ಮಡಿಕೇರಿ, ಡಿ. 1: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ತನ್ನ ಕಾರ್ಯಯೋಜನೆಯಲ್ಲಿ ಕೊಡವ ಸಾಹಿತ್ಯ, ಸಂಸ್ಕøತಿ, ಜಾನಪದ, ನಾಟಕ ಇತ್ಯಾದಿ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದ್ದು, ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶನದಂತೆ ಮಹಿಳೆಯರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಜನನಿ ಪೊಮ್ಮಕ್ಕಡ ಕೂಟ ಗೋಣಿಕೊಪ್ಪಲು ಮತ್ತು ಕಾವೇರಿ ಕಾಲೇಜು ಗೋಣಿಕೊಪ್ಪದಲ್ಲಿ ತಾ. 11 ರಂದು “ಮಹಿಳಾ ಉತ್ಸವ” (ಪೊಮ್ಮಕ್ಕಡ ನಮ್ಮೆ) ಕಾರ್ಯಕ್ರಮವನ್ನು ಏರ್ಪಡಿಸಲು ತೀರ್ಮಾನಿಸಲಾಗಿದೆ.
ಕಾರ್ಯಕ್ರಮದಲ್ಲಿ ಹೊಸ ಮಹಿಳಾ ಕಲಾವಿದರಿಗೆ ಅವಕಾಶ ನೀಡುವ ಸಲುವಾಗಿ ಕವಿಗೋಷ್ಠಿಯನ್ನು ಏರ್ಪಡಿಸಿದ್ದು, ಆಸಕ್ತ ಕೊಡವ ಮತ್ತು ಕೊಡವ ಭಾಷಿಕ ಜನಾಂಗದ ಕವಯತ್ರಿಯರು ಇದುವರೆಗೆ ಎಲ್ಲಿಯೂ ಪ್ರಕಟವಾಗದ, ಕೊಡವ ಭಾಷೆಯ ಸ್ವ-ರಚಿತ ಕವನಗಳನ್ನು ತಾ. 6 ರೊಳಗಾಗಿ ಅಧ್ಯಕ್ಷರು-ರಿಜಿಸ್ಟ್ರಾರ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಮ್ಯಾನ್ಸ್ ಕಾಂಪೌಂಡ್, ಮಡಿಕೇರಿ. ಈ ಕಚೇರಿಗೆ ತಲಪುವಂತೆ ಕಳುಹಿಸಿಕೊಡಲು ಕೋರಲಾಗಿದೆ.
ಬಂದ ಕವನಗಳನ್ನು ಪರಿಶೀಲಿಸಿ ಸೂಕ್ತ ಎಂದು ಕಂಡುಬಂದ ಕವಯತ್ರಿಯರಿಗೆ ತಾ. 11 ರಂದು ಗೋಣಿಕೊಪ್ಪದಲ್ಲಿ ನಡೆಯಲಿರುವ “ಮಹಿಳಾ ಉತ್ಸವ” (ಪೊಮ್ಮಕ್ಕಡ ನಮ್ಮೆ) ಕಾರ್ಯಕ್ರಮದಲ್ಲಿ ಕವನ ವಾಚಿಸಲು ಅವಕಾಶ ನೀಡಲಾಗುವದು ಎಂದು ಅಕಾಡೆಮಿ ರಿಜಿಸ್ಟ್ರಾರ್ ಉಮರಬ್ಬ ತಿಳಿಸಿದ್ದಾರೆ.