ಮಡಿಕೇರಿ, ಅ. 5: ಕೊಡಗು ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯ ವತಿಯಿಂದ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ ಗೋಣಿಕೊಪ್ಪಲಿನ ಕಾಲ್ಸ್ ಶಾಲೆಯ ಸಿಂಥೆಟಿಕ್ ಟ್ರ್ಯಾಕ್‍ನಲ್ಲಿ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಉಪಾಧ್ಯಕ್ಷÀ ಕಾಳಚಂಡ ರವಿ ತಮ್ಮಯ್ಯ, ತಾ. 26 ರಂದು ನಡೆಯುವ ಜಿಲ್ಲಾಮಟ್ಟದ ಅಥ್ಲೆಟಿಕ್ಸ್‍ನಲ್ಲಿ ಆಯ್ಕೆಯಾದ ಕ್ರೀಡಾಪಟುಗಳು ನ. 18 ರಿಂದ 20ರ ವರೆಗೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆಯುವ 14ನೇ ರಾಷ್ಟ್ರೀಯ ಅಂತರ ಜಿಲ್ಲಾ ಕ್ರೀಡಾಕೂಟದಲ್ಲಿ ಭಾಗವಹಿಸಬಹುದಾಗಿದೆ ಎಂದರು.

14 ಮತ್ತು 16ರ ವಯೋಮಿತಿಯ ಬಾಲಕ ಬಾಲಕಿಯರಿಗೆ ಅಥ್ಲೆಟಿಕ್ ಕ್ರೀಡಾಕೂಟ ನಡೆಯಲಿದೆ. 14 ವರ್ಷ ಒಳಪಟ್ಟ ಬಾಲಕ ಬಾಲಕಿಯರು 2002 ರ ನವೆಂಬರ್ 21 ರಿಂದ 2004ರ ನವೆಂಬರ್ 20ರ ಒಳಗಾಗಿ ಜನಿಸಿದವರಾಗಿರಬೇಕು. ಇವರಿಗಾಗಿ 100, 600 ಮೀ. ಓಟ, ಎತ್ತರ ಜಿಗಿತ, ಉದ್ದ ಜಿಗಿತ, ಭಾರದ ಗುಂಡು ಎಸೆತ ಸ್ಪರ್ಧೆಗಳು ನಡೆಯಲಿದೆ. 16 ವರ್ಷ ಒಳಪಟ್ಟ ಬಾಲಕ ಬಾಲಕಿಯರು 2000ನೇ ಇಸವಿ ನವೆಂಬರ್ 21 ರಿಂದ 2002ರ ನವೆಂಬರ್ 20ರ ಒಳಗಾಗಿ ಜನಿಸಿದವರಾಗಿರಬೇಕು. ಇವರಿಗಾಗಿ, 100, 200, 400, 1000 ಮೀ. ಓಟ, 100 ಮೀ. ಹರ್ಡಲ್ಸ್, ಎತ್ತರ ಜಿಗಿತ, ಉದ್ದ ಜಿಗಿತ, ಭಾರದ ಗುಂಡು ಎಸೆತ, ಚಕ್ರ ಎಸೆತ, ಭರ್ಜಿ ಎಸೆತ ಸ್ಪರ್ಧೆಗಳು ನಡೆಯಲಿವೆ.

ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರಿಡಾಪಟುಗಳು ಕಡ್ಡಾಯವಾಗಿ ಜನನ ಪ್ರಮಾಣ ಪತ್ರದ ನಕಲು ಪ್ರತಿಯನ್ನು ಪ್ರವೇಶ ಪತ್ರದ ಜೊತೆಗೆ ಲಗತ್ತಿಸಿ ತಾ. 20ರ ಒಳಗೆ ಕಳುಹಿಸಿಕೊಡಬೇಕೆಂದು ರವಿ ತಮ್ಮಯ್ಯ ಹೇಳಿದರು. ರಾಷ್ಟ್ರ ಮಟ್ಟದಲ್ಲಿ ಭಾಗವಹಿಸುವ ಅರ್ಹ ಕ್ರೀಡಾಪಟುಗಳ ಅಂತಿಮ ಆಯ್ಕೆ ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯ ತೀರ್ಮಾನವೆ ಅಂತಿಮವಾಗಿರುತ್ತದೆ. ಈ ಕ್ರೀಡಾಕೂಟ ಕರ್ನಾಟಕ ಅಥ್ಲ್ಲೆಟಿಕ್ ಸಂಸ್ಥೆಯ ನಿಯಮದಂತೆ ನಡೆಯಲಿದೆಯೆಂದು ಅವರು ಸ್ಪಷ್ಟಪಡಿಸಿದರು.

ಅಧ್ಯಕ್ಷ ಎಂ.ವಿ. ಲೋಕೆÉೀಶ್ ಮಾತನಾಡಿ, ಜಿಲ್ಲಾ ಕೇಂದ್ರ ಮಡಿಕೆÉೀರಿಯಲ್ಲಿ ಅಥ್ಲೆಟಿಕ್ ಕ್ರೀಡಾಕೂಟ ನಡೆಸಲು ಸೂಕ್ತ ಮೈದಾನದ ವ್ಯವಸ್ಥೆ ಇಲ್ಲದ ಕಾರಣ ಗೋಣಿಕೊಪ್ಪಲಿನ ಕಾಲ್ಸ್ ಶಾಲಾ ಮೈದಾನದ ಸಿಂಥೆಟಿಕ್ ಟ್ರ್ಯಾಕ್‍ನಲ್ಲಿ ನಡೆಸುತ್ತಿರುವದಾಗಿ ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 94484 48603, 98441 62857, 9448588139ನ್ನು ಸಂಪರ್ಕಿಸಬಹುದೆಂದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ಜಯರಾಂ, ಸದಸ್ಯರುಗಳಾದ ಎಂ.ಬಿ. ರವಿ ಹಾಗೂ ಸದಸ್ಯ ರಾಜಶೇಖರ್ ಉಪಸ್ಥಿತರಿದ್ದರು.