ಗೋಣಿಕೊಪ್ಪಲು, ಸೆ. 13 : ಇಲ್ಲಿನ ಇಗ್ಗುತ್ತಪ್ಪ ಕೊಡವ ಸಂಘದ ವತಿಯಿಂದ ಪರಿಮಳ ಮಂಗಳ ವಿಹಾರದಲ್ಲಿ ಕೈಲುಮುಹೂರ್ತ ಕ್ರೀಡಾಕೂಟ ನಡೆಸಲಾಯಿತು. ಕೋವಿಗೆ ಪೂಜೆ ಸಲ್ಲಿಸುವ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಲಾಯಿತು. ತೆಂಗಿನಕಾಯಿಗೆ ಗುಂಡು ಹೊಡೆಯುವದು, ವಾಲಗತ್ತಾಟ್ ಹಾಗೂ ಶಿಕ್ಷಣದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.
ಎಸ್ಎಸ್ಎಲ್ಸಿಯಲ್ಲಿ ಉತ್ತಮ ಅಂಕ ಪಡೆದ ಕಾಟಿಮಾಡ ಕೃತಿಕಾ, ಅಜ್ಜಿಕುಟ್ಟೀರ ಶನ ಪೊನ್ನಮ್ಮ, ಮೂಕಳೇರ ಅಯ್ಯಪ್ಪ, ಬುಟ್ಟಿಯಂಡ ನಿದಿಪ್ ನಂಜಪ್ಪ, ಮಚ್ಚಮಾಡ ತಾನ್ಯ ದೇಚಮ್ಮ, ಪಿಯುಸಿಯಲ್ಲಿ ಅಂಕ ಹೆಚ್ಚು ಪಡೆದ ಚೇಂದೀರ ವಿವೇಕ್ ಅವರುಗಳನ್ನು ಸನ್ಮಾನಿಸಲಾಯಿತು.
ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಆಶಿಕ್ ಚೆಂಗಪ್ಪ (ಪ್ರ), ದೇಯಂಡ ಪೊನ್ನಣ್ಣ (ದ್ವಿ), ಪುರುಷರ ವಾಲಗತ್ತಾಟ್ನಲ್ಲಿ ಚೇಂದೀರ ಉತ್ತಪ್ಪ (ಪ್ರ), ಚಿಮ್ಮುಣೀರ ಮುದ್ದಪ್ಪ (ದ್ವಿ), ಮಹಿಳೆಯರಲ್ಲಿ ಚೇಂದೀರ ಪ್ರಭಾವತಿ (ಪ್ರ), ಮಲ್ಲೇಂಗಡ ರಾಣಿ (ದ್ವಿ), ಬಾಲಕರಲ್ಲಿ ದೇಯಂಡ ಪೂವಣ್ಣ (ಪ್ರ), ಬಾರದ ಗುಂಡು ಎಸೆಯುವದರಲ್ಲಿ ಚಿರಿಯಪಂಡ ಬೋಪಣ್ಣ (ಪ್ರ), ಚಿಮ್ಮುಣೀರ ಮುತ್ತಪ್ಪ (ದ್ವಿ), ಮಹಿಳೆಯರ ಬಾಂಬ್ ಇನ್ ದ ಸಿಟಿ ಸ್ಪರ್ಧೆಯಲ್ಲಿ ಲಲಿತಾ ಬೋಪಯ್ಯ (ಪ್ರ), ಚಿಮ್ಮುಣೀರ ಸವಿತಾ (ದ್ವಿ), ಪುರುಷರ ವಿಭಾಗದಲ್ಲಿ ಕುಂಬೇರ ಗಣಪತಿ (ಪ್ರ), ಮೂಡೇರ ಗಣಪತಿ (ದ್ವಿ), ಹೂ ಅಲಂಕಾರದಲ್ಲಿ ಚೇಂದಂಡ ಸುಮಿ ಸುಬ್ಬಯ್ಯ (ಪ್ರ), ಚಿತ್ರಾ ದೇವಯ್ಯ (ದ್ವಿ), ಲಕ್ಕಿ ಕೊಡವತಿಯಲ್ಲಿ ಲತಾ (ಪ್ರ), ಹೊಟ್ಟೇಂಗಡ ತಾರಾ ದ್ವಿತೀಯ ಸ್ಥಾನ ಪಡೆದರು.
ವಿವಾಹವಾಗಿ 50 ನೇ ವರ್ಷ ಆಚರಿಸಕೊಳ್ಳುತ್ತಿರುವ ನಾಮೇರ ಪೂವಯ್ಯ - ರಾಧ ದಂಪತಿಗಳನ್ನು ಸನ್ಮಾನಿಸಲಾಯಿತು. ಸಮಾರೋಪ ಸಮಾರಂಭದ ಅತಿಥಿಗಳಾಗಿ ಡಾ. ಮಾಪಂಗಡ ಬೆಳ್ಯಪ್ಪ ಪಾಲ್ಗೊಂಡು ಮಾತನಾಡಿ, ಪೋಷಕರು ಮಕ್ಕಳಿಗೆ ಕೃಷಿಯ ಬಗ್ಗೆ ಅಭಿಮಾನ ಮೂಡಿಸುವ ಮೂಲಕ ಕೊಡಗಿನ ಮಣ್ಣಿನ ರಕ್ಷಣೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಇಗ್ಗುತ್ತಪ್ಪ ಕೊಡವ ಸಂಘ ಅಧ್ಯಕ್ಷೆ ಕೊಣಿಯಂಡ ಬೋಜಮ್ಮ ಮಾತನಾಡಿ, ಸಂಘದ ಸದಸ್ಯರು ಹೆಚ್ಚಾಗಿ ಪಟ್ಟಣದಲ್ಲಿಯೇ ಇರುವದರಿಂದ ಶುಚಿತ್ವಕ್ಕೆ ಹೆಚ್ಚು ಗಮನ ಹರಿಸಬೇಕು. ತಮ್ಮ ಮನೆಯ ಕಸವನ್ನು ಬೀದಿಗೆ ಹಾಕಬಾರದು. ಮಕ್ಕಳಲ್ಲಿ ಕೊಡಗಿನ ಆಚಾರ-ವಿಚಾರಗಳನ್ನು ಕಲಿಯಲು ಪ್ರೋತ್ಸಾಹ ನೀಡುವಂತಾಗಬೇಕು ಎಂದರು.
ಈ ಸಂದರ್ಭ ಉಪಾಧ್ಯಕ್ಷ ಮಲ್ಚೀರ ಗಾಂಧಿ ದೇವಯ್ಯ, ಸಹ ಕಾರ್ಯದರ್ಶಿ ಹೊಟ್ಟೇಂಗಡ ಬಿಂದು, ಖಜಾಂಚಿ ಚಿರಿಯಪಂಡ ಪೂಣಚ್ಚ ಉಪಸ್ಥಿತರಿದ್ದರು. ರತಿ ಅಚ್ಚಪ್ಪ ಪ್ರ್ರಾರ್ಥಿಸಿದರು. ಕಾರ್ಯದರ್ಶಿ ಅಜ್ಜಿಕುಟ್ಟೀರ ದೇವಯ್ಯ ಸ್ವಾಗತಿಸಿದರು. ಸಣ್ಣುವಂಡ ರಜನ್ ತಿಮ್ಮಯ್ಯ ನಿರೂಪಿಸಿದರು. ಸಿ. ಡಿ. ಮಾದಪ್ಪ ವಂದಿಸಿದರು.