ಮಡಿಕೇರಿ, ಜ.27 : ರಾಜ್ಯ ಗೃಹ ಸಚಿವರು ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರು ರಾಜ್ಯದಲ್ಲಿರುವ ಎಲ್ಲಾ ಆದಿವಾಸಿಗಳಿಗೆ ನಿವೇಶನ ನೀಡುವ ಭರವಸೆ ನೀಡಿದ್ದು, ಇದನ್ನು ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ ಸ್ವಾಗತಿಸುತ್ತದೆ ಎಂದು ತಿಳಿಸಿರುವ ಸಮಿತಿಯ ಪ್ರಮುಖ ಎ.ಕೆ. ಸುಬ್ಬಯ್ಯ, ನಿವೇಶನ ಹಂಚುವ ಸಂದರ್ಭ ಕೊಡಗು ಜಿಲ್ಲೆಯನ್ನು ಆದ್ಯತೆಯಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹ ಸಚಿವರ ಭರವಸೆ ಕೇವಲ ಹೇಳಿಕೆಗಷ್ಟೆ ಸೀಮಿತವಾಗ ಬಾರದು, ಸಂಕಷ್ಟದಲ್ಲಿರುವ ಆದಿವಾಸಿಗಳಿಗೆ ನಿವೇಶನ ಹಂಚಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು. ಕೊಡಗು ಜಿಲ್ಲೆಯಲ್ಲಿ ಯಾವದೇ ಆದಿವಾಸಿ ಕುಟುಂಬಕ್ಕೆ ನ್ಯಾಯ ಬದ್ಧವಾಗಿ ಒಂದಿಂಚು ಜಾಗ ಕೂಡ ಸಿಕ್ಕಿಲ್ಲ. ಆದಿವಾಸಿ ಅರಣ್ಯ ಹಕ್ಕು ಕಾಯ್ದೆಯಡಿ ಕೇವಲ ಹಕ್ಕು ಪತ್ರವನ್ನು ನೀಡಲಾಗಿದೆಯೇ ಹೊರತು ಆರ್‍ಟಿಸಿಯನ್ನು ನೀಡಿಲ್ಲ. ಅತೀ ಹೆಚ್ಚು ಕಡೆಗಣಿಸಲ್ಪಟ್ಟ ಮತ್ತು ದೌರ್ಜನ್ಯಕ್ಕೆ ಒಳಗಾದ ಆದಿವಾಸಿಗಳು ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವದ ರಿಂದ ಕೊಡಗಿನ ಆದಿವಾಸಿಗಳಿಗೆ ಮೊದಲು ಭೂಮಿ ಹಂಚಿಕೆಯಾಗ ಬೇಕು. ಈ ನಿಟ್ಟಿನಲ್ಲಿ ದಿಡ್ಡಳ್ಳಿಯ ನಿರಾಶ್ರಿತರನ್ನು ಮೊದಲು ಆದ್ಯತೆಯ ಮೇರೆ ಪರಿಗಣಿಸಬೆÉೀಕೆಂದು ಒತ್ತಾಯಿಸಿದರು.

ದಿಡ್ಡಳ್ಳಿಯಲ್ಲಿ ಗುಡಿಸಲು ಕಟ್ಟಿಕೊಂಡಿದ್ದವರನ್ನು ರಾತೋರಾತ್ರಿ ತೆರವುಗೊಳಿಸುವ ಮೂಲಕ ಅಸಹಾಯಕರ ಮೇಲೆ ಸರ್ಕಾರ ಘೋರ ಕೃತ್ಯವೆಸಗಿದೆ. ಇದರ ಪ್ರಾಯಶ್ಚಿತ್ತವಾಗಿ ದಿಡ್ಡಳ್ಳಿ ನಿರಾಶ್ರಿತರಿಗೆ (ಮೊದಲ ಪುಟದಿಂದ) ಆರೋಪ ಮಾಡುತ್ತಿದ್ದಾರೆ. ಯಾರು ಏನೇ ಅಡ್ಡಿ ಆತಂಕ ಸೃಷ್ಟಿಸಿದರೂ ಹೋರಾಟವನ್ನು ತಡೆಯಲು ಸಾಧ್ಯವಿಲ್ಲವೆಂದು ಎಚ್ಚರಿಕೆ ನೀಡಿದರು. ರಾಯ್ ಡೇವಿಡ್, ಆದಿವಾಸಿ ಮುಖಂಡರಾದ ಜೆ.ಪಿ.ರಾಜು ಹಾಗೂ ಜೆ.ಕೆ.ರಾಮು ಅವರು ದಿಡ್ಡಳ್ಳಿ ನಿರಾಶ್ರಿತರ ವಿರುದ್ಧ ನಡೆದ ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ಹಲವು ಸಂಶಯಗಳನ್ನು ಹುಟ್ಟು ಹಾಕಿದ್ದಾರೆ ಎಂದು ಸುಬ್ಬಯ್ಯ ಟೀಕಿಸಿದರು. ಆರಂಭದಲ್ಲಿ ರಾಯ್ ಡೇವಿಡ್ ಹಾಗೂ ಜೆ.ಕೆ.ರಾಮು ಅವರುಗಳು ದಿಡ್ಡಳ್ಳಿಗೆ ಭೇಟಿ ನೀಡಿ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಇವರ ನೇತೃತ್ವದಲ್ಲೆ ಹೋರಾಟ ಮುಂದುವರಿದಿದ್ದರೂ ನಾವು ಬೆಂಬಲ ನೀಡುತ್ತಿದ್ದೆವು ಎಂದು ಸುಬ್ಬಯ್ಯ ಸಮರ್ಥಿಸಿಕೊಂಡರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಿಳಂಬವಾಗಿಯಾದರೂ ದಿಡ್ಡಳ್ಳಿ ಜನರ ಬೇಡಿಕೆಗಳಿಗೆ ಸ್ಪಂದಿಸುತ್ತಿದೆ. ಇನ್ನು ಮುಂದೆಯೂ ನಿರಾಶ್ರಿತರಿಗೆ ನಿವೇಶನ ಸಿಗುವಲ್ಲಿಯವರೆಗೆ ಅಗತ್ಯ ಅನುದಾನ ನೀಡುವ ಮೂಲಕ ಅಸಹಾಯಕರ ಯೋಗ ಕ್ಷೇಮದ ಬಗ್ಗೆ ಸರ್ಕಾರ ಕಾಳಜಿ ತೋರಬೇಕೆಂದು ಸುಬ್ಬಯ್ಯ ಒತ್ತಾಯಿಸಿದರು.

ಜಿಲ್ಲಾ ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ದಿಡ್ಡಳ್ಳಿ ಆದಿವಾಸಿಗಳ ಪರವಾಗಿ ಹೋರಾಟ ನಡೆಸಲು ಕೆಲವು ಕಾಂಗ್ರೆಸ್ಸಿಗರಿಗೆ ಮನಸ್ಸಿದೆಯಾದರೂ ಪಕ್ಷದಲ್ಲಿ ಇಕ್ಕಟ್ಟಿನ ಪರಿಸ್ಥಿತಿ ಅನುಭವಿಸುತ್ತಿರುವ ಕಾರಣ ಯಾರೂ ಮುಂದೆ ಬರುತ್ತಿಲ್ಲವೆಂದು ಅಭಿಪ್ರಾಯಪಟ್ಟರು. ಕೊಡವ ಲ್ಯಾಂಡ್‍ಗೆ ಬೆಂಬಲ ನೀಡುವವರು, ಬಿಜೆಪಿ ಏಜೆಂಟರು ಹಾಗೂ ಸಮಾಜ ವಿರೋಧಿಗಳು ಕಾಂಗ್ರೆಸ್ ಪಕ್ಷದÀಲ್ಲಿ ಇದ್ದಾರೆ ಎಂದು ಆರೋಪಿಸಿದ ಸುಬ್ಬಯ್ಯ ಆದಿವಾಸಿಗಳಿಗೆ ಅನ್ಯಾಯ ಮಾಡಿದರೆ ಕಾಂಗ್ರೆಸ್ ಅನ್ನು ನಾಶ ಮಾಡುವದು ಹೇಗೆಂದು ತಮಗೆ ತಿಳಿದಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಒಂದು ವಿಚಿತ್ರ ಕೂಟವಾಗಿದ್ದು, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರಿಗೆ ಹತ್ತು ಓಟುಗಳನ್ನು ತರುವ ಸಾಮಥ್ರ್ಯ ಇಲ್ಲವೆಂದು ಟೀಕಿಸಿದರು.

ಶಾಸಕ ಕೆ.ಜಿ. ಬೋಪಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಎ.ಕೆ. ಸುಬ್ಬಯ್ಯ, ನಕ್ಸಲರ ಬಗ್ಗೆ ಮಾತನಾಡುವ ಯೋಗ್ಯತೆ ಬೋಪಯ್ಯ ಅವರಿಗೆ ಇಲ್ಲವೆಂದರು. ನಕ್ಸಲರನ್ನು ಕಾಡಿನಿಂದ ನಾಡಿಗೆ ಕರೆತರುವ ಕೆಲಸವನ್ನು ನಾವು ಮಾಡುತ್ತಿದ್ದು, ನೊಂದಿರುವವರು ನಕ್ಸಲರಾಗಿ ಪರಿವರ್ತನೆ ಯಾಗುವದನ್ನು ತಪ್ಪಿಸುತ್ತಿದ್ದೇವೆ. ಆದರೆ, ಇವರು ನಕ್ಸಲರನ್ನು ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಸಂಚಾಲಕ ಡಿ.ಎಸ್.ನಿರ್ವಾಣಪ್ಪ, ಹೋರಾಟಗಾರರಾದ ಜೆ.ಕೆ. ಮುತ್ತಮ್ಮ, ಸ್ವಾಮಿ ಹಾಗೂ ವಕೀಲ ವಿದ್ಯಾಧರ್ ಉಪಸ್ಥಿತರಿದ್ದರು.