ಮಂಗಳೂರು, ಡಿ. 18: 1956ರಲ್ಲಿ ಕೊಡಗು ಕರ್ನಾಟಕದೊಂದಿಗೆ ವಿಲೀನವಾದ ಮೇಲೆ ಕೊಡವ ಜನಾಂಗದಲ್ಲಿ ದೊಡ್ಡ ಮಟ್ಟದಲ್ಲಿ ಅಧಿಕಾರಿಗಳಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕೊಡವ ಅಧಿಕಾರಿಗಳು ಕಡಿಮೆ ಆಗಿರುವದು ವಿಷಾದನೀಯ. ಕೊಡವರಿಗೆ ಬುಡಕಟ್ಟು ಜನಾಂಗದ ಸ್ಥಾನಮಾನ ನೀಡಲು ಅರ್ಹತೆ ಇದ್ದು, ಇದರ ಬಗ್ಗೆ ಕೊಡವ ಸಂಘಟನೆಯಾದ ಸಿಎನ್ಸಿ ಹಲವು ವರ್ಷಗಳಿಂದ ದೆಹಲಿಗೆ ಬಂದು ಇದರ ಬಗೆ ಒತ್ತಾಯಿಸುತ್ತಾ ಬರುತ್ತಿದೆ. ಸಂಪೂರ್ಣ ಸಹಕಾರ ನೀಡುತ್ತಾ ಬಂದಿರುವದಾಗಿ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಮಂಗಳೂರಿನ ಕೊಡವ ಸಮಾಜದ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನಲ್ಲಿ ನಡೆದ ಪುತ್ತರಿ ನಮ್ಮೆರ ಕೊಡವ ಒತ್ತೋರ್ಮೆ ಕೂಟದಲ್ಲಿ ಎಐಸಿಸಿ ವಕ್ತಾರ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪಾಲಚಂಡ ಬ್ರಿಜೇಶ್ ಕಾಳಪ್ಪ ನುಡಿದರು.
ಕೊಡವರ ಮೂಲದ ಬಗ್ಗೆ ನಮ್ಮೆಲ್ಲ ಒತ್ತಾಯದ ಫಲವಾಗಿ ಕೇಂದ್ರ ಸರಕಾರ ಕೊಡವರ ಕುಲಶಾಸ್ತ್ರ ಅಧ್ಯಯನಕ್ಕೆ ಮನ್ನಣೆ ನೀಡಿ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದ ಫಲವಾಗಿ ಕುಲಶಾಸ್ತ್ರ ಅಧ್ಯಯನ ಕೈಗೊಂಡಿತ್ತು. ಆದರೆ ಕೊಡವ ಜನಾಂಗದಲ್ಲಿ ಹುಟ್ಟಿ ಅನ್ಯ ಜನಾಂಗವನ್ನು
(ಮೊದಲ ಪುಟದಿಂದ) ಓಲೈಸುವ ಕಾರ್ಯವನ್ನೇ ಕೈಗೊಳ್ಳು ತ್ತಿರುವ ಕೊಡವ ನಾಯಕರೊಬ್ಬ ಕೊಡವರೇ ಇಲ್ಲಿನವರಲ್ಲ ವೆಂದುಕೊಂಡು ನಾಯಕರ ಸೋಗಿನವರನ್ನೆಲ್ಲ ಸೇರಿಸಿಕೊಂಡು ಮುಖ್ಯಮಂತಿ ್ರಯವರಿಗೆ ಮನವಿ ಸಲ್ಲಿಸಿರುವದು ಕೊಡವ ಜಾನಾಂಗಕ್ಕೆ ಮಾಡಿರುವ ಅಪಮಾನವೆಂದರು.
ಮಂಗಳೂರಿನ ಬೆಂದೂರಿನ ಸೈಂಟ್ ಸಬಾಸ್ಟಿನ್ನ ಹಾಲ್ನಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಮಂಗಳೂರಿನ ಕೊಡವ ಸಮಾಜದ ಸಂಯುಕ್ತ ಆಶ್ರಯದಲ್ಲಿ ಶನಿವಾರ ಸಂಜೆ 5.30 ಗಂಟೆಗೆ ಪುತ್ತರಿ ಸಂಪ್ರದಾಯದ ಕದಿರು ತೆಗೆದು ನೆರೆಕಟ್ಟಿ ಎಲ್ಲರಿಗೂ ತಂಬುಟ್ಟ್ ವಿತರಿಸಲಾಯಿತು. ಸಂಜೆ 6 ಗಂಟೆಗೆ ಪುತ್ತರಿ ನಮ್ಮೆಯ ಕೊಡವ ಒತ್ತೋರ್ಮೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪಾಲಚಂಡ ಬ್ರಿಜೇಶ್ ಕಾಳಪ್ಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೊಡವರ ಆಚಾರ -ವಿಚಾರ ಪದ್ಧತಿ - ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಕೊಡವ ನಾಯಕರು ಕೊಡವ ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಿದ ಉದ್ದೇಶದ ಫಲವಾಗಿ ಕೊಡವ ಸಾಹಿತ್ಯ ಅಕಾಡೆಮಿ ಅಂದಿನಿಂದ ಇಂದಿನವರೆಗೆ ಉತ್ತಮ ಕಾರ್ಯವನ್ನು ಮಾಡುತ್ತಾ ಬರುತ್ತಿದೆ. ಪ್ರಸ್ತುತ ಅಕಾಡೆಮಿಯು 2 ವರ್ಷ ಪೂರೈಸಿ ಮೂರನೇ ವರ್ಷಕ್ಕೆ ಕಾಲಿಡುತ್ತಿದ್ದು ಕೊಡವರ ಆಚಾರ -ವಿಚಾರ, ಪದ್ಧತಿ -ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಕೊಡಗಿನಾದ್ಯಂತ ಅಲ್ಲದೆ ಕೊಡಗಿನ ಗಡಿಯಲ್ಲೂ ಕೊಡವ ಸಾಹಿತ್ಯವನ್ನು ತಿಳಿಸುವ ಕಾರ್ಯವನ್ನು ಮಾಡಿದೆ ಎಂದರು.
ಮುಂದಿನ ಪೀಳಿಗೆಯವರಿಗೆ ಆಚಾರ -ವಿಚಾರ - ಪದ್ಧತಿ ಪರಂಪರೆಯನ್ನು ಕಲಿಸುವಲ್ಲಿ ಅಕಾಡೆಯು ಹಲವು ಕಾರ್ಯ ಕ್ರಮವನ್ನು ಕೈಗೊಂಡಿದೆ ಎಂದು ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ತಿಳಿಸಿದರು.ಮಂಗಳೂರು ಕೊಡವ ಸಮಾಜದ ಅಧ್ಯಕ್ಷ ಮುಂಜಾಂದಿರ ವೇಣು,ಮಂಗಳೂರಿನ ಕೊಣಾಜೆ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಕೋಡಿರ ಲೋಕೇಶ್, ಕೊಡವ ಸಮಾಜದ ಉಪಾಧ್ಯಕ್ಷ ಕುಲ್ಲೇಟಿರ ರಮಾಸುರೇಶ್, ಗೌರವ ಕಾರ್ಯದರ್ಶಿ ಐನಂಡ ಶತೀಶ್, ಪ್ರೊಫೆಸರ್ ಕೇಕಡ ಬೋಜಮ್ಮ ಚಿಣ್ಣಪ್ಪ, ನಿಟ್ಟೆಯ ವಿದ್ಯಾಸಂಸ್ಥೆಯ ಡಾ.ಮೊಣ್ಣಂಡ ಶೋಭಾ ಈರಪ್ಪ, ಮಂಡುಮಾಡ ಬೆಳ್ಯಪ್ಪ, ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯ ಮಾದೇಟಿರ ಬೆಳ್ಯಪ್ಪ ವೇದಿಕೆಯಲ್ಲಿದ್ದರು.
ಕೊಣಾಜೆ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಕೋಡಿರ ಲೋಕೇಶ್, ನಿಟ್ಟೆ ವಿದ್ಯಾಸಂಸ್ಥೆಯ ಡಾ.ಮೊಣ್ಣಂಡ ಶೋಭಾ ಈರಪ್ಪ ಅವರನ್ನು ಸನ್ಮಾನಿಸಲಾಯಿತು. ಮಂಗಳೂರು ಕೊಡವ ಸಮಾಜದ ಪದಾಧಿಕಾರಿಗಳು, ಸದಸ್ಯರು, ಗಡಿನಾಡ ಅಕಾಡೆಮಿಯ ಪದಾಧಿಕಾರಿಗಳು ಹಾಜರಿದರು.
ಗೋಣಿಕೊಪ್ಪ ಕಾವೇರಿ ಕಾಲೇಜಿನ ವಿದ್ಯಾರ್ಥಿಗಳಿಂದ ಪುತ್ತರಿ ಕೋಲಾಟ್, ಉಮ್ಮತ್ತಾಟ್, ಕತ್ತಿಯಾಟ್ ಪ್ರದರ್ಶನ, ವಿಚಾರ ಮಂಡನೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಅಂಗವಾಗಿ ಕೊಡವರ ಸಾಂಪ್ರದಾಯಿಕ ಅಡುಗೆಯಾದÀ ನೂಪುಟ್ಟ್, ಬೆಲ್ಲತ್ನೀರ್, ತಂಬುಟ್ಟ್ ಹಾಗೂ ವಿಶೇಷ ಭೋಜನವನ್ನು ಏರ್ಪಡಿಸಲಾಗಿತ್ತು.