ಮಡಿಕೇರಿ, ಜು. 5: ತಾಂತ್ರಿಕತೆ ಬಳಸಿಕೊಂಡು ಖಜಾನೆ-2 ಬಟವಾಡೆ ಮಾಡುವ ಬಗ್ಗೆ ತರಬೇತಿ ಕಾರ್ಯಾಗಾರ ನಗರದ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ನಡೆಯಿತು.
ಜಿಲ್ಲಾ ಖಜಾನಾಧಿಕಾರಿ ಹೆಚ್.ವೈ. ಸತೀಶ್ ಅವರು ಅಂತರ್ಜಾಲ ಸಂಪರ್ಕ ಬಳಸಿಕೊಂಡು ವೇತನ ಬಟವಾಡೆ, ಡಿಸಿ ಬಿಲ್ಲು ಮಾಡುವದು, ಡಿಜಿಟಲ್ ಸಿಗ್ನೇಚರ್, ಸರ್ಟಿಫಿಕೇಶನ್, ಬಯೋ ಮೆಟ್ರಿಕ್ ಮತ್ತಿತರವನ್ನು ಬಳಸಿ ಕೊಂಡು ಬಿಲ್ಲನ್ನು ತಯಾರಿಸಿ ಖಜಾನೆಗೆ ಸಲ್ಲಿಸುವದು. ಅಗತ್ಯ ವಿರುವ ಬಿಲ್ಲುಗಳನ್ನು ಮೇಲುರು ಜುವಿಗೆ ಕಳುಹಿಸುವದು ಮತ್ತಿತರ ಸಂಬಂಧ ಸುದೀರ್ಘ ಮಾಹಿತಿ ನೀಡಿದರು. ಈಗಾಗಲೇ ಅರಣ್ಯ, ಪೊಲೀಸ್, ಗೃಹರಕ್ಷಕ ದಳ, ಸೈನಿಕ ಕಲ್ಯಾಣ, ಖಜಾನೆ ಮತ್ತಿತರ ಇಲಾಖೆಗಳು ಖಜಾನೆ-2 ನ್ನು ಅನುಷ್ಠಾನಗೊಳಿಸಿದೆ. ಹಂತ ಹಂತವಾಗಿ ಇತರೆ ಇಲಾಖೆಗಳಲ್ಲಿ ಖಜಾನೆ-2 ಅನುಷ್ಠಾನ ಗೊಳಿಸ ಲಾಗುತ್ತದೆ ಎಂದರು. ಜಿಲ್ಲಾ ಖಜಾನೆಯ ದ್ವಿತೀಯ ದರ್ಜೆ ಸಹಾಯಕರಾದ ಸುನಿಲ್ ಅವರು ವೇತನ ಬಟವಾಡೆ ಮಾಡುವದು, ಡಿ.ಸಿ. ಬಿಲ್ಲು ಸಲ್ಲಿಸುವದು ಮತ್ತಿತರ ಬಗ್ಗೆ ಹಲವು ಮಾಹಿತಿ ನೀಡಿದರು. ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದರು.