ನಾಪೆÇೀಕ್ಲು, ಜ. 23: ಗ್ರಾಮಾಭಿವೃದ್ಧಿಗೆ ಸರಕಾರ ಕೋಟಿ ಕೋಟಿ ರೂ.ಗಳನ್ನು ಮಂಜೂರು ಮಾಡುವ ಘೋಷಣೆಯನ್ನು ಮಾಡುತ್ತದೆ. ಇದರಿಂದ ರಸ್ತೆ ದುರಸ್ತಿಯ ಬಗ್ಗೆ ಕನಸು ಕಾಣುತ್ತಿರುವ ಗ್ರಾಮಸ್ಥರಿಗೆ ಅಲ್ಪ ಸಮಾಧಾನ ದೊರೆಯುವದು ಬಿಟ್ಟರೆ ಅಭಿವೃದ್ಧಿಯ ಕನಸು ಮಾತ್ರ ನನಸಾಗುವದೇ ಇಲ್ಲ. ಇದಕ್ಕೆ ಉದಾಹರಣೆ ಕೊಳಕೇರಿ ಪಟ್ಟಣದ ಕೋಕೇರಿ ಗ್ರಾಮಕ್ಕಾಗಿ ಚೆಯ್ಯಂಡಾಣೆ ಸಮೀಪದ ಒಂಬತ್ತನೇ ಮೈಲು ಮತ್ತು ಬಾವಲಿ, ಎಡಪಾಲಕ್ಕಾಗಿ ಕಡಂಗ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ.
ಹಿಂದೆ ಈ ರಸ್ತೆಗೆ ಡಾಂಬರು ಹಾಕಲಾಗಿದೆ ಎನ್ನುವದನ್ನು ಬಿಟ್ಟರೆ ಈಗ ಇಲ್ಲಿ ಡಾಂಬರಿನ ಅವಶೇಷಗಳು ಕೂಡ ಕಂಡು ಬರುತ್ತಿಲ್ಲ. ಇದರ ದುರಸ್ತಿಗೆ ಕೊಳಕೇರಿ, ಕೋಕೇರಿ ಸೇರಿದಂತೆ ಸಂಬಂಧಿಸಿದ ಗ್ರಾಮಸ್ಥರು ಹಲವು ಬಾರಿ ಸಂಬಂಧಿಸಿದ ಜನ ಪ್ರತಿನಿಧಿಗಳಿಗೆ, ಸರಕಾರಕ್ಕೆ ಮನವಿ ಸಲ್ಲಿಸಿದರೂ, ಯಾವದೇ ಸ್ಪಂದನ ದೊರೆತಿಲ್ಲ ಎನ್ನಲಾಗುತ್ತಿದೆ. ಈ ರಸ್ತೆಗಾಗಿ ದಿನಕ್ಕೆ ನಾಲ್ಕು ಬಾರಿ ಖಾಸಗಿ ಬಸ್ಸು ಸಂಚರಿಸುತ್ತದೆ. ನಾಲ್ಕು ಶಾಲಾ ಬಸ್‍ಗಳು ಕೂಡಾ ಸಂಚರಿಸುತ್ತವೆ. ಆದರೆ ಈ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ, ಶಾಲಾ ವಿದ್ಯಾರ್ಥಿಗಳಿಗೆ ಯಾವದೇ ರಕ್ಷಣೆ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣ ವಾಗಿದೆ. ಕೂಡಲೇ ಈ ರಸ್ತೆ ದುರಸ್ತಿಗೆ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕೆಂದು ಸಮಸ್ತ ಗ್ರಾಮಸ್ಥರು ‘ಶಕ್ತಿ’ಯ ಮೂಲಕ ಆಗ್ರಹಿಸಿದ್ದಾರೆ.
-ಪಿ.ವಿ. ಪ್ರಭಾಕರ್