ಮಡಿಕೇರಿ, ಸೆ.17: ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಮದೆ ಮಹೇಶ್ವರ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಮಡಿಕೇರಿ ತಾಲೂಕು ಮಟ್ಟದ ಕ್ರೀಡಾಕೂಟ-2016-17ರ ಸಮಾರೋಪ ಸಮಾರಂಭವು ಮದೆ ಮಹೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ತಾ. 20ರಂದು ಮಧ್ಯಾಹ್ನ 2.30 ಗಂಟೆಗೆ ನಡೆಯಲಿದೆ.

ಮದೆಮಹೇಶ್ವರ ವಿದ್ಯಾಸಂಘದ ಅಧ್ಯಕ್ಷ ಹುದೇರಿ ರಾಜೇಂದ್ರ, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕøತಿ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್, ಜಿ.ಪಂ. ಸದಸೆÀ್ಯ ಯಾಲದಾಳು ಪದ್ಮಾವತಿ, ಮದೆ ಗ್ರಾ.ಪಂ. ಅಧ್ಯಕ್ಷ ಮುದ್ಯನ ಚಂದ್ರಶೇಖರ, ಮದೆ ಮಹೇಶ್ವರ ವಿದ್ಯಾ ಸಂಘದ ಅಧ್ಯಕ್ಷ ಕುಟ್ಟೇಟಿರ ಮಾದಪ್ಪ, ವಿ.ಎಸ್.ಎಸ್.ಎನ್. ಬ್ಯಾಂಕ್ ಅಧ್ಯಕ್ಷ ಕಿಮ್ಮುಡಿರ ಜಗದೀಶ್, ಟೆಕ್ವಾಂಡೊ ನ್ಯಾಷನಲ್ ಅಂಡ್ ಇಂಟರ್ ನ್ಯಾಷನಲ್ ಟ್ರೈನರ್ ಹುದೇರಿ ಮುತ್ತಪ್ಪ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.