ಶನಿವಾರಸಂತೆ, ಆ. 28: ಶನಿವಾರಸಂತೆ ಪಂಚಾಯಿತಿ, ಕೊಡ್ಲಿಪೇಟೆ ಪಂಚಾಯಿತಿ, ಬೆಸೂರು ಪಂಚಾಯಿತಿ, ಬ್ಯಾಡಗೊಟ್ಟ ಪಂಚಾಯಿತಿ, ನಿಡ್ತ ಪಂಚಾಯಿತಿ, ದುಂಡಳ್ಳಿ ಪಂಚಾಯಿತಿ, ಗೌಡಳ್ಳಿ ಪಂಚಾಯಿತಿಗಳಲ್ಲಿ ಗೌರಿ-ಗಣೇಶ ಮೂರ್ತಿ ಪ್ರತಿಪ್ಠಾಪನೆ ಹಿನ್ನೆಲೆ ಗುಡುಗಳಲೆ ಆರ್.ವಿ. ಕಲ್ಯಾಣ ಮಂಟಪದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಶಾಂತಿ ಸಭೆ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಡಿ.ವೈ.ಎಸ್.ಪಿ. ಟಿ. ಕುಮಾರ್ ಮಾತನಾಡಿ, ಗೌರಿ-ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಬೇಕಾದರೆ ಪಂಚಾಯಿತಿಗಳ ಅನುಮತಿ ಪಡೆಯಬೇಕು. ವಿದ್ಯುತ್ ಇಲಾಖೆ, ಅಗ್ನಿ ಶಾಮಕ ದಳದ ಅನುಮತಿ ಪಡೆಯಬೇಕು. ಮೈಕ್ ಅಳವಡಿಸಲು ಪೊಲೀಸ್ ಠಾಣೆಯ ಅನುಮತಿ ಪಡೆಯಬೇಕು. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಧ್ವನಿವರ್ದಕವನ್ನು ಉಪಯೋಗಿಸಬಾರದು. ಅಶ್ಲೀಲ ಹಾಡು, ಧರ್ಮಕ್ಕೆ ವಿರೋಧವಾದ ಮಾತುಗಳನ್ನು ಉಪಯೋಗಿಸಬಾರದು ಎಂದರು.

ಸುಪ್ರೀಂ ಕೋರ್ಟ್ ಆದೇಶದಂತೆ ನಿಷೇಧಕ್ಕೆ ಒಳಪಟ್ಟಿರುವ ಡಿ.ಜೆ. ಬಳಸಬಾರದು. ಜನಸಂದಣಿ ಪ್ರದೇಶದಲ್ಲಿ ಸಿಡಿಮದ್ದು ಸಿಡಿಸಬಾರದು ಎಂದರು. ಸಭೆಯಲ್ಲಿ ವೃತ್ತ ನಿರೀಕ್ಷಕ ಪರಶಿವಮೂರ್ತಿ, ಠಾಣಾಧಿಕಾರಿ ಮರಿಸ್ವಾಮಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್, ವಿದ್ಯುತ್ ಇಲಾಖೆಯ ಜೆ.ಇ. ಪ್ರತಾಪ್, ಪಂಚಾಯಿತಿ ಕಾರ್ಯದರ್ಶಿ ತಮ್ಮಯ್ಯಚಾರ್, ಸಹಾಯಕ ಸಬ್‍ಇನ್ಸ್‍ಪೆಕ್ಟರ್‍ಗಳಾದ ಬಿ.ಎಸ್. ಜನಾರ್ಧನ್, ಖತೀಜಾ, ಠಾಣಾ ಬರಗಾರ್ತಿ ಶಶಿ ಹಾಗೂ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ವೃತ್ತ ನಿರೀಕ್ಷಕ ಪರಶಿವಮೂರ್ತಿ ಸ್ವಾಗತಿಸಿ, ವಂದಿಸಿದರು.