ಮಡಿಕೇರಿ, ಆ. 1 : ವೀರಾಜಪೇಟೆಯಲ್ಲಿ ತಾ. 6 ಹಾಗೂ 7ರಂದು ನಡೆಯಲಿರುವ ಕೊಡವ ಸಾಹಿತ್ಯ ಶಿಬಿರ ಹಾಗೂ ಸಾಂಸ್ಕøತಿಕ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಯಿತು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ ಅವರು ಅಧ್ಯಕ್ಷತೆ ವಹಿಸಿ ದ್ದರು. ಈ ಸಂದರ್ಭ ಮಾತನಾಡಿದ ಅವರು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವೀರಾಜಪೇಟೆಯ ಕೊಡವ ಸಮಾಜದ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಯಶಸ್ವಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು.
ತಾ. 6 ರಂದು ಬೆಳಗ್ಗೆ 11 ಗಂಟೆಗೆ ಶಿಬಿರವನ್ನು ಖ್ಯಾತ ಸಾಹಿತಿ ಅರವಿಂದ ಮಾಲಗತ್ತಿ ಉದ್ಘಾಟಿಸಲಿದ್ದಾರೆ. ಈ ಹಿಂದೆ ಬರಗೂರು ರಾಮಚಂದ್ರಪ್ಪ ಅವರು ಉದ್ಘಾಟಿಸಲು ಒಪ್ಪಿದ್ದರಾದರೂ ಚಲನಚಿತ್ರೋತ್ಸವದ ಪ್ರಯುಕ್ತ ವಿದೇಶಕ್ಕೆ ತೆರಳಲಿದ್ದಾರೆ. ಉಳಿದಂತೆ ಕಾರ್ಯಕ್ರಮ ಪೂರ್ವ ನಿಗದಿಯಂತೆ ನಡೆಯಲಿದೆ ಎಂದು ತಿಳಿಸಿದರು.
ನಮ್ಮ ಅವಧಿಯಲ್ಲಿ ಕೊಡವ ಅಕಾಡೆಮಿಯಲ್ಲಿ ಪ್ರಕಟವಾದ ಕೃತಿಗಳ ವಿಮರ್ಶೆ ನಡೆಯಲಿದೆ. ಕನ್ನಡದ ಕೃತಿಗಳನ್ನು ಖ್ಯಾತ ವಿಮರ್ಶಕ ಡಾ. ಮಳಲಿ ವಸಂತ್ ಕುಮಾರ್ ಹಾಗೂ ಕೊಡವ ಭಾಷೆಯ ಕೃತಿಗಳನ್ನು ನಾಗೇಶ್ ಕಾಲೂರು ಅವರು ವಿಮರ್ಶೆ ಮಾಡಲಿದ್ದಾರೆ. ಈ ಸಂದರ್ಭ ಕೃತಿಯ ಲೇಖಕರುಗಳು ಉಪಸ್ಥಿತರಿರುತ್ತಾರೆ. ಅಲ್ಲದೆ ಶಿಬಿರಾರ್ಥಿಗಳು ಇರುವದರಿಂದ ಅವರಿಗೆ ಕೃತಿ ಹೇಗೆ ರಚಿಸಬೇಕು, ಕೊರತೆಗಳೇನು ಎಂಬದು ತಿಳಿಯುತ್ತದೆ ಎಂದು ಹೇಳಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸಾಕಷ್ಟು ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಿದೆ. ಉತ್ತಮ ಕೃತಿಗಳನ್ನು ಪ್ರಕಟಿಸಲಿದೆ. ಇಲ್ಲಿವರೆಗೆ ಲೇಖಕರಿಗೆ ಪ್ರಕಟಿತ 25 ಪುಸ್ತಕಗಳನ್ನು ಮಾತ್ರ ನೀಡಲಾಗುತ್ತಿತ್ತು. ಇನ್ನು ಮುಂದೆ ಕೃತಿಯ ಒಟ್ಟು ಮೊತ್ತದ ಶೇ. 15 ರಷ್ಟನ್ನು ಲೇಖಕರಿಗೆ ನೀಡಲಾಗು ವದು. ಇದರಿಂದ ಲೇಖಕರಿಗೆ ಪೆÇ್ರೀತ್ಸಾಹ ನೀಡಿದಂತಾಗು ತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಸಾಕ್ಷ್ಯ ಚಿತ್ರ ಬಿಡುಗಡೆ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಎಸ್ಟಿಎಸ್ಸಿಯಲ್ಲಿ ತಯಾರಿಸಿರುವ ಎರಡು ಸಾಕ್ಷ್ಯಚಿತ್ರಗಳನ್ನು ಆ. 7 ರಂದು ಮಧ್ಯಾಹ್ನ ಬಿಡುಗಡೆಗೊಳಿಸಲಿದೆ ಎಂದು ಅವರು ಇದೇ ಸಂದರ್ಭ ತಿಳಿಸಿದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತ ನಾಡಿ, ಯುವ ಜನತೆಗೆ ಸಾಹಿತ್ಯದ ಬಗ್ಗೆ ಅಭಿರುಚಿ ಮೂಡಿಸುವ ಸಲುವಾಗಿ ಇಂತಹ ಶಿಬಿರವನ್ನು ಹಮ್ಮಿಕೊಂಡಿದೆ. ಅನುಭವಿ ಸಾಹಿತಿಗಳ ಒಡನಾಟ ದಿಂದಾಗಿ ಯುವಕರಿಗೆ ಸಾಹಿತ್ಯಾಸಕ್ತಿ ಬೆಳೆಸಲು ಪ್ರಯತ್ನಿಸಲಾ ಗುತ್ತಿದೆ ಎಂದು ಹೇಳಿದರು.
ಶಿಬಿರದ ಸಂಚಾಲಕರಾದ ಐತಿಚಂಡ ರಮೇಶ್ ಉತ್ತಪ್ಪ ಹಾಗೂ ಮಾದೇಟಿರ ಬೆಳ್ಯಪ್ಪ ಅವರು ಕಾರ್ಯಕ್ರಮದ ಪರಿಚಯ ಮಾಡಿಕೊಟ್ಟರು. ಆ. 6 ರಂದು ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ನಂತರ ಹಿರಿಯ ಸಾಹಿತಿಗಳೊಂದಿಗೆ ಸಂವಾದ ಏರ್ಪಡಿಸಲಾಗಿದೆ. ಅಪರಾಹ್ನ 2.30ಕ್ಕೆ ಆಹ್ವಾನಿತ ಕೊಡವ ಭಾಷೆಯ ಕವಿಗೋಷ್ಠಿ ನಡೆಯಲಿದೆ. ನಂತರ ಸಾಹಿತ್ಯ ಕಲಿಕಾ ಶಿಬಿರ ನಡೆಯಲಿದೆ. ಅಂದು ಸಂಜೆ 5.30ಕ್ಕೆ ಖ್ಯಾತ ಗಾಯಕ ರಿಂದ ಸಂಗೀತ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ಆ. 7 ರಂದು ಮಧ್ಯಾಹ್ನದವರೆಗೆ ಸಾಹಿತ್ಯ ಕಲಿಕಾ ಶಿಬಿರ, ಅಪರಾಹ್ನ ಸಾಕ್ಷ್ಯಚಿತ್ರ ಬಿಡುಗಡೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ವೀರಾಜಪೇಟೆ ಕೊಡವ ಸಮಾಜದ ಉಪಾಧ್ಯಕ್ಷ ಕುಲ್ಲಚಂಡ ಜಯ ಪೂಣಚ್ಚ, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು, ವೀರಾಜಪೇಟೆ ಕೇರಿ ಕೊಡವ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.