ಮಡಿಕೇರಿ, ನ. 27: ಮುಸ್ಲಿಂ ಸಮಾಜದ ವಿರುದ್ಧ ಅನ್ಯಾಯಗಳು ನಡೆಯುತ್ತಿದ್ದರೂ ಸರಕಾರ ಯಾವದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಕೊಡಗು ಮುಸ್ಲಿಂ ಒಕ್ಕೂಟದಿಂದ ಡಿ. 3 ರಂದು ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಪದಾಧಿಕಾರಿಗಳು ತಿಳಿಸಿದ್ದಾರೆ.ಕೊಡಗು ಮುಸ್ಲಿಂ ಒಕ್ಕೂಟದ ಸಭೆ ನಗರದ ಲೀ ಕೂರ್ಗ್ ಹೊಟೇಲ್ನಲ್ಲಿ ನಡೆಯಿತು. ಸಭೆಯ ಬಳಿಕ ಒಕ್ಕೂಟದ ಪದಾಧಿಕಾರಿಗಳು ಸುದ್ದಿಗಾರರಿಗೆ ಮಾಹಿತಿ ನೀಡಿದರು.ಒಕ್ಕೂಟದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ ಮಾತನಾಡಿ, ಮುಸ್ಲಿಂ ಸಮಾಜದ ವಿರುದ್ಧ ಅನ್ಯಾಯಗಳಾಗುತ್ತಿದ್ದರೂ ಸರಕಾರ ಯಾವದೇ ಕ್ರಮಕೈಗೊಳ್ಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ಡಿ. 3 ರಂದು ಗದ್ದುಗೆ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಕೈಗೊಂಡು ಗಾಂಧಿ ಮೈದಾನದಲ್ಲಿ ಸಮಾವೇಶ ನಡೆಯಲಿದೆ ಎಂದು ಹೇಳಿದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಮಾತನಾಡಿ, ಸಭೆಯಲ್ಲಿ ಮಸಲ್ಮಾನರ ಆರ್ಥಿಕ ಹಾಗೂ ಸಾಮಾಜಿಕ