ಮಡಿಕೇರಿ, ಜು. 26: ಮಡಿಕೇರಿ ಖಾಸಗಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಕೃಷಿ ವಿಶ್ವವಿದ್ಯಾನಿಲಯದ ಜಾಗವನ್ನು ನಿಗದಿಪಡಿಸಲಾಗಿದ್ದು, ಈ ಜಾಗ ನಗರಸಭೆಯ ಹೆಸರಿಗೆ ಖಾತೆಯಾಗಿದೆ. ಬಸ್ ನಿಲ್ದಾಣ ನಿರ್ಮಾಣಕ್ಕೆ ಒಮ್ಮತದ ಸಹಕಾರ ಅಗತ್ಯವಿದೆ ಎಂದು ನಗರಸಭಾ ಅಧ್ಯಕ್ಷೆ ಶ್ರೀಮತಿ ಬಂಗೇರ ಕೋರಿದ್ದಾರೆ.
ತಾ. 25ರ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಮಡಿಕೇರಿ ಖಾಸಗಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಕೃಷಿ ವಿಶ್ವವಿದ್ಯಾನಿಲಯದ ಜಾಗವನ್ನು ಸರ್ಕಾರವು ನೋಟೀಫಿಕೇಷನ್ ಮುಖಾಂತರ ಮಂಜೂರು ಮಾಡಿದ್ದು, ಪ್ರಸ್ತುತ ಸದ್ರಿ ಜಾಗವು ನಗರಸಭೆಯ ಹೆಸರಿನಲ್ಲಿ ಖಾತೆಯಾಗಿರುತ್ತದೆ. ನಗರಸಭೆ ಸುಮಾರು ಒಂದು ವರ್ಷದಿಂದಲೂ ತನ್ನ ಕೌನ್ಸಿಲ್ ಸಭೆಗಳಲ್ಲಿ ಹಲವಾರು ಬಾರಿ ಚರ್ಚೆಗಳನ್ನು ನಡೆಸಿ ಸದರಿ ಜಾಗದಲ್ಲಿಯೇ ಖಾಸಗಿ ಬಸ್ ನಿಲ್ದಾಣವನ್ನು ನಿರ್ಮಿಸುವದೆಂದು ಈಗಾಗಲೇ ತೀರ್ಮಾನ ಕೈಗೊಂಡಿದೆ. ಅದರಂತೆ ಸರ್ಕಾರಕ್ಕೆ ಅನುದಾನ ಬಿಡುಗಡೆಗಾಗಿ ಪ್ರಸ್ತಾವನೆ ಸಲ್ಲಿಸಿದ ಪ್ರಕಾರ ನಗರ ಭೂ ಸಾರಿಗೆ ಇಲಾಖೆ ವತಿಯಿಂದ ರೂ. 3.75 ಕೋಟಿ ಮಂಜೂರಾಗಿದೆ. ಸದ್ರಿ ಹಣವನ್ನು ಪಡೆದುಕೊಳ್ಳಲು ಡಿ.ಪಿ.ಆರ್. ಅನ್ನು ತಯಾರಿಸಲಾಗಿದ್ದು, ತಾಂತ್ರಿಕ ಅನುಮೋದನೆಯನ್ನೂ ಪಡೆದುಕೊಳ್ಳಲಾಗಿದೆ. ಆಡಳಿತಾತ್ಮಕ ಅನುಮೋದನೆಗೆ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಟೆಂಡರ್ ನೋಟೀಫಿಕೇಷನ್ ಹೊರಡಿಸಲಾಗುವದು. ಸದ್ಯದಲ್ಲಿ ಕಾಮಗಾರಿಯನ್ನು ಕೂಡ ಪ್ರಾರಂಭಿಸಲಾಗುವದು. ಕಾಮಗಾರಿ ಪ್ರಾರಂಭಿಸುವ ಸಂದರ್ಭದಲ್ಲಿ ಉಸ್ತುವಾರಿ ಮಂತ್ರಿಗಳಿಂದ ಭೂಮಿ ಪೂಜೆಯನ್ನು ಮಾಡಿಸುವ ಚಿಂತನೆ ಇದೆ. ಈ ರೀತಿ ಎಲ್ಲಾ ಸಿದ್ಧತೆಗಳು ಕೈಗೊಳ್ಳಲಾಗಿದೆ.
ಈ ಜಾಗವನ್ನು ಯಾರೂ ಕೂಡ ಅತಿಕ್ರಮಣ ಮಾಡಿಕೊಂಡಿರುವದಿಲ್ಲ ಹಾಗೂ
(ಮೊದಲ ಪುಟದಿಂದ) ಈ ಖಾಸಗಿ ಬಸ್ ನಿಲ್ದಾಣ ಕಾಮಗಾರಿಗೆ ಜಿಲ್ಲೆಯ ಶಾಸಕರು, ವಿಧಾನಪರಿಷತ್ ಸದಸ್ಯರು ಕೂಡ ತಮ್ಮ ಎಲ್ಲಾ ಸಹಕಾರ ನೀಡುತ್ತಿದ್ದು, ಯಾವದೇ ಅಡೆತಡೆ ಇಲ್ಲದೆ ಈ ಯೋಜನೆ ಯನ್ನು ಪೂರ್ಣಗೊಳಿಸ ಲಾಗುವದು. ಈ ಪ್ರಸ್ತಾಪಿತ ಹೊಸ ಸ್ಥಳದಲ್ಲಿ ಖಾಸಗಿ ಬಸ್ ನಿಲ್ದಾಣವು ನಿರ್ಮಾಣವಾದಲ್ಲಿ ಹಲವು ದಶಕಗಳಿಂದ ಒಂದು ಚಿಕ್ಕದಾದ ಸ್ಥಳದಲ್ಲಿ ಯಾವದೇ ಮೂಲ ಸೌಲಭ್ಯ ಇಲ್ಲದೆ ಇದ್ದ ಒಂದು ಸಮಸ್ಯೆ ಬಗೆ ಹರಿದು ಸಾರ್ವಜನಿಕರಿಗೆ ಅನುಕೂಲ ವಾಗಲಿರುತ್ತದೆ. ಈ ನೂತನ ಖಾಸಗಿ ಬಸ್ ನಿಲ್ದಾಣಕ್ಕೆ ಕೊಡಗಿನ ಮತ್ತು ಹೊರ ಊರುಗಳಿಂದ ಬರುವ ಎಲ್ಲಾ ಸಾರ್ವಜನಿಕರಿಗೂ ಅನುಕೂಲಕರ ವಾಗಿದ್ದು, ಬಸ್ ನಿಲ್ದಾಣ ನಿರ್ಮಾಣಕ್ಕೆ ಎಲ್ಲರ ಒಮ್ಮತದ ಸಹಕಾರ ಅಗತ್ಯ ವಾಗಿರುತ್ತದೆ. ಜಿಲ್ಲಾಧಿಕಾರಿ ಗಳು ಹಾಗೂ ಜಿಲ್ಲಾಡಳಿತವು ಕೂಡ ಮೇಲಿನ ಬಸ್ ನಿಲ್ದಾಣದ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸಿ ಕೊಡಬೇಕೆಂದು ಆಸಕ್ತಿ ಹೊಂದಿದ್ದು ಎಲ್ಲರೂ ಸಹಕಾರವನ್ನು ನೀಡುತ್ತಿದ್ದಾರೆ ಎಂದು ಶ್ರೀಮತಿ ಬಂಗೇರ ಸ್ಪಷ್ಟೀಕರಣ ನೀಡಿದ್ದಾರೆ.