ್ಯಕ್ಷರಾದ ಲೋಕೇಶ್‍ಸಾಗರ್ ತಿಳಿಸಿದ್ದಾರೆ.

ಈ ಹಿಂದೆ ಪ್ರಶಸ್ತಿಗೆ ಭಾಜನರಾದ ಸಾಹಿತಿಗಳನ್ನು ಹೊರತು ಪಡಿಸಿ ಉಳಿದಂತೆ ಮಹಿಳಾ ಸಾಹಿತಿಗಳು ಸ್ಪರ್ಧೆಗೆ ಕೃತಿಗಳನ್ನು ನೀಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ, ದೂರವಾಣಿ ಸಂಖ್ಯೆ;-8277066123 ಸಂಪರ್ಕಿಸಬಹುದಾಗಿ ಜಿಲ್ಲಾ ಕಸಾಪ ಅಧ್ಯಕ್ಷರಾದ ಲೋಕೇಶ್ ಸಾಗರ್ ತಿಳಿಸಿದ್ದಾರೆ.