ಶ್ರೀಮಂಗಲ, ಡಿ. 28: ಕೊಡವ ಜನಾಂಗಕ್ಕೆ ನೆಲೆ ನೀಡಿರುವ ಹಾಗೂ ಸಂಸ್ಕøತಿಯ ಅವಿಭಾಜ್ಯ ಅಂಗವಾಗಿರುವ ಈ ಮಣ್ಣು ಮತ್ತು ಅಲ್ಪಸಂಖ್ಯಾತ ಕೊಡವ ಜನಾಂಗದ ಸಂತತಿಯನ್ನು ವೃದ್ಧಿಸುವ ಹೆಣ್ಣು ಕೈ ಬಿಟ್ಟು ಹೋಗದಂತೆ ಜನಾಂಗದ ಪ್ರತಿಯೊಬ್ಬರೂ ಜಾಗೃತಿ ವಹಿಸ ಬೇಕೆಂದು ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಸುಳ್ಳಿಮಾಡ ಗೋಪಾಲ್ ತಿಮ್ಮಯ್ಯ ಪ್ರತಿಪಾದಿಸಿದರು.
ಪೊನ್ನಂಪೇಟೆ ಕೊಡವ ಸಮಾಜದ ಆಶ್ರಯದಲ್ಲಿ ಕೊಡವ ಸಾಂಸ್ಕøತಿಕ ದಿನಾಚರಣೆ ಹಾಗೂ ಪುತ್ತರಿ ಕೋಲ್ ಮಂದ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಮಣ್ಣು ಕೃಷಿ ಹಾಗೂ ತೋಟಗಾರಿಕೆ ಮೂಲಕ ಜನಾಂಗಕ್ಕೆ ಆಹಾರ ಹಾಗೂ ಹಣ ಸಂಪಾದಿಸಿ ಕೊಡುತ್ತದೆ. ಹಾಗೆಯೇ ಈ ನೆಲದೊಂದಿಗೆ ಕೊಡವರ ನಾಗರಿಕತೆ ಹಾಗೂ ಸಂಸ್ಕøತಿ ಬೆಸೆದುಕೊಂಡಿದೆ. ಈ ಮಣ್ಣನ್ನು ಎಂದಿಗೂ ಪರಭಾರೆ ಮಾಡದಂತೆ ಎಚ್ಚರ ವಹಿಸಬೇಕು. ಹಾಗೆಯೇ ಹೆಣ್ಣು ಈ ಜನಾಂಗಕ್ಕೆ ಸಂತತಿ ವೃದ್ಧಿಸುವ ಗುಣ ಹೊಂದಿದ್ದು, ಇತ್ತೀಚೆಗೆ ಕೊಡವ ಯುವತಿಯರು ಪ್ರೇಮ ಪಾಶಕ್ಕೆ ಸಿಲುಕಿ ಅಂತರ್ಜಾತಿ ವಿವಾಹವಾಗುತ್ತಿದ್ದಾರೆ. ನಂತರ ಅನೇಕ ರೀತಿಯಲ್ಲಿ ಸಂಕಷ್ಟ ಎದುರಿಸುತ್ತಿರುವ ಬಹಳಷ್ಟು ಉದಾಹರಣೆ ಇದೆ. ಇದರಿಂದ ಕೊಡವ ಯುವಕರಿಗೂ ಮದುವೆಗೆ ಹೆಣ್ಣು ದೊರೆಯದಂತಾಗಿದೆ. ಆದ್ದರಿಂದ ಜನಾಂಗದ ಹಿತದೃಷ್ಟಿಯಿಂದ ಪ್ರತಿಯೊಬ್ಬರೂ ಈ ಮಣ್ಣು ಹಾಗೂ ಹೆಣ್ಣಿನ ಬಗ್ಗೆ ಜಾಗೃತಿಯಾಗಿರಬೇಕೆಂದು ಅಭಿಪ್ರಾಯಪಟ್ಟರು. ಕೊಡವರಿಗೆ ಬುಡಕಟ್ಟು ಜನಾಂಗದ ಸ್ಥಾನ ಮಾನ ನೀಡಲು ಅರ್ಹತೆ ಬಗ್ಗೆ ಸರಕಾರ ಕೈಗೊಂಡಿರುವ ಸರ್ವೆ ಕಾರ್ಯವನ್ನು ಕೊಡಗು ಸೌಹಾರ್ದ ವೇದಿಕೆ ಸಿ.ಎಂ. ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಡೆ ಮಾಡಿರುವದಕ್ಕೆ ಅವರು ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಒಂದು ಜನಾಂಗದ ಹಕ್ಕು ಸೌಲಭ್ಯಗಳನ್ನು ತಡೆ ಮಾಡುತ್ತಿರುವ ಕೊಡಗು ಸೌಹಾರ್ದ ವೇದಿಕೆ, ಜಿಲ್ಲೆಯಲ್ಲಿ ಸೌಹಾರ್ದ ಕದಡುವ ಕೆಲಸ ಮಾಡುತ್ತಿದೆ. ಇದೊಂದು ಪೂರ್ವಾಗ್ರಹ ಪೀಡಿತ ಕೊಡವ ವಿರೋಧಿ ಸಂಘಟನೆಯಾಗಿದೆ. ಇಂತಹ ನಿಲುವನ್ನು ಇವರು ಬದಲಾಯಿಸಿಕೊಳ್ಳದಿದ್ದರೆ ಸೌಹಾರ್ದ ವೇದಿಕೆ ವಿರುದ್ಧ ಪ್ರಬಲ ಹೋರಾಟ ನಡೆಸಲು ಕರೆ ನೀಡಲಾಗುವದು ಎಂದು ಎಚ್ಚರಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಡೀನ್ ಡಾ. ಚೆಪ್ಪುಡಿರ ಜಿ. ಕುಶಾಲಪ್ಪ ಅವರು, ಕೊಡಗಿನ ಹಿರಿಯರ ದೂರದೃಷ್ಟಿಯಿಂದ ದೇವರಕಾಡು. ಕೃಷಿ ಪದ್ಧತಿ ಮೂಲಕ ಪರಿಸರ ಉಳಿದಿದೆ. ನ್ಯಾಯಪೀಠ, ವಿದ್ಯಾಸಂಸ್ಥೆ ಹಾಗೂ ಸಂಸ್ಕøತಿಯನ್ನು ಪೋಷಿಸುವ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಪೊನ್ನಂಪೇಟೆ ಕೊಡವ ಸಮಾಜ ತನ್ನದೇ ಆದ ಮಹತ್ವ ಪಡೆದಿದೆ. ಬೆಂಗಳೂರು ಸೇರಿದಂತೆ ಇತರ ನಗರದಲ್ಲಿರುವ ಕೊಡವ ಜನಾಂಗದ ಯುವಕ, ಯುವತಿಯರಿಗೆ ಜಾಗೃತಿ ಶಿಬಿರ ಮಾಡಿ ಕೊಡಗಿನತ್ತ ಅಭಿಮಾನ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಕೊಡಗಿನಲ್ಲಿ ಉತ್ತಮ ವಾತಾವರಣ, ಮಣ್ಣು ಹಾಗೂ ನೀರು ಚೆನ್ನಾಗಿದ್ದು, ವಿಶ್ವಕ್ಕೆ ಪೈಪೋಟಿ ನೀಡುವಂತಹ ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳನ್ನು ಇಲ್ಲಿ ಬೆಳೆಯಬಹುದು. ಇದಕ್ಕೆ ಉತ್ತಮ ಭವಿಷ್ಯವಿದೆ. ನೂತನ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅಪ್ಪಚ್ಚಕವಿ ಕಾಲೇಜಿನಲ್ಲಿ 6 ತಿಂಗಳ ಪ್ಲಾಂಟೇಷನ್ ಮ್ಯಾನೇಜ್ಮೆಂಟ್ ತರಬೇತಿಯನ್ನು ಜಿಲ್ಲೆಯ ಕೊಡವ ಯುವ ಸಮುದಾಯಕ್ಕೆ ನೀಡಿ, ಕೃಷಿ ತೋಟಗಾರಿಕೆಯಲ್ಲಿ ವಿಸ್ತøತ ಅವಕಾಶದ ಬಗ್ಗೆ ಮಾಹಿತಿ ನೀಡಲು ನಿರ್ಧರಿಸಲಾಗಿದೆ.
ಕೊಡಗು ಉಳಿಯಬೇಕಾದರೆ ತಮ್ಮ ಹಕ್ಕಿನ ಬಗ್ಗೆ ನಾವು ಪ್ರತಿಪಾದಿಸಿ ಪಡೆಯಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಮತ್ತೋರ್ವ ಮುಖ್ಯ ಅತಿಥಿ ನಿವೃತ್ತ ಎ.ಸಿ.ಪಿ. ಬಿದ್ದಂಡ ಅಶೋಕ್ ಕುಮಾರ್ ಮಾತನಾಡಿ, ಕೊಡವ ಜನಾಂಗಕ್ಕೆ ಅಂತರ್ಜಾತಿ ವಿವಾಹ ಆತಂಕಕಾರಿಯಾಗಿದೆ. ಕೊಡವರ ಉತ್ತಮ ಸಂಸ್ಕøತಿ, ಸಂಸ್ಕಾರವನ್ನು ತ್ಯಜಿಸಿ, ಅಂತರ್ಜಾತಿ ವಿವಾಹದ ಮೂಲಕ ಆರ್ಥಿಕವಾಗಿ ಮುಂದುವರಿಯಬಹುದು. ಆದರೆ ಮಾನಸಿಕವಾಗಿ ನೆಮ್ಮದಿಯನ್ನು ಕಳೆದುಕೊಳ್ಳುತ್ತಾರೆ. ನೆಮ್ಮದಿ ಇಲ್ಲದ ಮೇಲೆ ಹಣ ಇದ್ದರೇನು ಎಂದು ಪ್ರಶ್ನಿಸಿದರು. ಕೊಡಗಿನ ಜನರಿಗೆ ಕಾಫಿ ಬೆಳೆಯುವದು ಗೊತ್ತಿದೆ. ಆದರೆ ಅದನ್ನು ಜನರಿಗೆ ಕುಡಿಸಬೇಕು. ಆಂತರಿಕ ಮಾರುಕಟ್ಟೆ ಹೆಚ್ಚಿಸುವ ಮೂಲಕ ತಮ್ಮ ಉತ್ಪನ್ನಕ್ಕೆ ಮಾರುಕಟ್ಟೆ ಕಂಡುಕೊಳ್ಳಬೇಕಾಗಿದೆ ಎಂದು ಅಭಿಪ್ರಾಯ ಪಟ್ಟರು.
ವೇದಿಕೆಯಲ್ಲಿ ಸಮಾಜದ ಉಪಾಧ್ಯಕ್ಷ ಲೆ. ಕರ್ನಲ್.(ನಿವೃತ್ತ) ಅಲೇಮಾಡ ಎನ್. ಕರುಂಬಯ್ಯ, ಕಾರ್ಯದರ್ಶಿ ಚೊಟ್ಟೇಕ್ಮಾಡ ರಾಜೀವ್ ಬೋಪಯ್ಯ, ಸಮಾಜದ ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ಜಂಟಿ ಕಾರ್ಯದರ್ಶಿ ಚೆಪ್ಪುಡಿರ ಪಿ. ಬೋಪಣ್ಣ, ಖಜಾಂಚಿ ಮೂಕಳೆರ ಪಿ. ಲಕ್ಷ್ಮಣ, ಖಾಯಂ ಆಹ್ವಾನಿತ ಸದಸ್ಯ ಚೆಪ್ಪುಡಿರ ಕಿಟ್ಟು ಅಯ್ಯಪ್ಪ, ನಿರ್ದೇಶಕರುಗಳಾದ ಮುಂಡುಮಾಡ ಎಂ. ಗಣೇಶ್ ಮಾದಪ್ಪ, ಕೋದೆಂಗಡ ಟಿ. ನರೇಂದ್ರ, ಪೊನ್ನಿಮಾಡ ಸುರೇಶ್, ಮೂಕಳೇರ ಮಧು ಕುಮಾರ್, ಚೆಪ್ಪುಡಿರ ರೂಪ ಉತ್ತಪ್ಪ, ಕೆಚ್ಚೆಟ್ಟಿರ ಕಾಮುಣಿ ಪೂಣಚ್ಚ, ಮುಕ್ಕಾಟಿರ ಕೆ. ಸರಸು ಮತ್ತಿತರರು ಹಾಜರಿದ್ದರು.