ಗೋಣಿಕೊಪ್ಪಲು, ಜ. 7: ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಒಟ್ಟು 12 ಸ್ಥಾನಕ್ಕೆ ಚುನಾವಣೆ ನಡೆಯಬೇಕಿದ್ದು, ಪೆÇನ್ನಂಪೇಟೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಕಾಡ್ಯಮಾಡ ಚೇತನ್ ಹಾಗೂ ಪಕ್ಷೇತರ ಅಭ್ಯರ್ಥಿ ಎಂ.ಎ. ಬಿದ್ದಪ್ಪ ನಾಮಪತ್ರವನ್ನು ಹಿಂತೆಗೆದುಕೊಂಡಿದ್ದರಿಂದಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಚಿಯಕ್‍ಪೂವಂಡ ಸುಬ್ರಮಣಿ ಅವಿರೋಧ ಆಯ್ಕೆಯಾಗಿದ್ದಾರೆ. ಪೆÇನ್ನಂಪೇಟೆ ಕ್ಷೇತ್ರ ಹೊರತು ಪಡಿಸಿ ಉಳಿದ 11 ಕ್ಷೇತ್ರಗಳಿಗೆ ತಾ. 12 ರಂದು ಚುನಾವಣೆ ನಡೆಯಲಿದ್ದು, ಒಟ್ಟು 23 ಮಂದಿ ಕಣದಲ್ಲಿದ್ದು ಬಿರುಸಿನ ಮತಯಾಚನೆಯಲ್ಲಿ ತೊಡಗಿಸಿಕೊಂಡಿರುವದು ಕಂಡು ಬಂದಿದೆ.

ಗೋಣಿಕೊಪ್ಪಲು ಎಪಿಎಂಸಿ ಚುನಾವಣೆಯಲ್ಲಿ ಒಟ್ಟು 30,866 ಮತದಾರರು ಮತದಾನದಲ್ಲಿ ಪಾಲ್ಗೊಳ್ಳಬೇಕಾಗಿದ್ದು, ಇದೀಗ ಪೆÇನ್ನಂಪೇಟೆ ಕ್ಷೇತ್ರದಲ್ಲಿ ಅವಿರೋಧ ಆಯ್ಕೆ ಹಿನ್ನೆಲೆ ಒಟ್ಟು 5 ಮತಗಟ್ಟೆಯಲ್ಲಿ 1917 ಮತದಾರರು ತಾ. 12 ರಂದು ಮತ ಚಲಾವಣೆ ಮಾಡುವಂತಿಲ್ಲ. ಕಮಿಷನ್ ಏಜೆಂಟರುಗಳ ಮತ್ತು ವ್ಯಾಪಾರಿಗಳ ಕ್ಷೇತ್ರದ ಒಟ್ಟು 167 ಪುರುಷ ಮತದಾರರು (ಮಹಿಳಾ ವರ್ತಕರಿಲ್ಲ) ಒಳಗೊಂಡಂತೆ 28,949 ಮಂದಿ ಕೃಷಿಕರು ಮತದಾನ ಮಾಡಲು ಅರ್ಹರಾಗಿದ್ದಾರೆ. ಇವರಲ್ಲಿ 22,944 ಪುರುಷ ಮತದಾರರು ಹಾಗೂ 6005 ಮಹಿಳಾ ಮತದಾರರಿದ್ದಾರೆ. ಒಟ್ಟು 12 ಕ್ಷೇತ್ರಗಳಿಗೆ 48 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಪೆÇನ್ನಂಪೇಟೆ ಕ್ಷೇತ್ರದ 5 ಮತಗಟ್ಟೆಯಲ್ಲಿ ಮತದಾನ ನಡೆಯದ ಹಿನ್ನೆಲೆ 43 ಮತಗಟ್ಟೆಗಳಲ್ಲಿ ಎಪಿಎಂಸಿಗೆ 11 ಸದಸ್ಯರ ಆಯ್ಕೆಗಾಗಿ ಮತದಾನ ನಡೆಯಲಿದೆ.

ಬಾಳೆಲೆ-7 ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲಿತ ಏಕೈಕ ಅಭ್ಯರ್ಥಿ ಎಂ.ಜಿ. ವಿನೀಶ್ ಸ್ಪರ್ಧೆಯಲ್ಲಿದ್ದು ಕಾಂಗ್ರೆಸ್ ಬೆಂಬಲಿತ ಆದೇಂಗಡ ವಿನು ಉತ್ತಪ್ಪ ಹಾಗೂ ಬಿಜೆಪಿ ಬೆಂಬಲಿತ ಆದೇಂಗಡ ವಿನು ಚಂಗಪ್ಪ ಅವರೊಂದಿಗೆ ಪೈಪೆÇೀಟಿ ನಡೆಸಬೇಕಾಗಿದೆ. ಕಾನೂರು -8 ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಪಕ್ಷೇತರ ಅಭ್ಯರ್ಥಿ ತಾಣಚ್ಚಿರ ಉಮೇಶ್‍ಗೆ ಬೆಂಬಲ ವ್ಯಕ್ತಪಡಿಸಿರುವ ಹಿನ್ನೆಲೆ ಬಿಜೆಪಿ ಬೆಂಬಲಿತ ಮಾಚಂಗಡ ಸುಜಾ ಪೂಣಚ್ಚ ಅವರಿಗೆ ನಿಕಟ ಪೈಪೆÇೀಟಿ ಎದುರಾಗಿದೆ.

ಉಳಿದಂತೆ ಅರಮೇರಿ (ಅನುಸೂಚಿತ ಜಾತಿ), ಚೆಂಬೆಬೆಳ್ಳೂರು (ಹಿಂದುಳಿದ ವರ್ಗ ಅ), ಅಮ್ಮತ್ತಿ (ಹಿಂದುಳಿದ ವರ್ಗ ಬ), ಪಾಲಿಬೆಟ್ಟ (ಅನುಸೂಚಿತ ಪಂಗಡ), ಬಿಟ್ಟಂಗಾಲ (ಮಹಿಳೆ), ಟಿ. ಶೆಟ್ಟಿಗೇರಿ (ಮಹಿಳೆ), ಹುದಿಕೇರಿ ಮತ್ತು ಶ್ರೀಮಂಗಲ ಸಾಮಾನ್ಯ ಕ್ಷೇತ್ರ ಮತ್ತು ಕಮಿಷನ್ ಏಜೆಂಟರುಗಳ ಹಾಗೂ ವ್ಯಾಪಾರಿಗಳ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನೇರ ಹಣಾಹಣಿ ಕಂಡುಬಂದಿದೆ. ಪಕ್ಷದ ಅಭ್ಯರ್ಥಿಗಳು ಪ್ರಮುಖ ರಾಜಕೀಯ ಮುಖಂಡರ ನೆರವಿಲ್ಲದೆ ಹೋಬಳಿ ಘಟಕ, ವಲಯಾಧ್ಯಕ್ಷರು ಹಾಗೂ ಸ್ಥಾನೀಯ ಸಮಿತಿ ಪದಾಧಿಕಾರಿಗಳ ಸಹಕಾರದೊಂದಿಗೆ, ಪಕ್ಷದ ಹಿರಿಯರ ಸಹಕಾರದೊಂದಿಗೆ ಮತಯಾಚನೆ ಮಾಡುತ್ತಿರುವದು ಅಧಿಕವಾಗಿ ಕಂಡುಬಂದಿದೆ. ಪಕ್ಷದ ಹೆಸರು ಹಾಗೂ ವೈಯಕ್ತಿಕ ವರ್ಚಸ್ಸು ಎಲ್ಲ 11 ಕ್ಷೇತ್ರದಲ್ಲಿಯೂ ಮತವಾಗಿ ಪರಿವರ್ತನೆಯಾಗಲಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಚುನಾವಣೆಯು ರಾಜಕೀಯ ಪಕ್ಷದ ಚಿಹ್ನೆಯಿಂದ ನಡೆಯುತ್ತಿಲ್ಲವಾದರೂ ಎಲ್ಲೆಡೆ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಮತಯಾಚನೆ ಮಾಡುವದು ಕಂಡು ಬಂದಿದೆ.

ಕಾನೂರು ಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಾಚಂಗಡ ಸುಜಾ ಪೂಣಚ್ಚ ಅವರು ತಮ್ಮ ಹಿತೈಷಿಗಳೊಂದಿಗೆ ಇಂದು ಬಲ್ಯಮುಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮತಯಾಚನೆ ಮಾಡುವದು ಕಂಡು ಬಂತು. ಅಭ್ಯರ್ಥಿಯೊಂದಿಗೆ ಜಿಲ್ಲಾ ಸಮಿತಿ ಸದಸ್ಯ ಅಳಮೇಂಗಡ ರವಿ, ಬಲ್ಯಮಂಡೂರು ಗ್ರಾ.ಪಂ. ಅಧ್ಯಕ್ಷ ಕೊಟ್ಟಂಗಡ ಸಿ. ಪ್ರಕಾಶ್, ಬಿಜೆಪಿ ಪ್ರಮುಖರಾದ ಬಾಬು, ಮಾಚಂಗಡ ಉಮೇಶ್ ಮುತ್ತಣ್ಣ, ವಿ.ಎಸ್. ಹರೀಶ್, ಮಾಚಂಗಡ ಕಿರಣ್, ಕೃಷ್ಣ , ವಿಶು, ಪೆಮ್ಮಯ್ಯ, ಸೋಮಣ್ಣ ಮತಯಾಚನೆ ಮಾಡಿದರು.

ಪಕ್ಷೇತರ ಅಭ್ಯರ್ಥಿ ತಾಣಚ್ಚಿರ ಉಮೇಶ್ ಅವರು ಕಾನೂರು ವ್ಯಾಪ್ತಿಯಲ್ಲಿ ಇಂದು ಮತಯಾಚನೆ ಮಾಡಿದರು. ಉಮೇಶ್ ಅವರೊಂದಿಗೆ ಎಸ್.ಎಂ. ಬಸಪ್ಪ, ಮಚ್ಚಾಮಾಡ ಮನು, ಟಿ.ಯು. ದೀಪಕ್, ಮಲ್ಲಮಾಡ ಸುನಿಲ್, ಈಶ್ವರ, ಎಸ್.ಪಿ. ಲಾಲಾ ಅಪ್ಪಣ್ಣ, ಮಚ್ಚಾಮಾಡ ವಿನೋದ್, ಕೆ.ಕೆ. ರಮೇಶ್, ತೀತಮಾಡ ಜಯ, ಪೆÇನ್ನಪ್ಪ, ಸುಳ್ಳಿಮಾಡ ಅರುಣ್, ಎಂ. ಮುತ್ತಪ್ಪ ಮುಂತಾದವರು ಮತಯಾಚನೆ ಮಾಡುವದು ಕಂಡುಬಂತು.

- ಟಿ.ಎಲ್. ಶ್ರೀನಿವಾಸ್