ಮಡಿಕೇರಿ, ನ.23 : ಮುಂದಿನ ವಿಧಾನಸಭಾ ಚುನಾವಣೆಯ ಬಿಜೆಪಿ ಸ್ಪರ್ಧಾಕಾಂಕ್ಷಿಗಳಿಗೆ ಸೋಲುವ ಭೀತಿ ಎದುರಾಗಿರುವ ಹಿನ್ನೆಲೆ ಸುಬ್ರಮಣ್ಯ ಉಪಾಧ್ಯಾಯರ ಮೂಲಕ ಕೋಡಿ ಪೊನ್ನಪ್ಪ ಅವರ ವಿರುದ್ಧ ಇಲ್ಲಸಲ್ಲದ ಹೇಳಿಕೆಯನ್ನು ನೀಡಲಾಗುತ್ತಿದೆ ಎಂದು ಕರಿಕೆ ಬಿಜೆಪಿ ಸ್ಥಾನೀಯ ಸಮಿತಿ ಆರೋಪಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಡಿಕೆÉೀರಿ ತಾ.ಪಂ ಮಾಜಿ ಅಧ್ಯಕ್ಷ ಇಂದ್ರಕುಮಾರ್, ಕರಿಕೆ ಭಾಗ ದಲ್ಲಿ ಬಿಜೆಪಿಯನ್ನು ಹೋರಾಟದ ಮೂಲಕವೇ ಕಟ್ಟಿ ಬೆಳೆÉಸಿದ ಜಿಲ್ಲಾ ಬಿಜೆಪಿ ಮಾಜಿ ಉಪಾಧ್ಯಕ್ಷ ಕೋಡಿ ಪೆÀÇನ್ನಪ್ಪ ಅವರಂತಹ ಹಿರಿಯ ನಾಯಕರನ್ನು ಪಕ್ಷದಿಂದ ವಜಾ ಗೊಳಿಸುವ ಅಧಿಕಾರ ಯಾರಿಗೂ ಇಲ್ಲವೆಂದು ಅಭಿಪ್ರಾಯಪಟ್ಟರು. ಪಕ್ಷದ ಬೆಳವಣಿಗೆಗಾಗಿ ಶ್ರಮಿಸಿದ ಹಿರಿಯರನ್ನು ಹಾಗೂ ಯುವ ಕಾರ್ಯಕರ್ತರನ್ನು ವ್ಯವಸ್ಥಿತವಾಗಿ ಮಟ್ಟ ಹಾಕುವ ಸಂಚು ಪಕ್ಷದಲ್ಲಿ ನಡೆಯುತ್ತಿದೆ. ಸುಬ್ರಮಣ್ಯ ಉಪಾಧ್ಯಾಯ ಅವರು ಹಿರಿಯ ಮುಖಂಡರ ವಿರುದ್ಧ ಹೇಳಿಕೆ ನೀಡುವ ಮೊದಲು ತಮ್ಮ ಹಿನ್ನೆಲೆಯನ್ನು ಆತ್ಮಾವಲೋಕನ ಮಾಡಿಕೊಳ್ಳುವದು ಸೂಕ್ತವೆಂದು ಹೇಳಿದರು.

ಅಮಾಯಕ ಹಾಗೂ ನಿಷ್ಠಾವಂತ ನಾಯಕರುಗಳು ಮತ್ತು ಕಾರ್ಯಕರ್ತರನ್ನು ಮೂಲೆ ಗುಂಪು ಮಾಡುತ್ತಿರುವ ಕೆಲವು ಕುತಂತ್ರಿಗಳಿಗೆ ತಕ್ಕ ಪಾಠ ಕಲಿಸಿದರಷ್ಟೆ ಜಿಲ್ಲೆಯಲ್ಲಿ ಬಿಜೆಪಿ ಉಳಿಯಲು ಸಾಧ್ಯವೆಂದು ಇಂದ್ರಕುಮಾರ್ ಅಭಿಪ್ರಾಯಪಟ್ಟರು. ಕೊಡಗಿನಲ್ಲಿ ಬಿಜೆಪಿ ಬಲಿಷ್ಠವಾಗಲು ಕರಿಕೆ ಗ್ರಾಮವೇ ಕಾರಣವೆಂದ ಅವರು ಸುಮಾರು 27 ವರ್ಷಗಳ ಕಾಲ ಕರಿಕೆ ಗ್ರಾಮ ಪಂಚಾಯ್ತಿ ಬಿಜೆಪಿ ಆಡಳಿತದಲ್ಲಿ ಇತ್ತೆಂದು ತಿಳಿಸಿದರು. ನೂರಕ್ಕೆ ನೂರರಷ್ಟು ಬಿಜೆಪಿ ಪರವಾಗಿ ಮತದಾನವಾದ ಉದಾಹರಣೆಯೂ ಇದ್ದು, ಇದಕ್ಕೆಲ್ಲ ಕೋಡಿ ಪೆÀÇನ್ನಪ್ಪ ಅವರ ಅವಿರತ ಶ್ರಮವೇ ಕಾರಣವೆಂದು ಸ್ಪಷ್ಟಪಡಿಸಿದರು.

ಆದÀರೆ, ಇಂದು ಗ್ರಾಮದಲ್ಲಿ ಕಾರ್ಯಕರ್ತರ ಅವಕೃಪೆಗೆ ಪಾತ್ರ ರಾಗಿರುವ ಸುಬ್ರಮಣ್ಯ ಉಪಾಧ್ಯಾಯ ರಂತಹ ವ್ಯಕ್ತಿಗಳು ಕೋಡಿ ಪೊನ್ನಪ್ಪ ಅವರಂತಹ ಹಿರಿಯ ನಾಯಕರ ವಿರುದ್ಧ ಹೇಳಿಕೆ ನೀಡುತ್ತಿರುವದು ಅತ್ಯಂತ ಖಂಡನೀಯವಾಗಿದೆ. ಉಪಾಧ್ಯಾಯರಿಂದಲೆ ಜಿಲ್ಲೆಯಲ್ಲಿ ಪಕ್ಷದ ಸೋಲು ಮತ್ತು ನಾಶ ಖಚಿತವೆಂದು ಟೀಕಿಸಿದರು. ಅನೇಕ ವರ್ಷಗಳಿಂದ ಪಕ್ಷಕ್ಕಾಗಿ ಹಗಲು, ಇರುಳೆನ್ನದೆ ದುಡಿದ ಡಾ. ಎಂ.ಎಂ. ಚಂಗಪ್ಪ, ಮಾಜಿ ಶಾಸಕ ಡಿ.ಎಸ್. ಮಾದಪ್ಪ ಅವರಂತಹ ಉತ್ತಮ ವ್ಯಕ್ತಿತ್ವದ ನಾಯಕರುಗಳನ್ನೆ ವ್ಯವಸ್ಥಿತವಾಗಿ ಮೂಲೆ ಗುಂಪÀÅ ಮಾಡಲಾಗಿದೆ. ಕೆಲವರು ಪಕ್ಷದಲ್ಲಿ ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದು, ತಾವು ಹೇಳಿದಂತೆ ಕೇಳುವವರಿಗೆ ಮಾತ್ರ ಮಣೆ ಹಾಕಲಾಗುತ್ತಿದೆ. ಮತ್ತೆ ಮತ್ತೆ ಅಧಿಕಾರದ ಗದ್ದುಗೆಯನ್ನು ಹಿಡಿಯುವ ತಂತ್ರಗಾರಿಕೆಯಲ್ಲಿ ತೊಡಗಿರುವ ನಾಯಕರುಗಳಿಗೆ ಮುಂದಿನ ದಿನಗಳಲ್ಲಿ ಕಾರ್ಯಕರ್ತರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಇಂದ್ರ ಕುಮಾರ್ ತಿಳಿಸಿದರು.

ಕೋಡಿ ಪೆÀÇನ್ನಪ್ಪ ಪರವಾಗಿರುವ ನಮ್ಮ ವಿರುದ್ಧ ಪಕ್ಷ ಶಿಸ್ತು ಕ್ರಮ ಕೈಗೊಳ್ಳಲು ಮುಂದಾದರೆ ಪಕ್ಷವೆ ಅಸ್ತಿತ್ವದಲ್ಲಿ ಇರುವದಿಲ್ಲವೆಂದು ಸುದ್ದಿಗೋಷ್ಠಿಯಲ್ಲಿದ್ದ ಇತರ ಪ್ರಮುಖರು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕರಿಕೆ ಶಾಸ್ತಾವು ದೇವಸ್ಥಾನದ ಗೌರವಾಧ್ಯಕ್ಷ ನಿಡ್ಯಮಲೆ ಸುಂದರ, ಕರಿಕೆ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಬಿ.ಕೆ. ದಯಾನಂದ, ಧರ್ಮಜಾಗರಣಾ ಸಮನ್ವಯ ಸಮಿತಿ ಸಂಚಾಲಕ ಪ್ರದೀಪ್ ಕುಮಾರ್, ಸ್ಥಾನೀಯ ಸಮಿತಿ ಕಾರ್ಯದರ್ಶಿ ಹೆಚ್.ಎಂ. ನಂಜುಂಡ ಹಾಗೂ ಕರಿಕೆ ಬೂತ್ ಸಮಿತಿ ಅಧ್ಯಕ್ಷ ಉಮೇಶ್ ಉಪಸ್ಥಿತರಿದ್ದರು.