ಮಡಿಕೇರಿ, ಸೆ. 13: ಇಲ್ಲಿನ ಕೆಎಸ್ಆರ್ಟಿಸಿ ಡಿಪೋ ಬಳಿಯ ಶಾಂತಿನಿಕೇತನ ಬಡಾವಣೆಯ ಶಾಂತಿನಿಕೇತನ ಯುವಕ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಗಣೇಶೋತ್ಸವ ಗಮನ ಸೆಳೆಯುತ್ತಿದೆ.
ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿರುವ ಆವರಣದಲ್ಲಿ ಭವ್ಯವಾದ ಅಯ್ಯಪ್ಪ ಸ್ವಾಮಿಯ ಹದಿನೆಂಟು ಮೆಟ್ಟಿಲುಗಳಿರುವ ದೇಗುಲವನ್ನು ನಿರ್ಮಿಸಲಾಗಿದ್ದು, ಶಬರಿಮಲೆಯ ನೆನಪನ್ನು ಮೂಡಿಸುತ್ತಿದೆ. ಪಕ್ಕದಲ್ಲಿಯೇ ವಿವಿಧ ದೇವಾನುದೇವತೆಗಳ ಕಲಾಕೃತಿಗಳು, ಜಾಂಬವಂತ, ಆನೆ ಇನ್ನಿತರ ಪ್ರಾಣಿಗಳ ಪ್ರತಿಕೃತಿಗಳು ಗಮನ ಸೆಳೆಯುತ್ತಿದೆ. ಇದರೊಂದಿಗೆ ಪ್ರತಿನಿತ್ಯ ಸಂಜೆ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ಸಂಘದ ಅಧ್ಯಕ್ಷ ಚೇತನ್ ನೇತೃತ್ವದ ತಂಡ ಉತ್ಸವದ ಯಶಸ್ಸಿಗಾಗಿ ಕೈಜೋಡಿಸುತ್ತಿದ್ದು, ಉತ್ಸವ ಮೂರ್ತಿಗಳ ವಿಸರ್ಜನೋತ್ಸವ ತಾ. 17ರಂದು ನಡೆಯಲಿದೆ.
- ಸಂತೋಷ್